Site icon Vistara News

Vinesh Phogat: ವಿನೇಶ್​ ವಿರುದ್ಧ ಸೆಮಿಯಲ್ಲಿ ಹೀನಾಯ ಸೋಲು ಕಂಡರೂ ಫೈನಲ್​ ಪ್ರವೇಶಿಸಿದ ಕ್ಯೂಬಾದ ಕುಸ್ತಿಪಟು

Vinesh Phogat

Vinesh Phogat: Cuban Yusneylis Guzman Lopez to contest for gold after Vinesh Phogat’s disqualification at Paris Olympics 2024

ಪ್ಯಾರಿಸ್​: ಕೆಲವೊಮ್ಮೆ ಅದೃಷ್ಟ ಎನ್ನುವುದು ನಮಗೆ ಹೇಗೆ ಒಲಿದು ಬರುತ್ತದೆ ಎಂದು ಯಾರಿಗೂ ಊಹಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಇದೇ ರೀತಿಯ ಒಂದು ಘಟನೆಯೊಂದು ಈ ಬಾರಿಯ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿಯೂ(paris olympics) ನಡೆದಿದೆ. ಮಂಗಳವಾರ ನಡೆದಿದ್ದ ಮಹಿಳಾ 50 ಕೆಜಿ ವಿಭಾಗದ ಸೆಮಿಫೈನಲ್​ ಪಂದ್ಯದಲ್ಲಿ ಕ್ಯೂಬಾದ ಯಸ್ನಿಲಿಸ್​ ಗುಜ್ಮನ್​ ಲೋಪೆಜ್(Yusneylys Guzmán) ಭಾರತದ ವಿನೇಶ್​ ಫೋಗಟ್(Vinesh Phogat)​ ವಿರುದ್ಧ 5-0 ಅಂತರದಿಂದ ಹೀನಾಯವಾಗಿ ಸೋಲು ಕಂಡು ಕಣ್ಣೀರು ಸುರಿಸಿದ್ದರು. ಇದೀಗ ಅವರಿಗೆ ಅದೃಷ್ಟವೊಂದು ಕೈ ಹಿಡಿದು ಫೈನಲ್​ ಆಡುವ ಸೌಭಾಗ್ಯ ಒದಗಿ ಬಂದಿದೆ.

ಹೌದು, ಸೆಮಿಫೈನಲ್​ನಲ್ಲಿ ಸೋಲು ಕಂಡಿದ್ದ ಯಸ್ನಿಲಿಸ್​ ಗುಜ್ಮನ್ ಇಂದು ಕಂಚಿನ ಪದಕಕ್ಕೆ ಸ್ಪರ್ಧಿಸಬೇಕಿತ್ತು. ಈ ಪಂದ್ಯ ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭವಾಗಬೇಕು ಎನ್ನುವಷ್ಟರಲ್ಲಿ ಯಸ್ನಿಲಿಸ್​ ಗುಜ್ಮನ್​ಗೆ ಫೈನಲ್​ ಪಂದ್ಯದ ಕರೆ ಬಂದಿದೆ. ಇದಕ್ಕೆ ಕಾರಣ ವಿನೇಶ್ ಫೋಗಟ್(Vinesh Phogat) ಅವರನ್ನು ಅನರ್ಹಗೊಳಿಸಿದ್ದು. 50 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶ್​ ಫೈನಲ್ ಪಂದ್ಯಕ್ಕೂ ಮುನ್ನ ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚು ಇರುವ ಕಾರಣ ಅವರನ್ನು ಫೈನಲ್​ನಿಂದ ಅನರ್ಹ ಮಾಡಲಾಗಿದೆ. ಹೀಗಾಗಿ ಫೈನಲ್​ ಆಡುವ ಅವಕಾಶ ಗುಜ್ಮನ್​ಗೆ ಲಭಿಸಿತು. ಫೈನಲ್​ನಲ್ಲಿ ಗುಜ್ಮನ್ ಅವರು​ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಅಮೆರಿಕದ ಸೆರಾ ಹಿಲ್ದಿಬ್ರೇಟ್‌ ಸವಾಲು ಎದುರಿಸಲಿದ್ದಾರೆ. ಪಂದ್ಯ ರಾತ್ರಿ 11. 23ಕ್ಕೆ ನಡೆಯಲಿದೆ.

