ನವ ದೆಹಲಿ: 2021ರ ಫೆಬ್ರವರಿ 16ರಿಂದ ಫಾಸ್ಟ್ಯಾಗ್(Fasttag) ಕಡ್ಡಾಯಗೊಳಿಸಿ ಕೇಂದ್ರ ಸಾರಿಗೆ ಸಚಿವಾಲಯ ಆದೇಶ ಹೊರಡಿಸಿದ ಬಳಿಕ ಅಕ್ಟೋಬರ್ 2022ರವರೆಗೆ ಒಟ್ಟು 6 ಕೋಟಿ ವಿತರಣೆ ನಡೆದಿದೆ ಎಂಬುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಹಿತಿ ನೀಡಿದೆ. ಮಾಹಿತಿ ಹಕ್ಕುಗಳ ಕಾಯಿದೆಯಡಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಗೆ ಪ್ರಾಧಿಕಾರ ಈ ಉತ್ತರ ನೀಡಿದೆ. ಆದರೆ, ಫಾಸ್ಟ್ಯಾಗ್ ಇಲ್ಲದ ಕಾರಣಕ್ಕೆ ದಂಡದ ರೂಪದಲ್ಲಿ ಹೆಚ್ಚುವರಿ ಮೊತ್ತವನ್ನು ಸಂಗ್ರಹಿಸಿದ ಕುರಿತು ಮಾಹಿತಿ ಇಲ್ಲ ಎಂಬುದಾಗಿ ಹೇಳಿದೆ.
ಫಾಸ್ಟ್ಯಾಗ್ ಸರಿಯಾಗಿ ಕೆಲಸ ಮಾಡದೇ ಹೋದರೆ ಅಥವಾ ಇಲ್ಲದಿದ್ದರೆ ಹೆಚ್ಚುವರಿ ಹಣ ಪಾವತಿಸಿ ಮುಂದಕ್ಕೆ ಸಾಗಬೇಕಾಗುತ್ತದೆ. ಈ ಮೊತ್ತದ ಕುರಿತು ಪ್ರಾಧಿಕಾರಕ್ಕೆ ಮಾಹಿತಿ ಇಲ್ಲ ಎಂದು ಹೇಳಲಾಗಿದೆ.
2021ರ ಫೆಬ್ರವರಿಯಲ್ಲಿ ಫಾಸ್ಟ್ರ್ಯಾಗ್ ಕಡ್ಡಾಯವಾಗಿದ್ದರೂ ಅದರ ಅಳವಡಿಕೆಯಲ್ಲಿ ನಿಧಾನವಾಗಿ ಸಾಗಿತ್ತು. ಆದರೆ, ಆದರೆ, ಹೆಚ್ಚುವರಿ ಹಣವನ್ನು ವಸೂಲಿ ಮಾಡಲು ಆರಂಭಿಸಿದ ಬಳಿಕ ಬಹುತೇಕ ಎಲ್ಲ ವಾಹನಗಳು ಫಾಸ್ಟ್ಯಾಗ್ಗಳನ್ನು ಅಳವಡಿಸಿಕೊಂಡಿವೆ.
2021ರ ಫೆಬ್ರವರಿಯಿಂದ 2022ರ ಏಪ್ರಿಲ್ ತನಕ 39, 118. 15 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂಬುದಾಗಿ ಮಾಹಿತಿ ನೀಡಲಾಗಿದೆ. ಅದೇ ರೀತಿ 2022 ಹಣಕಾಸು ವರ್ಷದಲ್ಲಿ 34,535 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಪ್ರಸ್ತುತ 24 ಬ್ಯಾಂಕುಗಳು ಫಾಸ್ಟ್ಯಾಗ್ ವಿತರಣೆ ಮಾಡುತ್ತಿವೆ. ಆದರೆ, ಕೆಲವೊಂದು ಬ್ಯಾಂಕ್ಗಳ ಫಾಸ್ಟ್ಯಾಗ್ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳು ಇವೆ.
ಇದನ್ನೂ ಓದಿ | ಫಾಸ್ಟ್ಯಾಗ್ ಇಲ್ಲದೆ ಟೋಲ್ ಗೇಟ್‌ನಲ್ಲಿ ಗಂಟೆಗಟ್ಟಲೆ ನಿಂತ ಸಾರಿಗೆ ಬಸ್; ಪ್ರಯಾಣಿಕರ ಪರದಾಟ