Site icon Vistara News

ವಿಜಯ್ ಹಜಾರೆ ಟ್ರೋಫಿ; ಕರ್ನಾಟಕ ತಂಡಕ್ಕೆ ಜಮ್ಮು-ಕಾಶ್ಮೀರ ಸವಾಲು

Mayank Aggarwal is critically ill; Treatment in ICU

ಅಹಮದಾಬಾದ್​: ದೇಶೀಯ ಏಕದಿನ ಕ್ರಿಕೆಟ್​ ಟೂರ್ನಿಯಾದ ವಿಜಯ್ ಹಜಾರೆ ಟ್ರೋಫಿ(Vijay Hazare Trophy 2023) ಗುರುವಾರದಿಂದ ಆರಂಭಗೊಳ್ಳಲಿದೆ. ಕರ್ನಾಟಕ ತಂಡ ಮೊದಲ ಪಂದ್ಯದಲ್ಲಿ ಜಮ್ಮು-ಕಾಶ್ಮೀರದ(Karnataka vs Jammu & Kashmir) ವಿರುದ್ಧ ಆಡಲಿದೆ. ಈ ಪಂದ್ಯ ನರೇಂದ್ರ ಮೋದಿ ಕ್ರಿಕಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ರಾಜ್ಯ ತಂಡವನ್ನು ಮಯಾಂಕ್​ ಅಗರ್ವಾಲ್(Mayank Agarwal)​ ಮುನ್ನಡೆಸಲಿದ್ದಾರೆ.

ಕರ್ನಾಟಕ ತಂಡವು ಈ ‘ಸಿ’ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಯುವ ಆಟಗಾರರಾದ ಕೆ. ಶ್ರೀಜಿತ್ ಹಾಗೂ ಶುಭಾಂಗ್ ಹೆಗ್ಡೆ, ಅನುಭವಿಗಳಾದ ಮನೀಷ್ ಪಾಂಡೆ, ಕೆ. ಗೌತಮ್, ಆರ್. ಸಮರ್ಥ್ ಮತ್ತು ನಾಯಕ ಅಗರ್ವಾಲ್​ ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವಿದ್ವತ್ ಕಾವೇರಪ್ಪ, ವೈಶಾಖ್​ ವಿಜಯಕುಮಾರ್ ಮತ್ತು ವಾಸುಕಿ ಕೌಶಿಕ್ ಪ್ರಮುಖ ಅಸ್ತ್ರವಾಗಿದ್ದಾರೆ. ಕಳೆದ ದೇಶಿ ಋತುವಿನಲ್ಲಿ ಈ ಮೂವರು ಬೌಲರ್‌ಗಳು ಶ್ರೇಷ್ಠ ಮಟ್ಟದ ಬೌಲಿಂಗ್​ ಪ್ರದರ್ಶನ ತೋರಿದ್ದರು. ವೈಶಾಖ್ ಈ ಬಾರಿ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡಿದ ಅನುಭವ ಕೂಡ ಹೊಂದಿದ್ದಾರೆ.

ಪ್ರಸಿದ್ಧ ಕೃಷ್ಣ ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡದ ಕಾರಣ ಈ ಟೂರ್ನಿಗೆ ಅಲಭ್ಯರಾಗಿದ್ದಾರೆ. ಮನೋಜ್ ಬಾಂಢಗೆ, ದೇವದತ್ತ ಪಡಿಕ್ಕಲ್​ ಎಡಗೈ ಸ್ಪಿನ್ನರ್ ಜೆ. ಸುಚಿತ್ ಹಾಗೂ ಅಭಿನವ್ ಮನೋಹರ್ ಕೂಡ ತಂಡದಲ್ಲಿದ್ದಾರೆ. ರಾಜ್ಯ ತಂಡ ತೊರೆದ ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್, ಕರುಣ್ ನಾಯರ್ ಈ ಬಾರಿ ಪರ ರಾಜ್ಯದ ತಂಡದ ಪರ ಆಡಲಿದ್ದಾರೆ.

