Site icon Vistara News

BBC ISWOTY Award: ಬಿಬಿಸಿ ಪ್ರಶಸ್ತಿಗೆ ವಿನೇಶ್​ ಪೋಗಟ್​, ಸಾಕ್ಷಿ ಮಲಿಕ್​ ನಾಮನಿರ್ದೇಶನ

Sakshi Malik

#image_title

ನವದೆಹಲಿ: ಭಾರತದ ಸ್ಟಾರ್​ ಕುಸ್ತಿಪಟುಗಳಾದ ವಿನೇಶ್​ ಪೋಗಟ್(Vinesh Phogat) ಹಾಗೂ ಸಾಕ್ಷಿ ಮಲಿಕ್(Sakshi Malik) ಅವರನ್ನು ಬಿಬಿಸಿ ಭಾರತದ ಮಹಿಳಾ ಕ್ರೀಡಾಪಟು ವಾರ್ಷಿಕ ಪ್ರಶಸ್ತಿಗೆ(BBC ISWOTY Award) ನಾಮನಿರ್ದೇಶನ ಮಾಡಲಾಗಿದೆ.

ಈ ಪಟ್ಟಿಯಲ್ಲಿ ಟೋಕಿಯೊ ಒಲಿಂಪಿಕ್ಸ್​ ಬೆಳ್ಳಿ ಪದಕ ವಿಜೇತೆ, ವೇಟ್‌ಲಿಫ್ಟರ್ ಮೀರಾಬಾಯಿ ಚಾನು, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಮತ್ತು ಬಾಕ್ಸಿಂಗ್ ತಾರೆ ನಿಖತ್ ಜರೀನ್ ಕೂಡ ನಾಮನಿರ್ದೇಶನಗೊಂಡಿದ್ದಾರೆ.

ನಿರ್ಣಾಯಕರ ತಂಡದಲ್ಲಿ ಕ್ರೀಡಾ ಪತ್ರಕರ್ತರು ಹಾಗೂ ಲೇಖಕರೂ ಕೂಡ ಇದ್ದು, ಆಟಗಾರರ ಸಾಧನೆಗಳ ಆಧಾರದಲ್ಲಿ ಅವರು ಮತ ಹಾಕಿದ್ದಾರೆ. ಸೋಮವಾರದಿಂದ ಸಾರ್ವಜನಿಕ ಮತ ನೀಡಿಕೆ ಪ್ರಕ್ರಿಯೆ ಆರಂಭವಾಗಲಿದೆ. ಫೆಬ್ರುವರಿ 20ರ ಮಧ್ಯರಾತ್ರಿಯವರೆಗೂ ವೋಟಿಂಗ್‌ಗೆ ಅವಕಾಶವಿದೆ. ಮಾರ್ಚ್ 5ರಂದು ವಿಜೇತರನ್ನು ಘೋಷಿಸಲಾಗುವುದು.

ಈ ವರ್ಷದಿಂದ ಬಿಬಿಸಿ ಭಾರತೀಯ ಪ್ಯಾರ ಕ್ರೀಡಾಮಹಿಳೆ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿದೆ ಎಂದು ಬಿಬಿಸಿ ನ್ಯೂಸ್ ಭಾರತದ ಮುಖ್ಯಸ್ಥೆ ರೂಪಾ ಝಾ ತಿಳಿಸಿದ್ದಾರೆ.

ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ವಿನೇಶ್​ ಪೋಗಟ್​ ಗಂಭಿರ ಆರೋಪ ಮಾಡಿ ಪ್ರತಿಭಟನೆ ಮಾಡಿದ್ದರು. ಈ ಧರಣಿಯಲ್ಲಿ ಸಾಕ್ಷಿ ಮಲಿಕ್​ ಕೂಡ ಭಾಗವಹಿಸಿದ್ದರು. ಇದೀಗ ವಾರ್ಷಿಕ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

Exit mobile version