Site icon Vistara News

Vinesh Phogat: ಯೋಗೇಶ್ವರ್​ ದತ್‌ ಒಬ್ಬ ಗುಲಾಮ; ವಿನೇಶ್​ ಫೋಗಟ್‌ ಟೀಕೆ

Vinesh Phoga

ನವದೆಹಲಿ: ಏಷ್ಯನ್‌ ಗೇಮ್ಸ್‌ ಮತ್ತು ವಿಶ್ವ ಚಾಂಪಿಯನ್‌ಶಿಪ್‌ ಆಯ್ಕೆ ಟ್ರಯಲ್ಸ್‌ ಪ್ರಕ್ರಿಯೆಗೆ ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ನೀಡಿದ ವಿನಾಯಿತಿ ಕುರಿತು ಹೇಳಿಕೆ ನೀಡಿದ್ದ ಲಂಡನ್​ ಒಲಿಂಪಿಕ್​ ಪದಕ ವಿಜೇತ ಯೋಗೇಶ್ವರ್​ ದತ್‌(Yogeshwar Dutt) ಅವರನ್ನು ಬ್ರಿಜ್​ ಭೂಷಣ್​(Brij Bhushan Sharan Singh) ಅವರ ಗುಲಾಮ ಎಂದು ವಿನೇಶ್​ ಫೋಗಟ್‌(Vinesh Phogat) ಟೀಕಿಸಿದ್ದಾರೆ.

ಏಷ್ಯನ್‌ ಗೇಮ್ಸ್‌ ಮತ್ತು ವಿಶ್ವ ಚಾಂಪಿಯನ್‌ಶಿಪ್‌ ಆಯ್ಕೆ ಟ್ರಯಲ್ಸ್‌ ಪ್ರಕ್ರಿಯೆಯೆ ವಿನೇಶ್​ ಫೋಗಟ್​ ಸೇರಿ 6 ಮಂದಿ ಕುಸ್ತಿಪಟುಗಳಿಗೆ ಟ್ರಯಲ್ಸ್​ನಿಂದ ವಿನಾಯಿತಿ ನೀಡಲಾಗಿತ್ತು. ಅದರಂತೆ ಆಯ್ಕೆ ಟ್ರಯಲ್ಸ್‌ನಲ್ಲಿ ವಿಜೇತರಾದವರ ವಿರುದ್ಧ ಒಂದು ಪಂದ್ಯದಲ್ಲಿ ಗೆದ್ದರೆ ಆರು ಮಂದಿ ಕುಸ್ತಿಪಟುಗಳನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗುವುದು ಎಂದು ಭಾರತ ಒಲಿಂಪಿಕ್‌ ಸಂಸ್ಥೆಯ ಅಡ್‌ಹಾಕ್‌ ಸಮಿತಿಯು ನಿರ್ಧಾರ ಪ್ರಕಟಿಸಿತ್ತು. ಇದನ್ನು ಯೋಗೇಶ್ವರ ದತ್‌ ಅವರು ಪಶ್ನಿಸಿದ್ದರು.

ಒಲಿಂಪಿಕ್‌ ಸಂಸ್ಥೆಯ ಅಡ್‌ಹಾಕ್‌ ಸಮಿತಿಯು ಈ ನಿರ್ಧಾರದಿಂದ ಪ್ರಾಮಾಣಿಕ ಕುಸ್ತಿಪಟುಗಳಿಗೆ ಅನ್ಯಾಯವಾಗುತ್ತದೆ ಎಂದು ಯೋಗೇಶ್ವರ ದತ್‌ ಹೇಳಿದ್ದರು. ಇದಕ್ಕೆ ರೊಚ್ಚಿಗೆದ್ದ ವಿನೇಶ್​ ಫೋಗಟ್​, ‘ಕುಸ್ತಿ ಫೆಡರೇಷನ್‌ ಅಧ್ಯಕ್ಷರ ವಿರುದ್ಧ ಮಹಿಳಾ ಕುಸ್ತಿಪಟುಗಳು ನೀಡಿದ ದೂರುಗಳ ವಿಚಾರಣೆ ನಡೆಸಲು ನೇಮಿಸಿದ್ದ ಸಮಿತಿಯಲ್ಲಿ ಒಬ್ಬರಾಗಿದ್ದ ನೀವು ನಮಗೆ ಯಾವುದೇ ನ್ಯಾಯ ಒದಗಿಸಿಲ್ಲ. ವಿಚಾರಣೆ ಸಂದರ್ಭದಲ್ಲಿ ಮಹಿಳಾ ಕುಸ್ತಿಪಟುವಿನ ಮುಂದೆ ‘ಇಂಥದ್ದು ಘಟನೆಗಳು ನಡೆಯುತ್ತಿರುತ್ತದೆ’ ಎಂದು ಹೇಳಿದ ನೀಜ ಮನಸ್ಥಿತಿ ನಿಮ್ಮದು. ಈಗ ಈ ವಿಚಾರವಾಗಿ ನೀವು ತಲೆಕೆಡಿಸಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ” ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

ಇದನ್ನೂ ಓದಿ Brij Bhushan Singh: ಬ್ರಿಜ್‌ಭೂಷಣ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಪೊಲೀಸರು; ಪೋಕ್ಸೊ ಕೈಬಿಡಲು ಶಿಫಾರಸು

“ಬ್ರಿಜ್‌ಭೂಷಣ್ ಅವರ ಅನುಯಾಯಿಯಾಗಿರುವ ನೀವು ಅವರ ಗುಲಾಮ ಇದ್ದಂತೆ. ಅವರನ್ನು ರಕ್ಷಿಸಲು ನೀವು ತಮ್ಮ ಕ್ಷೇತ್ರದವರಿಗೇ ದ್ರೋಹ ಬಗೆದ ವ್ಯಕ್ತಿ” ಎಂದು ವಿನೇಶ್​ ಫೋಗಟ್​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ವಿನೇಶ್​ ಮಾತ್ರವಲ್ಲದೆ ಬಜರಂಗ್​ ಪೂನಿಯಾ ಮತ್ತು ಸಾಕ್ಷಿ ಮಲಿಕ್​ ಕೂಡ ಯೋಗೇಶ್ವರ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version