Site icon Vistara News

ind vs wi : ವಿಂಡೀಸ್ ವಿರುದ್ಧ ಸೋಲಿನ ಬಳಿಕ ಟೀಮ್ ಇಂಡಿಯಾ ಬೆಂಡೆತ್ತಿದ ವೆಂಕಟೇಶ್​ ಪ್ರಸಾದ್​

Team India

ಬೆಂಗಳೂರು: ಫ್ಲೋರಿಡಾದಲ್ಲಿ ಭಾನುವಾರ (ಆಗಸ್ಟ್ 13) ನಡೆದ ಸರಣಿ ನಿರ್ಣಾಯಕ ಐದನೇ ಟಿ 20 ಪಂದ್ಯದಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಎಂಟು ವಿಕೆಟ್​ಗಳ ಹೀನಾಯ ಸೋಲನ್ನು ಅನುಭವಿಸಿತು. ಸೂರ್ಯ ಕುಮಾರ್ ಯಾದವ್ ಅವರ 45 ಎಸೆತಗಳಲ್ಲಿ 61 ರನ್​​ಗಳ ನೆರವಿನಿಂದ ಭಾರತ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್​ ಗಳಿಸಿತ್ತು. ಇದಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ ಆರಂಭಿಕ ಆಟಗಾರ ಬ್ರೆಂಡನ್​ ಕಿಂಗ್ ಅವರ 55 ಎಸೆತಗಳಲ್ಲಿ ಅಜೇಯ 85 ರನ್ ಮತ್ತು ವಿಕೆಟ್ ಕೀಪರ್- ಬ್ಯಾಟರ್​​ ನಿಕೋಲಸ್ ಪೂರನ್ ಅವರ 35 ಎಸೆತಗಳಲ್ಲಿ 47 ರನ್​ಗಳ ನೆರವಿನಿಂದ ಎರಡು ಓವರ್​ಗಳು ಬಾಕಿ ಇರುವಾಗಲೇ ಗುರಿಯನ್ನು ತಲುಪಿತು.

ಫಲಿತಾಂಶದ ಬಗ್ಗೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ತೀವ್ರ ದಾಳಿ ನಡೆಸಿದ್ದಾರೆ. ವೈಟ್-ಬಾಲ್ ಕ್ರಿಕೆಟ್​ನಲ್ಲಿ ಭಾರತ ವಿಶ್ವದ ಸಾಮಾನ್ಯ ತಂಡ ಎಂದು ಕರೆದಿದ್ದಾರೆ.

ಭಾರತವು ಕೆಲವು ಸಮಯದಿಂದ ಸೀಮಿತ ಓವರ್​ಗಳ ಮಾದರಿಯಲ್ಲಿ ಸಾಮಾನ್ಯ ತಂಡವಾಗಿದೆ. ಕೆಲವು ತಿಂಗಳ ಹಿಂದೆ ಟಿ 20 ವಿಶ್ವ ಕಪ್​ಗೆ ಅರ್ಹತೆ ಪಡೆಯಲು ವಿಫಲವಾದ ವೆಸ್ಟ್ ಇಂಡೀಸ್ ತಂಡಕ್ಕೆ ತಲೆಬಾಗಿದ್ದಾರೆ. ಏಕದಿನ ಸರಣಿಯಲ್ಲೂ ಬಾಂಗ್ಲಾದೇಶ ವಿರುದ್ಧ ಸೋತಿದ್ದೆವು. ಆಟಗಾರರು ಮಾಮೂಲಿ ಹೇಳಿಕೆಗಳನ್ನು ನೀಡುವ ಬದಲು ಅವರು ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದು ಪ್ರಸಾದ್ ಟ್ವೀಟ್​ ಮಾಡಿದ್ದಾರೆ.

