Site icon Vistara News

Vinesh Phogat Emotional Post: ಅಪ್ಪನ ಸಾವು, ತಾಯಿಗೆ ಕ್ಯಾನ್ಸರ್ ಇರುವ ವಿಚಾರ ತಿಳಿದು ಆಕಾಶವೇ ಕಳಚಿ ಬಿದ್ದಂತಾಗಿತ್ತು; ಭಾವುಕರಾದ ವಿನೇಶ್ ಫೋಗಟ್​​

Vinesh Phogat Emotional Post

Vinesh Phogat Emotional Post: "After Father's Death, Mother Was Diagnosed With Stage 3 Cancer": Vinesh Phogat's Emotional Post On Olympic Journey

ನವದೆಹಲಿ: ಕೇವಲ 100 ಗ್ರಾಂ ತೂಕ ಹೆಚ್ಚು ಇದ್ದ ಕಾರಣ ಒಲಿಂಪಿಕ್ಸ್​ ಫೈನಲ್​ ಸ್ಪರ್ಧೆಯಿಂದ ಅನರ್ಹಗೊಂಡು ಪದಕ ವಂಚಿತರಾದ ಕುಸ್ತಿಪಟು ವಿನೇಶ್​ ಫೋಗಟ್​(Vinesh Phogat) ಪ್ಯಾರಿಸ್​ನಿಂದ ತವರಿಗೆ ಮರಳಿದ್ದಾರೆ. ಇದೇ ವೇಳೆ ಭಾವನಾತ್ಮಕ ಪ್ರತವೊಂದನ್ನು(Vinesh Phogat Emotional Post) ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ನಮ್ಮ ಪ್ರಯತ್ನಗಳು ನಿಲ್ಲಲಿಲ್ಲ ಮತ್ತು ನಾವು ಶರಣಾಗಲೂ ಇಲ್ಲ. ಆದರೆ ಸಮಯ ಸ್ತಬ್ಧವಾಯಿತು ಹಾಗೂ ಕಾಲ ಸರಿಯಿರಲಿಲ್ಲ. ಅದು ನನ್ನ ಹಣೆಬರಹ’ ಎಂದು ಬರೆದುಕೊಂಡಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಕುಸ್ತಿ 50 ಕೆ.ಜಿ ವಿಭಾಗದಲ್ಲಿ ಉತ್ಕೃಷ್ಟ ಪ್ರದರ್ಶನ ತೋರುವ ಮೂಲಕ ಫೈನಲ್‌ ತಲುಪಿದ್ದ ವಿನೇಶ್ ಅವರು ಇನ್ನೇನು ಫೈನಲ್​ ಆಡಲು ಕೆಲವೇ ಗಂಟೆಗಳು ಬಾಕಿ ಇರುವಾಗ ಅವರನ್ನು ಅನರ್ಹ ಎಂದು ಘೋಷಿಸಲಾಯಿತು. ದೇಹತೂಕದಲ್ಲಿ ನಿಗದಿತ ಸ್ಪರ್ಧೆಯ ತೂಕಕ್ಕಿಂತ 100 ಗ್ರಾಂ ಹೆಚ್ಚಾದ ಕಾರಣಕ್ಕೆ ಅವರು ಅನರ್ಹಗೊಂಡಿದ್ದರು.

ಇದೇ ಆಘಾತದಲ್ಲಿ ವಿನೇಶ್​ ತಮ್ಮ ಕ್ರೀಡಾಜೀವನಕ್ಕೆ ವಿದಾಯ ಹೇಳಿದ್ದರು. ಸೆಮಿಫೈನಲ್‌ ಜಯಿಸುವವರೆಗೂ ತೂಕ ನಿಯಮಬದ್ಧವಾಗಿದ್ದ ಕಾರಣಕ್ಕೆ ಬೆಳ್ಳಿ ಪದಕವನ್ನು ನೀಡಲು ಕ್ರೀಡಾ ಮಧ್ಯಸ್ಥಿಕೆ ನ್ಯಾಯಮಂಡಳಿಗೆ (ಸಿಎಎಸ್‌) ಮೇಲ್ಮನವಿ ಸಲ್ಲಿಸಿದ್ದರು. ಆದರೆ ಅವರ ಮನವಿ ಕೂಡ ತಿರಸ್ಕಾಗೊಂಡಿದೆ. ಹೀಗಾಗಿ ಪದಕ ಗೆಲ್ಲುವ ಕೊನೆಯ ಪ್ರಯತ್ನ ಕೂಡ ಕಮರಿ ಹೋಹಿದೆ. ಇದೇ ನೋವಿನಲ್ಲಿ ಅವರು ಭಾವನಾತ್ಮ ಪತ್ರವೊಂದನ್ನು ಬರೆದಿದ್ದಾರೆ.