2 ವರ್ಷಗಳಿಂದ ಕಪ್​ ಗೆದ್ದಿಲ್ಲ

ಕರ್ನಾಟಕ ತಂಡ 2019-20ರಲ್ಲಿ ಕಪ್​ ಗೆದ್ದ ಬಳಿಕ ಮತ್ತೆ ಪ್ರಶಸ್ತಿ ಗೆದ್ದಿಲ್ಲ. ಟೂರ್ನಿಯ ಇತಿಹಾಸದಲ್ಲಿ ಕರ್ನಾಟಕ ಒಟ್ಟು ನಾಲ್ಕು ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಈ ಬಾರಿ ತಂಡದ ಆಟಗಾರ ಬಲವನ್ನು ನೋಡುವಾಗ ಕಪ್​ ಗೆಲ್ಲುವ ವಿಶ್ವಾಸವಿದೆ. ಜಮ್ಮು-ಕಾಶ್ಮೀರ ತಂಡದ ಪರ ಘಾತಕ ವೇಗಿ ಉಮ್ರಾನ್ ಮಲಿಕ್ ಮತ್ತು ಹಾರ್ಡ್​ ಹಿಟ್ಟರ್​ ಅಬ್ದುಲ್ ಸಮದ್ ತೀವ್ರ ಪೈಪೋಟಿ ಒಡ್ಡುವ ಸಾಧ್ಯತೆ ಇದೆ.

ಇದನ್ನೂ ಓದಿ ICC ODI Rankings: ಅಗ್ರಸ್ಥಾನದ ಸನಿಹಕ್ಕೆ ವಿರಾಟ್​​ ಕೊಹ್ಲಿ; ಸಿರಾಜ್​ ಮತ್ತೆ ಕುಸಿತ

ಕರ್ನಾಟಕದ ಪಂದ್ಯಗಳು

ಕರ್ನಾಟಕ ತಂಡವು ಒಟ್ಟು 7 ಪಂದ್ಯಗಳನ್ನು ಆಡಲಿದೆ. ಎದುರಾಳಿಗಳು ಜಮ್ಮು-ಕಾಶ್ಮೀರ (ನ.23), ಉತ್ತರಾಖಂಡ (ನ.25), ದೆಹಲಿ (ನ.27), ಬಿಹಾರ (ನ.29), ಚಂಡೀಗಡ (ಡಿ.1), ಹರಿಯಾಣ (ಡಿ.3) ಮತ್ತು ಮಿಜೋರಾಂ (ಡಿ.5) ವಿರುದ್ಧ ಆಡಲಿದೆ.

ಕೇರಳ ತಂಡದ ಪರ ಶ್ರೇಯಸ್ ಗೋಪಾಲ್ ಕಣಕ್ಕೆ

ರಾಜ್ಯ ತಂಡ ತೊರೆದ ಶ್ರೇಯಸ್ ಗೋಪಾಲ್ ಅವರು ಕೇರಳ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕೇರಳ ತಂಡವು ಮೊದಲ ಪಂದ್ಯದಲ್ಲಿ ಬೆಂಗಳೂರು ಹೊರವಲಯದ ಆಲೂರಿನಲ್ಲಿ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ. ಆಸೀಸ್​ ಸರಣಿಯಲ್ಲಿ ಅವಕಾಶ ಸಿಗದ ಸಂಜು ಸ್ಯಾಮ್ಸನ್​ ಅವರು ಈ ಕೆರಳ ತಂಡವನ್ನು ಮುನ್ನಡೆಸಲಿದ್ದಾರೆ. ಸೌರಾಷ್ಟ್ರಕ್ಕೆ ಜಯದೇವ್ ಉನದ್ಕತ್ ನಾಯಕರಾಗಿದ್ದಾರೆ. ಎ ಗುಂಪಿನ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ.

Exit mobile version