ನವದೆಹಲಿ: ಭಾರತದ ಸ್ಟಾರ್ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್(Vinesh Phogat) ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಮಹಿಳಾ ಕುಸ್ತಿ ಪಟುಗಳಿಗೆ ಹಲವು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುವ ಜತೆಗೆ ಜೀವ ಬೆದರಿಕೆ ಒಡ್ಡಲಾಗುತ್ತಿದೆ ಎಂಬ ಆರೋಪ ಮಾಡಿದ್ದಾರೆ.
ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಕೋಚ್ಗಳಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ವಿನೇಶ್ ಪೋಗಟ್ ಆರೋಪಿಸಿದ್ದಾರೆ. ಇದರ ಜತೆಗೆ ಲೈಂಗಿಕ ದೌರ್ಜನ್ಯ ಖಂಡಿಸಿ ಸಾಕ್ಷಿ ಮಲಿಕ್, ಭಜರಂಗ್ ಪೂನಿಯ ಸೇರಿ ಹಲವು ಮಹಿಳಾ ಮತ್ತು ಪುರುಷ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದಾರೆ.
ತಕ್ಷಣ ಜಾರಿಗೆ ಬರುವಂತೆ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಮತ್ತು ಕೋಚ್ಗಳನ್ನು ವಜಾ ಮಾಡುವ ಜತೆಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಕುಸ್ತಿ ಪಟುಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಆದರೆ ಈ ಆರೋಪವನ್ನು ಬ್ರಿಜ್ ಭೂಷಣ್ ಶರಣ್ ಅಲ್ಲಗಳೆದಿದ್ದು ಇದು ಸುಳ್ಳು ಆರೋಪ ಎಂದು ಹೇಳಿದ್ದಾರೆ.
ಒಂದೊಮ್ಮೆ ಈ ಆರೋಪ ಸಾಬೀತಾದಲ್ಲಿ ತಾನು ಆತ್ಮಹತ್ಯೆಗೂ ಸಿದ್ಧನಿದ್ದೇನೆ. ಜತೆಗೆ ತನ್ನ ಮೇಲಿನ ಆರೋಪದ ಬಗೆಗಿನ ತನಿಖೆಗೆ ನಾನು ಮುಕ್ತವಾಗಿ ಸಹರಿಸಲಿದ್ದೇನೆ ಎಂದು ಬ್ರಿಜ್ ಭೂಷಣ್ ಹೇಳಿದ್ದಾರೆ.
ಇದನ್ನೂ ಓದಿ | Dutee Chand | ನಿಷೇಧಿತ ಉದ್ದೀಪನ ಮದ್ದು ಸೇವನೆ ಆರೋಪ; ದ್ಯುತಿ ಚಂದ್ ಅಮಾನತು