ಭಾರತವು ತಮ್ಮ ಕೌಶಲ್ಯ ವೃದ್ಧಿಸಿಕೊಳ್ಳಬೇಕಾಗಿದೆ. ತಂಡಕ್ಕೆ ಗೆಲುವಿನ ಹಸಿವು ಮತ್ತು ತೀವ್ರತೆಯ ಕೊರತೆ ಇದೆ. ನಾಯಕ ಕೂಡ ಕೌಶಲ ಕೊರತೆ ಎದುರಿಸುತ್ತಿದ್ದರು. ಬೌಲರ್​ಗಳೂ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ, ಬ್ಯಾಟರ್​ಗಳು ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಆದರೆ ಕೆಲವು ಆಟಗಾರರು ಉತ್ತಮವಾಗಿ ಆಡುತ್ತಿಲ್ಲ. ಅವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಯಾಕೆಂದರೆ ಅವರು ನಿಮ್ಮ ನೆಚ್ಚಿನ ಆಟಗಾರ. ಆದರೆ ಇದರಿಂದ ತಂಡಕ್ಕೆ ತೊಂದರೆ ಗ್ಯಾರಂಟಿ ಎಂದು ಹೇಳಿದ್ದಾರೆ.

ಪ್ರತಿಭೆಗಳ ಅನ್ವೇಷಣೆಗಾಗಿ ಕಳಪೆ ಪ್ರದರ್ಶನವನ್ನು ನಿರಾಕರಿಸಿದ ನಾಯಕ ಮತ್ತು ತಂಡದ ನಿರ್ವಹಣೆಯನ್ನು ಪ್ರಸಾದ್​ ತರಾಟೆಗೆ ತೆಗೆದುಕೊಂಡಿದ್ದಾರೆ. ಕೇವಲ 50 ಓವರ್​ಗಳ ಕ್ರಿಕೆಟ್​ ಮಾತ್ರವಲ್ಲ, ಕಳೆದ ಅಕ್ಟೋಬರ್-ನವೆಂಬರ್​​ನಲ್ಲಿ ನಡೆದ ಟಿ 20 ವಿಶ್ವ ಕಪ್​ಗೆ ಅರ್ಹತೆ ಪಡೆಯಲು ವೆಸ್ಟ್ ಇಂಡೀಸ್ ವಿಫಲವಾಗಿತ್ತು. ಅವರ ವಿರುದ್ಧ ಆಡುವಾಗ ಪ್ರಯೋಗದ ನೆಪದಲ್ಲಿ ಭಾರತವು ಕಳಪೆ ಪ್ರದರ್ಶನ ನೀಡುವುದನ್ನು ಮತ್ತು ಅದನ್ನು ಸಮರ್ಥಿಸಿಕೊಳ್ಳುವುದು ನೋವಿನ ಸಂಗತ. ಗೆಲುವಿನ ಹಸಿವು, ತೀವ್ರತೆ ಕಾಣೆಯಾಗಿದೆ. ನಾವು ಭ್ರಮೆಯಲ್ಲಿ ಬದುಕುತ್ತಿದ್ದೇವೆ” ಎಂದು ಪ್ರಸಾದ್ ಬರೆದುಕೊಂಡಿದ್ದಾರೆ.

ತಂಡದ ಎಲ್ಲರೂ ಸೋಲಿಗೆ ಜವಾಬ್ದಾರರಾಗಿರುತ್ತಾರೆ ಮತ್ತು ಉತ್ತರದಾಯಿಗಳು. ಪ್ರಯೋಗ ಎಂಬ ಪದವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಆಯ್ಕೆಯಲ್ಲಿ ಸ್ಥಿರತೆ ಇಲ್ಲ ಅನಗತ್ಯ ವಿಷಯಗಳು ಹೆಚ್ಚು ನಡೆಯುತ್ತಿವೆ ಎಂದು ಪ್ರಸಾದ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : INDvsAUS : ಗಾಯಗೊಂಡ ಶ್ರೇಯಸ್ ಅಯ್ಯರ್​ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಅಲಭ್ಯ

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ, ಭಾರತವು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತು. ಆದರೆ ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ 3-2 ರಿಂದ ಕಳೆದುಕೊಂಡಿದೆ. ಇದೀಗ ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಭಾರತ ತಂಡ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ.

ಐರ್ಲೆಂಡ್ ಪ್ರವಾಸದ ನಂತರ, ಭಾರತವು ಏಷ್ಯಾ ಕಪ್ 2023 ಮತ್ತು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ನಂತಹ ಪ್ರಮುಖ ಟೂರ್ನಿಗಳಲ್ಲಿ ಭಾಗವಹಿಸಲಿದೆ.

Exit mobile version