Site icon Vistara News

Vinesh Phogat: ಕುಸ್ತಿಯಲ್ಲಿ ಅರಳಿದ ಪ್ರೀತಿ, ಒಂದು ರೂಪಾಯಿ ಖರ್ಚಿನಲ್ಲಿ ಮದುವೆ; ಇದುವೇ ವಿನೇಶ್​ ಫೋಗಟ್​ – ಸೋಮ್​ವೀರ್​ ಪ್ರೇಮದ ಕತೆ

Vinesh Phogat

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ (Paris Olympics 2024) ಪದಕದ ಭರವಸೆ ಮೂಡಿಸಿದ್ದ ವಿನೇಶ್ ಫೋಗಟ್ (Vinesh Phogat) ಆಗಸ್ಟ್ 7ರಂದು 50 ಕೆ.ಜಿ. ಮಹಿಳಾ ಫ್ರೀಸ್ಟೈಲ್ ಕುಸ್ತಿಯಿಂದ (Women’s Freestyle Wrestling) ಅನರ್ಹರಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣವಾದ ಎಕ್ಸ್​​ ಮೂಲಕ ನಿವೃತ್ತಿ (retirement) ಘೋಷಿಸಿದ್ದರು. ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋತಿದ್ದೇನೆ ಕ್ಷಮಿಸಿ. ನಿಮ್ಮ ಕನಸು ಮತ್ತು ನನ್ನ ಧೈರ್ಯ ಮುಕ್ತಾಯವಾಗಿದೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.

2024ರ ಆಗಸ್ಟ್ 6ರಂದು ವಿನೇಶ್ ಫೋಗಟ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಇತಿಹಾಸ ಸೃಷ್ಟಿಸಿದ್ದರು. ಮುಂದಿನ ಗೆಲುವು ಅವರಿಗೆ ಚಿನ್ನದ ಪದಕ ತಂದುಕೊಡುತ್ತಿತ್ತು. ಆದರೆ, 50 ಕೆ.ಜಿ. ಮಹಿಳಾ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿದ ಅವರು ಫೈನಲ್ ಪಂದ್ಯಕ್ಕೆ ಮೊದಲು 100 ಗ್ರಾಂ ತೂಕ ಹೆಚ್ಚಿಸಿಕೊಂಡಿದ್ದರು. ಹೀಗಾಗಿ ಅವರು ಅನರ್ಹಗೊಂಡರು. ಈ ವೇಳೆಶತಕೋಟಿ ಭಾರತೀಯರ ಕನಸು ಭಗ್ನವಾಯಿತು.


ಇಂತಹ ಕಷ್ಟದ ಸಮಯದಲ್ಲಿ, ಅವರ ಕುಟುಂಬ ಮತ್ತು ಪತಿ ಸೋಮವೀರ್ ರಾಠಿ ಅವರ ಶಕ್ತಿಯಾಗಿ ನಿಂತಿದ್ದಾರೆ. ಹೀಗಾಗಿ ವಿನೇಶ್ ಫೋಗಟ್ ಮತ್ತು ಸೋಮವೀರ್ ರಾಠಿ ಅವರ ಪ್ರೇಮಕಥೆ ಬಗ್ಗೆ ಸುದ್ದಿಯಾಗುತ್ತಿದೆ. ಇವರ ಪ್ರೇಮ ಕಥೆಯು ಯಾವುದೇ ಬಾಲಿವುಡ್ ಸಿನಿಮಾ ಕಥೆಗಿಂತ ಕಡಿಮೆಯೇನಿಲ್ಲ ಎಂಬುದೇ ವಿಶೇಷ.


ಮೊದಲ ಭೇಟಿ

ವಿನೇಶ್ ಫೋಗಟ್ ಭಾರತದ ಪ್ರಸಿದ್ಧ ಮಹಿಳಾ ಕುಸ್ತಿಪಟುಗಳಲ್ಲಿ ಒಬ್ಬರು. ಸೋಮವೀರ್ ರಾಠಿ ಅವರೂ ಕೂಡ ರಾಷ್ಟ್ರೀಯ ಮಟ್ಟದ ಕುಸ್ತಿಪಟು. ಸೋಮವೀರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನ ಗೆದ್ದಿದ್ದಾರೆ. ಅವರಿಬ್ಬರೂ ಮೊದಲು ಭಾರತೀಯ ರೈಲ್ವೇಯಲ್ಲಿ ಇಲಾಖೆಯಲ್ಲಿ ಭೇಟಿಯಾಗಿದ್ದರು. ಇಬ್ಬರೂ ಅಲ್ಲಿ ಉದ್ಯೋಗಿಗಳಾಗಿದ್ದರು. ಕುಸ್ತಿಯ ಮೇಲಿನ ಅವರಿಬ್ಬರ ಪ್ರೀತಿ ಅವರನ್ನೂ ಹತ್ತಿರಕ್ಕೆ ತಂದಿತು. ಮುಂದುವರಿದು ಇಬ್ಬರ ನಡುವೆಯೂ ಪ್ರೀತಿ ಅರಳಿತ್ತು.