“ನಾನು ತಂದೆಯ ಫೇವರೇಟ್​ ಮಗಳು. ಏಕೆಂದರೆ ನಾನೇ ಚಿಕ್ಕವಳಾಗಿದ್ದೆ . ಅಪ್ಪ ರಸ್ತೆಯಲ್ಲಿ ಬಸ್‌ ಓಡಿಸುತ್ತಿರಬೇಕಾದರೆ ನನ್ನ ಮಗಳು ಆಕಾಶದಲ್ಲಿ ವಿಮಾನದಲ್ಲಿ ಓಡಾಡಬೇಕು ಎಂದು ಕನಸು ಕಂಡಿದ್ದರು. ಆದರೆ ನಾನು ಮಾತ್ರ ಅಪ್ಪನ ಕನಸು ನಿಜವಾಗಿಸುತ್ತೇನೆ ಎಂದು ಕನಸು ಕಂಡಿರಲಿಲ್ಲ. ಆದರೆ, ಒಂದು ದಿನ ಅಪ್ಪ ನಮ್ಮನ್ನ ಬಿಟ್ಟು ಹೋದರು. ಈ ನೋವು ಸಹಿಸಿಕೊಳ್ಳುವ ಮುನ್ನವೇ ನನ್ನ ಅಮ್ಮನಿಗೂ ಕ್ಯಾನ್ಸರ್ 3ನೇ ಸ್ಟೇಜ್‌ಗೆ ಬಂದಿರುವುದು ತಿಳಿದಾಗ ನನಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು” ಎಂದು ಭಾವುಕ ನುಡಿಗಳನ್ನು ಬರೆದಿದ್ದಾರೆ

‘ಯಾವ ಗುರಿಗಾಗಿ ಶ್ರಮಿಸಿದ್ದೇವೋ ಅದು ಪೂರ್ಣವಾಗಲಿಲ್ಲ ಎಂಬ ಭಾವ ನನ್ನ ದೇಶವಾಸಿಗಳಿಗೆ ಮತ್ತು ನನ್ನ ಕುಟುಂಬದವರಿಗೆ ಇದೆ. ಆ ಕೊರಗು ಯಾವಾಗಲೂ ಇರುತ್ತದೆ. ಮುಂದೆ ಎಲ್ಲವೂ ಒಂದೇ ರೀತಿ ಇರುವುದಿಲ್ಲ. ವಿಭಿನ್ನ ಸನ್ನಿವೇಶಗಳಲ್ಲಿ ನಾನು 2032ರವರೆಗೆ ಆಡಬಹುದು. ಏಕೆಂದರೆ ನನ್ನೊಳಗಿನ ಹೋರಾಟ ಮತ್ತು ಕುಸ್ತಿ ಯಾವಾಗಲೂ ಇದ್ದೇ ಇರುತ್ತದೆ. ಒಂದಂತೂ ಖಚಿತ. ನಾನು ನಂಬಿರುವ ಸಂಗತಿಗಳಿಗಾಗಿ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ Vinesh Phogat : ವಿನೇಶ್​ ಫೈನಲ್ ತಲುಪಿದ್ದೇ ಹೆಮ್ಮೆಯ ವಿಷಯ; ಫೋಗಟ್ ಸಾಧನೆಯನ್ನು ಕೊಂಡಾಡಿದ ಮೋದಿ

ಮಾರ್ಗದರ್ಶನ ನೀಡಿದ ಬೆಲ್ಜಿಯನ್ ಕೋಚ್‌ ಅಕೋಸ್‌ ಕುರಿತು ವಿನೇಶ್​ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ನನ್ನ ಕೋಚ್​ ಬಗ್ಗೆ ನಾನೇನು ಬರೆದರೂ ಅದು ಕಡಿಮೆಯೇ. ಮಹಿಳೆಯರ ಕುಸ್ತಿ ಲೋಕದಲ್ಲಿ ನಾನು ಕಂಡ ಉತ್ತಮ ಕೋಚ್‌ ಅವರು. ಸಹನೆ ಮತ್ತು ವಿಶ್ವಾಸದಿಂದ ಯಾವುದೇ ಪರಿಸ್ಥಿತಿ ನಿಭಾಯಿಸುತ್ತಿದ್ದರು. ನಾನು ಗೆದ್ದಾಗ ಅವರು ಸಂತಸದಲ್ಲಿ ಕಣ್ಣೀರು ಹಾಕಿದ್ದನ್ನು ನೋಡಿದ್ದೇನೆ. ನನ್ನ ಯಶಸ್ಸಿಗೆ ಅಕೋಸ್‌ ಎಂದೂ ಶ್ರೇಯಸ್ಸು ತೆಗೆದುಕೊಂಡವರಲ್ಲ. ಆದರೆ ಅವರಿಗೆ ಸಲ್ಲಬೇಕಾದ ಮಾನ್ಯತೆ ನೀಡಲು ಬಯಸಿದ್ದೆ ಎಂದು ಉಲ್ಲೇಖಿಸಿದ್ದಾರೆ. ತಂಡದ ವೈದ್ಯ ಡಾ. ದಿನ್‌ಷಾ ಪಾರ್ದಿವಾಲಾ ಅವರ ಕುರಿತೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಭಾರತ ತಂಡದ ನೆರವಿಗೆ 13 ವೈದ್ಯಕೀಯ ಸಿಬ್ಬಂದಿಯ ಮುಖ್ಯಸ್ಥರಾಗಿ ಪಾರ್ದಿವಾಲಾ ಕಾರ್ಯನಿರ್ವಹಿಸಿದ್ದರು. ಕಷ್ಟದ ಕಾಲದಲ್ಲಿ ಜತೆಯಾಗಿ ನಿಂತ ಎಲ್ಲರಿಗೂ ಆಭಾರಿಯಾಗಿರುವೆ ಎಂದು ಉಲ್ಲೇಖಿಸಿದ್ದಾರೆ.

Exit mobile version