ಇದನ್ನೂ ಓದಿ Vinesh Phogat Disqualified: ತೂಕ ವಿಭಾಗ ಬದಲಿಸಿದ್ದೇ ವಿನೇಶ್​ ಹಿನ್ನಡೆಗೆ ಕಾರಣವಾಯಿತೇ?

ಇಂದು ಮುಂಜಾನೆ ನಡೆದ ತೂಕ ಪರಿಶೀಲನೆಯ ವೇಳೆ ವಿನೇಶ್‌ 50 ಕಿಲೋಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದರು. ಸ್ಪರ್ಧೆಯ ನಿಯಮಗಳ ಪ್ರಕಾರ ಫೋಗಟ್ ಇಂದು ಫೈನಲ್‌ನಲ್ಲಿ ಸ್ಪರ್ಧೀಸುವಂತಿಲ್ಲ. 50 ಕೆಜಿ ವಿಭಾಗದಲ್ಲಿ ಕೇವಲ ಚಿನ್ನ ಮತ್ತು ಕಂಚಿನ ಪದಕ ವಿಜೇತರಿರುತ್ತಾರೆ. ಮಂಗಳವಾರವೂ ಪಂದ್ಯಕ್ಕೆ ಮೊದಲು ವಿನೇಶ್‌ ತೂಕ ಅಳೆಯಲಾಗಿತ್ತು. ಆದರೆ ನಿಯಮದ ಪ್ರಕಾರ ಕುಸ್ತಿಪಟುಗಳು ಸ್ಪರ್ಧೆಯ ಎರಡೂ ದಿನಗಳಲ್ಲಿ ತಮ್ಮ ತೂಕದ ವಿಭಾಗದಲ್ಲಿ ಉಳಿಯಬೇಕು.

ಎಲ್ಲಾ ಅಡೆತಡೆಗಳನ್ನು ಧಿಕ್ಕರಿಸಿ ಫೈನಲ್ ತಲುಪಿದ ಕುಸ್ತಿಪಟು ವಿನೇಶ್‌, ಮಂಗಳವಾರ ರಾತ್ರಿ ಸರಿಸುಮಾರು 2 ಕಿಲೋಗಳಷ್ಟು ಅಧಿಕ ತೂಕ ಹೊಂದಿದ್ದರು ಎನ್ನಲಾಗಿದೆ. ಇದನ್ನು ಕರಗಿಸಲು ಆಕೆ ಇಡೀ ರಾತ್ರಿ ನಿದ್ರೆ ಮಾಡದೆ ವ್ಯಾಯಾಮದಲ್ಲಿ ನಿರತರಾಗಿದ್ದರು. ಜಾಗಿಂಗ್‌ನಿಂದ ಹಿಡಿದು ಸ್ಕಿಪ್ಪಿಂಗ್ ಮತ್ತು ಸೈಕ್ಲಿಂಗ್‌ವರೆಗೆ. ಆದರೆ ಇದು ಸಾಕಾಗಲಿಲ್ಲ. ಕೊನೆಯ 100 ಗ್ರಾಂಗಳನ್ನು ಕರಗಿಸಲು ಇನ್ನು ಸ್ವಲ್ಪ ಕಾಲಾವಕಾಶವನ್ನು ನೀಡುವಂತೆ ಭಾರತೀಯ ನಿಯೋಗ ಮನವಿ ಮಾಡಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ರಾತ್ರಿ ಪೂರ್ತಿ ವ್ಯಾಮಾಯ ಹಾಗೂ ತೂಕವಿಳಿಸುವ ಕಸರತ್ತು ಮಾಡಿದ ವಿನೇಶ್‌ ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

ಫೋಗಟ್ 50 ಕೆಜಿ ವಿಭಾಗದಲ್ಲಿ ಭಾಗವಹಿಸಲು ಕಷ್ಟವಾಗಿರುವುದು ಇದೇ ಮೊದಲಲ್ಲ. ಅವಳು ಸಾಮಾನ್ಯವಾಗಿ ಸ್ಪರ್ಧಿಸುವ ವಿಭಾಗ 53 ಕೆಜಿ. ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿಯೂ ಸಹ ಅವರು ಇದೇ ರೀತಿಯ ಅಗ್ನಿಪರೀಕ್ಷೆಯನ್ನು ಎದುರಿಸಿದ್ದರು.

Exit mobile version