ಮುಂಬಯಿ: ಬಾಲಿವುಡ್ ನಟಿ ಊರ್ವಶಿ ರೌಟೆಲಾ ಅವರ ತಾಯಿ ಮೀರಾ ರೌಟೇಲಾ, ರಿಷಭ್ ಪಂತ್ (Rishabh Pant) ದಾಖಲಾಗಿರುವ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಯ ಚಿತ್ರವನ್ನು ಪ್ರಕಟಿಸಿ ವಿವಾದಕ್ಕೆ ಸಿಲುಕಿದ್ದಾರೆ. ಮಗಳ ಜತೆಗೆ ತಾವು ಕೂಡ ಪಂತ್ ಬೆನ್ನಿಗೆ ಬಿದ್ದು ಪುಕ್ಕಟೆ ಮಜಾ ತಗೊಳ್ಳುತ್ತಿದ್ದಾರೆ. ಅದಕ್ಕೆ ಕ್ರೋಧಗೊಂಡಿರುವ ರಿಷಭ್ ಪಂತ್ ಅಭಿಮಾನಿಗಳು ತಾಯಿ ಹಾಗೂ ಮಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರಿಷಭ್ ಪಂತ್ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ ಬಳಿಕ ಊರ್ವಶಿ ಹಾಗೂ ತಾಯಿ ಮೀರಾ ಪಂತ್ ಕುರಿತು ಅನವಶ್ಯಕ ಪೋಸ್ಟ್ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ಮಲಗಿರುವ ರಿಷಭ್ಗೆ ಕಿರುಕುಳವಾಗುತ್ತಿದೆ. ಪದೇ ಪದೆ ಮಾನಸಿಕ ಸಮಸ್ಯೆ ನೀಡುವ ಅವರಿಬ್ಬರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಅಭಿಮಾನಿಗಳು ಒತ್ತಾಯಿಸಿದ್ದಾರೆ.
ರಿಷಭ್ ಪಂತ್ ಕಾರು ಅವಘಡದಿಂದ ಆಸ್ಪತ್ರೆ ಸೇರಿದ ಬಳಿಕ ಊರ್ವಶಿ ರೌಟೇಲಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಪ್ರಕಟಿಸಿದ್ದರು. ಎರಡು ದಿನದ ಬಳಿಕ ಅವರ ತಾಯಿ ಮೀರಾ ರಿಷಭ್ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಪೋಸ್ಟ್ ಹಾಕಿದ್ದರು. ಈ ವೇಳೆ ಸಾಕಷ್ಟು ಮಂದಿ ಅವರಿಗೆ ಅಭಿನಂದೆ ಸಲ್ಲಿಸಿದ್ದರು.
ಹೆಚ್ಚಿನ ಚಿಕಿತ್ಸೆಗಾಗಿ ರಿಷಭ್ ಅವರನ್ನು ಕೆಲವು ದಿನಗಳ ಹಿಂದೆ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ವೇಳೆ ಊರ್ವಶಿ ಆಸ್ಪತ್ರೆಯ ಫೋಟೋ ಹಾಕಿದ್ದರು. ಇದೀಗ ಅವರ ತಾಯಿ ಮೀರಾ ಕೂಡ ಅದೇ ರೀತಿ ಮಾಡಿದ್ದಾರೆ. ಅವರ ಈ ಕೆಲಸದಿಂದ ನೊಂದಿರುವ ಪಂತ್ ಅಭಿಮಾನಿಗಳು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ | Rishabh Pant | ರಿಷಭ್ ಪಂತ್ ಆರೋಗ್ಯ ವಿಚಾರಿಸಲು ಧೋನಿ ಆಸ್ಪತ್ರೆಗೆ ಭೇಟಿ ನೀಡಿದ್ದು ಸುಳ್ಳಾ? ಹಾಗಾದರೆ ಚಿತ್ರದಲ್ಲಿರುವುದು ಯಾರು?