ನವದೆಹಲಿ: ಮಹಿಳಾ ಕ್ರಿಕೆಟ್ ಆಟಗಾರ್ತಿಯರೊಂದಿಗೆ ಆಶ್ಲೀಲವಾಗಿ ಮಾತನಾಡಿದ ಆಡಿಯೊ ವೈರಲ್ ಆದ ಬೆನ್ನಲ್ಲೇ ಕ್ರಿಕೆಟ್ ತರಬೇತುದಾರರೊಬ್ಬರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ(cricket coach attempts suicide) ಘಟನೆ ಉತ್ತರಾಖಂಡ್ನಲ್ಲಿ ನಡೆದಿದೆ. ಉತ್ತರಾಖಂಡ್ನ ಕ್ರಿಕೆಟ್ ಅಕಾಡೆಮಿಯೊಂದರಲ್ಲಿ ತರಬೇತು ನೀಡುವ ನರೇಂದ್ರ ಶಾ(Narendra Shah) ಅವರು ಮಹಿಳಾ ಆಟಗಾರ್ತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಈ ವಿಚಾರ ಎಲ್ಲಡೆ ತಿಳಿದ ಬಳಿಕ ಅವರು ಆತ್ಮಹತ್ಮೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ನರೇಂದ್ರ ಶಾ ಅವರು ಉತ್ತರಾಖಂಡ್ನಲ್ಲಿ ಕ್ರಿಕೆಟ್ ತರಬೇತಿ ಕೇಂದ್ರವೊಂದನ್ನು ನಡೆಸುತ್ತಿದ್ದಾರೆ. ಈ ತರಬೇತಿ ಕೇಂದ್ರಕ್ಕೆ ಬಂದ ಮಹಿಳಾ ಆಟಗಾರ್ತಿಯೊಬ್ಬಳ ಜತೆಗೆ ಅವರು ಅಶ್ಲೀಲ ಭಾಷೆ ಮತ್ತು ಆಕೆಯ ಜಾತಿಯ ಬಗ್ಗೆ ನಿಂದನೀಯ ಪದಗಳನ್ನು ಬಳಸಿದ್ದರು. ಈ ಬಗ್ಗೆ ಯುವತಿ ತನ್ನ ಮನೆಯವರಿಗೆ ತಿಳಿಸಿದ್ದು, ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದು ಬೆಳಕಿಗೆ ಬಂದ ತಕ್ಷಣ ನರೇಂದ್ರ ಶಾ ಅವರು ವಿಷ ಕುಡಿದು ಆತ್ಮಹತ್ಯೆಗೆ ಶ್ರಮಿಸಿದ್ದಾರೆ. ಈ ಹಿಂದೆಯೂ ಕೋಚ್ ನರೇಂದ್ರ ಅವರ ವಿರುದ್ಧ ಹಲವು ಮಹಿಳಾ ಆಟಗಾರ್ತಿಯರು ಕಿರುಕುಳದ ದೂರು ನೀಡಿದ್ದರು.
ಇದನ್ನೂ ಓದಿ T20 Cricket : ಪಾಕಿಸ್ತಾನ ತಂಡಕ್ಕೆ ಮುಖಭಂಗ, ಅಫಘಾನಿಸ್ತಾನದಿಂದ ನೂತನ ದಾಖಲೆ
ಸದ್ಯ ಯುವತಿಯ ದೂರಿನ ಮೇರೆಗೆ ನರೇಂದ್ರ ಶಾ ವಿರುದ್ಧ ಭಾರತೀಯ ದಂಡ ಸಂಹಿತೆ, ಪೋಕ್ಸೊ ಕಾಯ್ದೆ ಮತ್ತು ಜಾತಿ ನಿಂದನೆಯ ಕಾಯ್ದೆಯಡಿ ಹಲವು ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ವಿಷ ಸೇವಿಸಿದ್ದ ಶಾ ಅವರು ಅಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.