ಚೆನ್ನೈ : ಹಿರಿಯ ಕ್ರಿಕೆಟಿಗ ಹಾಗೂ ಬಲಗೈ ಬ್ಯಾಟ್ಸ್ಮನ್ ಮುರಳಿ ವಿಜಯ್ ಸೋಮವಾರ (ಜನವರಿ 30ರಂದು) ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಜಾಗತಿಕ ಕ್ರಿಕೆಟ್ ಲೀಗ್ಗಳಲ್ಲಿ ಪಾಲ್ಗೊಳ್ಳುವುದು ಹಾಗೂ ಕ್ರೀಡಾ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ನಿವೃತ್ತಿ ಘೋಷಿಸಿದ್ದೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ಅವಕಾಶಕ್ಕಾಗಿ ಕಾದಿದ್ದ ಅವರು ನಿರೀಕ್ಷೆ ಹುಸಿಯಾದ ಹಿನ್ನೆಲೆಯಲ್ಲಿ ವಿದಾಯದ ತೀರ್ಮಾನ ತಳೆದಿದ್ದಾರೆ.
ಎಲ್ಲ ಮಾದರಿಯ ಕ್ರಿಕೆಟ್ಗೆ ನಾನು ಇಂದು ವಿದಾಯ ಹೇಳುತ್ತಿದ್ದೇನೆ. 2002ರಿಂದ 2018ರ ಅವಧಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವುದು ನನ್ನ ಜೀವನದ ಅತ್ಯಂತ ಸಂಭ್ರಮದ ಕ್ಷಣವಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಲಭಿಸುವ ಅತ್ಯಂತ ದೊಡ್ಡ ಗೌರವ ಇದಾಗಿದೆ ಎಂದು ಅವರು ಮುರಳಿ ವಿಜಯ್ ಹೇಳಿದ್ದಾರೆ.
ನನಗೆ ಕ್ರಿಕೆಟ್ ಆಡಲು ಅವಕಾಶ ಕಲ್ಪಿಸಿದ ಬಿಸಿಸಿಐ, ತಮಿಳುನಾಡು ಕ್ರಿಕೆಟ್ ಸಂಸ್ಥೆ ಹಾಗೂ ಐಪಿಎಲ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗೆ ಧನ್ಯವಾದಗಳು ಎಂದು ವಿಜಯ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : David Warner | ನಿವೃತ್ತಿಯ ಸುಳಿವು ಕೊಟ್ಟ ಡೇವಿಡ್ ವಾರ್ನರ್; ಯಾವಾಗ ವಿದಾಯ ಹೇಳುತ್ತಾರೆ?
ಆರಂಭಿಕ ಬ್ಯಾಟರ್ ಮುರಳಿ ವಿಜಯ್ ಅವರು ಭಾರತ ತಂಡದ ಪರವಾಗಿ 61 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅದೇ ರೀತಿ 17 ಏಕ ದಿನ ಪಂದ್ಯ ಹಾಗೂ 9 ಟಿ20 ಪಂದ್ಯಗಳನ್ನು ಅವರು ಆಡಿದ್ದಾರೆ. 2008ರಲ್ಲಿ ಅವರು ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದರು. 2018ರಲ್ಲಿ ಕೊನೇ ಬಾರಿ ಆಸ್ಟ್ರೇಲಿಯಾ ತಂಡದ ವಿರುದ್ಧ ಆಡಿದ್ದರು. ಪರ್ತ್ನಲ್ಲಿ ನಡೆದ ಆ ಪಂದ್ಯದ ಬಳಿಕ ಅವರು ಟೀಮ್ ಇಂಡಿಯಾಗೆ ಆಯ್ಕೆಯಾಗಿರಲಿಲ್ಲ.