Site icon Vistara News

Vinesh Phogat : ವಿನೇಶ್​​ಗೆ ಬೆಳ್ಳಿ ಪದಕ ಕೊಡಲು ಸಾಧ್ಯವಿಲ್ಲ; ಒಲಿಂಪಿಕ್ಸ್​​ ಸಂಸ್ಥೆ ಮುಖ್ಯಸ್ಥ ಥಾಮಸ್ ಬಾಕ್​ ಸ್ಪಷ್ಟನೆ

Vinesh Phogat

ಬೆಂಗಳೂರು : ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರ ಒಲಿಂಪಿಕ್ ಅನರ್ಹತೆ ಮತ್ತು ಮಹಿಳೆಯರ 50 ಕೆ.ಜಿ ವಿಭಾಗದ ಕುಸ್ತಿಯಲ್ಲಿ ಜಂಟಿ ಬೆಳ್ಳಿ ಪದಕಕ್ಕಾಗಿ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (ಸಿಎಎಸ್)ಗೆ ಸಲ್ಲಿಸಿದ ಮನವಿಯ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮುಖ್ಯಸ್ಥ ಥಾಮಸ್ ಬಾಕ್​​ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ. ಸ್ಪರ್ಧೆಯಲ್ಲಿ ಎರಡು ಬೆಳ್ಳಿ ಪದಕಗಳನ್ನು ನೀಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಬಾಕ್​ ಹೇಳಿದ್ದಾರೆ. ಆದಾಗ್ಯೂ, ಚಿನ್ನದ ಪದಕದ ಪಂದ್ಯಕ್ಕೆ ಮುಂಚಿತವಾಗಿ ಅನರ್ಹಗೊಂಡ ಭಾರತೀಯ ಕುಸ್ತಿಪಟುವಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದೇನೆ ಎಂಬುದಾಗಿ ನುಡಿದಿದ್ದಾರೆ.

ಮಹಿಳೆಯರ 50 ಕೆಜಿ ವಿಭಾಗದ ಫೈನಲ್​ ವೇಳೆ ನಿಗಿದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಿದ್ದ ಕಾರಣ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ. 29 ವರ್ಷದ ಕುಸ್ತಿಪಟು ಎದೆಗುಂದಿ ಮರುದಿನ ಅವರು ನಿವೃತ್ತಿ ಘೋಷಿಸಿದ್ದಾರೆ. ವಿನೇಶ್ ಅವರು ಪದಕವೂ ಅಲ್ಲ ಸ್ಪರ್ಧೆಯಲ್ಲಿ ಅವರಿಗೆ ಕೊನೇ ಸ್ಥಾನ ಸಿಗಲಿದೆ.

ಪ್ಯಾರಿಸ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಥಾಮಸ್, ಸಿಎಎಸ್ ನಿರ್ಧಾರಕ್ಕೆ ಐಒಸಿ ಬದ್ಧವಾಗಿರುತ್ತದೆ ಎಂದು ಹೇಳಿದರು. ಎರಡು ಬೆಳ್ಳಿ ಪದಕಗಳನ್ನು ನೀಡುವುದು ತಪ್ಪು ಎಂದರು.

ಅಂತಾರಾಷ್ಟ್ರೀಯ ಒಕ್ಕೂಟದ ನಿಯಮಗಳನ್ನು ಎಲ್ಲರೂ ಅನುಸರಿಸಬೇಕು. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಫೆಡರೇಶನ್, ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಕುಸ್ತಿಪಟು ನಿರ್ದಿಷ್ಟ ತಿಳುವಳಿಕೆಯನ್ನು ಹೊಂದಿರಬೇಕು. ಮಾನವೀಯತೆ ಸರಿಯಾಗಿರಬಹುದು. ಆದರೆ, ಒಕ್ಕೂಟ ಅಥವಾ ಅಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕಾದಾಗ ಎಲ್ಲರವನ್ನೂ ಗೌರವಿಸಬೇಕಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Paris Olympics 2024 : ಲೈಂಗಿಕ ಕಿರುಕುಳದ ಆರೋಪದ ಮೇಲೆ ಈಜಿಪ್ಟ್​​ ಮೊಹಮ್ಮದ್ ಎಲ್ಸಯೀದ್ ಅರೆಸ್ಟ್​​

ನಾವು 100 ಗ್ರಾಂ ಹೆಚ್ಚಳವಾಗಲಿ, 102 ಗ್ರಾಂ ಹೆಚ್ಚಳವಾದರೂ ಒಂದೇ. ಪ್ರತಿ ಸೆಕೆಂಡ್​ಗೆ ಸಾವಿರದಷ್ಟು ಫಲಿತಾಂಶಗಳ ವ್ಯತ್ಯಾಸ ಬರುವಾಗ ಯಾವುದು ಸರಿಯಾಗಿರುತ್ತದೆ. ನಿಯಮಗಳೇ ಸರಿ ಎಂದು ಬಾಕ್ ಹೇಳಿದ್ದಾರೆ.

ವಿನೇಶ್ ಅರ್ಜಿ ವಿಚಾರಣೆ ನಡೆಸಿದ ಸಿಎಎಸ್

ತನ್ನ ಅನರ್ಹತೆಯನ್ನು ರದ್ದುಗೊಳಿಸಿ ಜಂಟಿ ಬೆಳ್ಳಿ ಪದಕವನ್ನು ನೀಡುವಂತೆ ವಿನೇಶ್ ಸಲ್ಲಿಸಿದ್ದ ಮನವಿಯನ್ನು ಸಿಎಎಸ್ ಶುಕ್ರವಾರ ಸ್ವೀಕರಿಸಿದೆ. ಆಗಸ್ಟ್ 7 ರ ಗುರುವಾರ ನಡೆದ ಮಹಿಳೆಯರ 50 ಕೆಜಿ ಫೈನಲ್​​ನಲ್ಲಿ ಸ್ಪರ್ಧಿಸುವ ಪ್ರಯತ್ನದಲ್ಲಿ ವಿನೇಶ್ ಫೋಗಟ್ ಆರಂಭದಲ್ಲಿ ತನ್ನ ಅನರ್ಹತೆಯನ್ನು ರದ್ದುಗೊಳಿಸಲು ಮತ್ತು ಮತ್ತೊಂದು ತೂಕವನ್ನು ನಡೆಸಲು ಮನವಿ ಮಾಡಿದ್ದರು. ಆದಾಗ್ಯೂ, ಫೈನಲ್​ಗೆ ಬಹಳ ಸೀಮಿತ ಸಮಯ ಉಳಿದಿದ್ದರಿಂದ ಸಿಎಎಸ್ ಮೇಲ್ಮನವಿಯ ಉಪಯೋಗವಾಗಲಿಲ್ಲ. ಇದೀಗ ವಿನೇಶ್ ತನಗೆ ಜಂಟಿ ಬೆಳ್ಳಿ ಪದಕ ನೀಡುವಂತೆ ವಿನಂತಿಸಿದ್ದಾರೆ/

Exit mobile version