Site icon Vistara News

ಐಪಿಎಲ್​ ಪಂದ್ಯದ ವೇಳೆ ಬೀದಿ ನಾಯಿಗೆ ಬೂಟು ಕಾಲಿನಲ್ಲಿ ಒದ್ದ ಅಧಿಕಾರಿಗಳು; ಬಾಲಿವುಡ್​ ನಟನಿಂದ ವಿರೋಧ

IPL ground staff for kicking dog

ಅಹಮದಾಬಾದ್​: ಭಾನುವಾರ ಐಪಿಎಲ್ ಮುಂಬೈ ಇಂಡಿಯನ್ಸ್(Mumbai Indians)​ ಮತ್ತು ಗುಜರಾತ್​ ವಿರುದ್ಧ ನಡೆದ ಪಂದ್ಯದಲ್ಲಿ ಬೀದಿ ನಾಯಿಯೊಂದು ಮೈದಾನದ ಒಳಗೆ ಪ್ರವೇಶಿಸಿತ್ತು. ಈ ವೇಳೆ ಭದ್ರತಾ ಸಿಬ್ಬಂದಿಗಳು ನಾಯಿಯನ್ನು ಫುಟ್​ಬಾಲ್​ ರೀತಿಯಲ್ಲಿ ಒದ್ದಿರುವ(IPL ground staff for kicking dog) ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದರ ವಿಡಿಯೊ ಕೂಡ ವೈರಲ್(viral video)​ ಆಗಿದ್ದು ಅಧಿಕಾರಿಗಳ ಈ ವರ್ತನೆಗೆ ನಟ ವರುಣ್​ ಧವನ್​(Bollywood star Varun Dhawan) ಸೇರಿ ಅನೇಕರು ಟೀಕೆ ವ್ಯಕ್ತಪಡಿಸಿದ್ದಾರೆ.

‘ಐಪಿಎಲ್ ಪಂದ್ಯದ ವೇಳೆ ನಾಯಿಯನ್ನು ಒದ್ದು ಮನಬಂದಂತೆ ಬೆನ್ನಟ್ಟಿದ ಆಘಾತಕಾರಿ ದೃಶ್ಯ ಕಂಡು ಬೇಸರವಾಯಿತು. ಈ ಘಟನೆಯು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಪ್ರಾಣಿಗಳ ಮೇಲಿನ ದೌರ್ಜನ್ಯದ ಮೇಲೆ ಬೆಳಕು ಚೆಲ್ಲುತ್ತದೆ. ಜನರು ನಗುವುದು ಮತ್ತು ಅಂತಹ ವೀಡಿಯೊಗಳನ್ನು ಎಮೋಜಿಗಳೊಂದಿಗೆ ಹಂಚಿಕೊಳ್ಳುವುದನ್ನು ನೋಡುವುದು ನಿರಾಶಾದಾಯಕವಾಗಿದೆ. ಪ್ರಾಣಿಗಳ ಬಗ್ಗೆ ಹೆಚ್ಚು ಸಹಾನುಭೂತಿ ಬೆಳೆಸೋಣ ಮತ್ತು ಅಂತಹ ಕ್ರೌರ್ಯವನ್ನು ಖಂಡಿಸೋಣ’ ಎಂದು ನೆಟ್ಟಿಗ ವಿದಿತ್ ಶರ್ಮಾ ಅವರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ನಟ ವರುಣ್​ ಧವನ್​ ಕೂಡ ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು ಮೂಕ ಪ್ರಾಣಿಗಳನ್ನು ಈ ರೀತಿ ಶಿಕ್ಷಿಸುವ ನಿಮ್ಮ ಮನಸ್ಥಿತಿ ಯಾವ ಮಟ್ಟದಲ್ಲಿ ಕ್ರೌರ್ಯವನ್ನು ತುಂಬಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ನಾಯಿಯನ್ನು ಹೊರ ಹಾಕುವ ಭರದಲ್ಲಿ ಭದ್ರತಾ ಸಿಬ್ಬಂದಿ ಮನಸೋಇಚ್ಛೆಯಾಗಿ ಬೂಟು ಕಾಲಿನಲ್ಲಿ ಒದ್ದಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ. ಕನಿಷ್ಠ 5ರಿಂದ ಹತ್ತು ಸಿಬ್ಬಂದಿಗಳು ಈ ನಾಯಿಯನ್ನು ಫುಟ್​ಬಾಲ್​ ಒದ್ದಂತೆ ಒದಿಯುತ್ತಿರುವುದು ವಿಡಿಯೊದಲ್ಲಿ ನೋಡಬಹುದಾಗಿದೆ. ಇದಕ್ಕೆ ಅನೇಕ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ IPL 2024 Points Table: ಆರ್​ಸಿಬಿ ಗೆಲುವಿನ ಬಳಿಕ ಅಂಕಪಟ್ಟಿ ಹೇಗಿದೆ?

ಒದ್ದ ಗಾಬರಿಗೆ ನಾಯಿ ನೇರವಾಗಿ ಮೈದಾನಕ್ಕೆ ನುಗ್ಗಿ ಮಾದಾನದ ಸುತ್ತಾ ಓಡಾಡಿದೆ. ಇದೇ ವೇಳೆ ಗ್ಯಾಲರಿಯಲ್ಲಿದ್ದ ರೋಹಿತ್​ ಶರ್ಮ ಅವರ ಅಭಿಮಾನಿಗಳು ನಾಯಿಯನ್ನು ಕಂಡು ಹಾರ್ದಿಕ್​…ಹಾರ್ದಿಕ್​ ಎಂದು ಜೋರಾಗಿ ಕೂಗಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು. ಆದರೆ ನಾಯಿಗೆ ಒದ್ದಿರುವ ವಿಡಿಯೊ ಈಗ ಬೆಳಕಿಗೆ ಬಂದಿದೆ.

ಈ ಪಂದ್ಯದ ಬಗ್ಗೆ ಹೇಳುವುದಾದದರೆ ಅತ್ಯಂತ ರೋಚಕವಾಗಿ ಸಾಗಿದ ಸಣ್ಣ ಮೊತ್ತದ ಹೋರಾಟದಲ್ಲಿ ಮುಂಬೈ ಇಂಡಿಯನ್ಸ್(Mumbai Indians) ತಂಡ ಗುಜರಾತ್​ ಟೈಟಾನ್ಸ್(Gujarat Titans)​ವಿರುದ್ಧ 6 ರನ್​ಗಳ ಸೋಲು ಕಂಡಿತ್ತು. ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಗುಜರಾತ್, ಜಸ್​ಪ್ರೀತ್​ ಬುಮ್ರಾ ಘಾತಕದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾಗಿ 6 ವಿಕೆಟ್​ಗೆ 168 ರನ್​ಗಳ ಸಾಧಾರಣ ಮೊತ್ತ ಬಾರಿಸಿತು. ಜವಾಬಿತ್ತ ಮುಂಬೈ ಇಂಡಿಯನ್ಸ್(MI vs GT) ಭರ್ತಿ 20 ಓವರ್​ ಆಡಿ​ 9 ವಿಕೆಟ್​ ಕಳೆದುಕೊಂಡು 162 ರನ್​ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತ್ತು.

Exit mobile version