2018ರಲ್ಲಿ ಜಕಾರ್ತಾ ಏಷ್ಯನ್ ಗೇಮ್ಸ್ ಸಮಯದಲ್ಲಿ ವಿನೇಶ್ ಫೋಗಟ್ ಮತ್ತು ಸೋಮವೀರ್ ರಾಠಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಹೊರಗೆ ವಿನೇಶ್‌ ಅವರಿಗೆ ಪ್ರೀತಿಯನ್ನು ಹೇಳಿಕೊಂಡಿದ್ದರು.

ಮದುವೆ ಪ್ರಸ್ತಾಪ

ಜಕಾರ್ತಾ ಏಷ್ಯನ್ ಗೇಮ್ಸ್ 2018 ರಲ್ಲಿ ಜಪಾನ್‌ನ ಯೂಕಿ ಐರಿ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದ ಅನಂತರ ಭಾರತಕ್ಕೆ ಮರಳಿದ ವಿನೇಶ್​​ ಅವರನ್ನು ಸೋಮವೀರ್ ರಾಠಿ ಏರ್‌ಪೋರ್ಟ್​​ನಲ್ಲಿ ಸ್ವಾಗತಿಸಿ ಮದುವೆ ಪ್ರಸ್ತಾಪ ಸಲ್ಲಿಸಿದರು. ಇದು ವಿನೇಶ್ ಗೆ ಅಚ್ಚರಿ ಮೂಡಿಸಿದ್ದು ಮಾತ್ರವಲ್ಲ ನೆರೆದವರಿಗೆ ವಿಶೇಷ ಎನಿಸಿತ್ತು.


ಸರಳವಾಗಿ ವಿವಾಹ

2018ರ ಆಗಸ್​​ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಅವರು ಅದೇ ವರ್ಷ ಡಿಸೆಂಬರ್‌ನಲ್ಲಿ ವಿವಾಹವಾದರು.
ವಿನೇಶ್ ಅವರ ತವರೂರು ಚಾರ್ಖಿ ದಾದ್ರಿಯಲ್ಲಿ ಸಣ್ಣ ಸಮಾರಂಭದಲ್ಲಿ ವಿವಾಹವಾದರು.ಈ ವೇಳೆ ವಿನೇಶ್ ದಂಪತಿ ಮದುವೆ ಲಿಂಗ ಪಕ್ಷಪಾತ, ಸಾಮಾಜಿಕ ಒತ್ತಡದ ವಿರುದ್ಧ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದರು.

ವಿನೇಶ್ ಮತ್ತು ಸೋಮವೀರ್ ತಮ್ಮ ಕುಟುಂಬಗ ಕೇವಲ 1 ರೂ. ಖರ್ಚು ಮಾಡಿ ಸರಳ ವಿವಾಹ ಆಚರಿಸಿದ್ದರು. ಮದುವೆಗೆ ದೊಡ್ಡ ಮೊತ್ತವನ್ನು ಖರ್ಚು ಮಾಡುವುದು ಸರಿಯಲ್ಲ ಎಂಬುದನ್ನೂ ಸಾರಿದ್ದರು. .

ಇದನ್ನೂ ಓದಿ: Neeraj Chopra : ವಿನೇಶ್ ಪೋಗಟ್​​ಗೆ ಅನರ್ಹತೆ ಬಗ್ಗೆ ಮಾತನಾಡಿದ ನೀರಜ್ ಚೋಪ್ರಾ; ಏನಂದ್ರು ಅವರು?


ದಂಪತಿ ಹಿಂದೂ ವಿವಾಹ ಸಂಪ್ರದಾಯದಲ್ಲಿ ಏಳು ಪ್ರತಿಜ್ಞೆಗಳಿಗೆ ಮತ್ತೊಂದನ್ನು ಸೇರಿಸಿದ್ದರು. ಅದುವೇ “ಬೇಟಿ ಬಚಾವೋ, ಬೇಟಿ ಪಢಾವೋ, ಬೇಟಿ ಖಿಲಾವೋ” ಕೂಡ ಸೇರಿತ್ತು. ಹೆಣ್ಣು ಮಕ್ಕಳನ್ನು ಉಳಿಸಿ, ಅವರಿಗೆ ಶಿಕ್ಷಣ ನೀಡಿ ಮತ್ತು ಅವರು ಆಟವಾಡಲು ಅಥವಾ ಕ್ರೀಡೆಯಲ್ಲಿ ಮಿಂಚಲು ಬಿಡಿ ಎಂಬುದಾಗಿತ್ತು.

ವಿವಾಹ ಕಾರ್ಯಕ್ರಮದಲ್ಲಿ ಅವರ ಕುಟುಂಬಗಳು ಮಾತ್ರ ಭಾಗವಹಿಸಿದ್ದವು. ಇದರಲ್ಲಿ ವಿನೇಶ್ ಅವರ ಸೋದರ ಸಂಬಂಧಿಗಳಾದ ಕುಸ್ತಿಪಟುಗಳಾದ ಗೀತಾ ಮತ್ತು ಬಬಿತಾ ಫೋಗಟ್ ಕೂಡ ಸೇರಿದ್ದಾರೆ. ವಿನೇಶ್ ಅವರ ಸಹೋದರಿ, ಕುಸ್ತಿಪಟು ರಿತು ಫೋಗಟ್ ಕೂಡ ಅವರ ಮದುವೆಗೆ ಬಂದಿದ್ದರು.

Exit mobile version