Site icon Vistara News

Vinesh Phogat: ವಿನೇಶ್ ಫೋಗಟ್ ಕಾಂಗ್ರೆಸ್‌ ಸೇರುವುದು ಖಚಿತ; ಮಾಜಿ ಸಿಎಂ ಜತೆ ಚರ್ಚೆ

Vinesh Phogat

Vinesh Phogat:Vinesh Phogat meets Hoodas, fuels speculations of joining Congress

ನವದೆಹಲಿ: ಮಾಜಿ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಅವರು ಕಾಂಗ್ರೆಸ್​ ಪಕ್ಷ(Vinesh Phogat joining Congress) ಸೇರಿ, ಮುಂಬರುವ ಹರಿಯಾಣ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು 2 ದಿನಗಳ ಹಿಂದೆ ಭಾರೀ ಚರ್ಚೆಯಾಗಿತ್ತು. ಇದೀಗ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವುದು ಬಹುತೇಕ ಖಚಿತವಾದಂತಿದೆ.

ವಿನೇಶ್​ ಶುಕ್ರವಾರ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ(Bhupinder Singh Hooda) ಅವರನ್ನು ನವದೆಹಲಿಯ ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಇದೇ ವೇಳೆ ಹೂಡಾ ಯಾರೇ ಕಾಂಗ್ರೆಸ್‌ಗೆ ಬಂದರೂ ಅವರನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ. ಇದನೆಲ್ಲ ಗಮನಿಸುವಾಗ ವಿನೇಶ್​ ಕಾಂಗ್ರೆಸ್​ ಪಕ್ಷ ಸೇರುವುದು ನಿಶ್ಚಿತವಾದಂತಿದೆ. ಮೂಲಗಳ ಪ್ರಕಾರ ಒಲಿಂಪಿಯನ್ ಕುಸ್ತಿಪಟು ವಿನೇಶ್​ ಮುಂದಿನ ತಿಂಗಳು ಅಧಿಕೃತವಾಗಿ ಕಾಂಗ್ರೆಸ್​ಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ Vinesh Phogat: ಬ್ರಿಜ್‌ಭೂಷಣ್ ವಿರುದ್ಧ ಮತ್ತೆ ಸಮರಕ್ಕಿಳಿದ ವಿನೇಶ್​ ಫೋಗಟ್; ದೆಹಲಿ ಪೊಲೀಸರ ವಿರುದ್ಧ ಗಂಭೀರ ಆರೋಪ

“ಕ್ರೀಡಾಪಟು ಯಾವುದೇ ನಿರ್ದಿಷ್ಟ ಪಕ್ಷ ಅಥವಾ ರಾಜ್ಯಕ್ಕೆ ಸೇರಿದವರಲ್ಲ. ಒಬ್ಬ ಕ್ರೀಡಾಪಟು ಇಡೀ ರಾಷ್ಟ್ರಕ್ಕೆ ಸೇರಿದವರು. ವಿನೇಶ್​ ಇಡೀ ರಾಷ್ಟ್ರಕ್ಕೆ ಸೇರಿದವಳು. ಯಾವ ಪಕ್ಷಕ್ಕೆ ಸೇರಬೇಕು ಬೇಡ ಎಂಬುದು ಅವರ ಆಯ್ಕೆ. ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರೂ ಅವರನ್ನು ಸ್ವಾಗತಿಸುತ್ತೇವೆ. ಅವಳು ಏನು ಮಾಡಬೇಕೆಂದು ಬಯಸುತ್ತಾಳೆ ಎಂಬುದು ಅವಳ ನಿರ್ಧಾರ” ಎಂದು ಹರ್ಯಾಣ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹೂಡಾ ಹೇಳಿದ್ದಾರೆ.

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಐತಿಹಾಸಿಕ ಪದಕ ನಿರೀಕ್ಷೆಯಲ್ಲಿದ್ದ ವಿನೇಶ್​ ಫೈನಲ್​ ಪಂದ್ಯಕ್ಕೆ ಕೆಲವೆ ಗಂಟೆಗಳು ಇರುವಾಗ ನಿಯಮಿತ ತೂಕಕ್ಕಿಂತ ಹೆಚ್ಚು ಇದ್ದ ಕಾರಣ ಅನರ್ಹಗೊಂಡು ಪದಕ ವಂಚಿತರಾದರು. ಅನರ್ಹತೆಯ ವಿರುದ್ಧ ಅವರು ಸಲ್ಲಿದ್ದ ಮನವಿಯನ್ನು ಕೂಡ ಆರ್ಬಿಟ್ರೇಶನ್ ಕೋರ್ಟ್ (CAS) ತಿರಸ್ಕರಿಸಿದೆ.

ಮೂಲಗಳ ಪ್ರಕಾರ ಮೂಲಗಳ ವಿನೇಶ್​ ಅವರು ತಮ್ಮ ಸೋದರ ಸಂಬಂಧಿ, ಮಾಜಿ ಕಾಮನ್​ವೆಲ್ತ್​ ಗೇಮ್​ ಚಿನ್ನದ ಪದಕ ವಿಜೇತೆ, ಬಿಜೆಪಿ ಪಕ್ಷದ ಕಾರ್ಯಕರ್ತೆ ಬಬಿತಾ ಫೋಗಟ್(Babita Phogat) ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ವಿನೇಶ್​ ಮಾತ್ರವಲ್ಲದೆ ಬಜರಂಗ್​ ಪೂನಿಯಾ ಕೂಡ ಕಾಂಗ್ರೆಸ್​ ಪಕ್ಷದಿಂದ ಚುನಾವಣೆಗೆ ನಿಲ್ಲುತ್ತಾರೆ ಎನ್ನಲಾಗಿದೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಚುನಾವಣಾ ಆಯೋಗವು ಕಳೆದ ಶುಕ್ರವಾರ ಚುನಾವಣೆ ದಿನಾಂಕ ಘೋಷಣೆ ಮಾಡಿತ್ತು. ಅಕ್ಟೋಬರ್ 1ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಬ್ರಿಜ್​ ಭೂಷಣ್​ ವಿರುದ್ಧದ ಪ್ರತಿಭಟನೆ ವೇಳೆ ವಿನೇಶ್​ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಅಲ್ಲದೆ ತಮಗೆ ನೀಡಿದ್ದ ಖೇಲ್​ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ದೆಹಲಿಯ ಕರ್ತವ್ಯ ಪಥದಲ್ಲಿ ತ್ಯಜಿಸುವ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಬಳಿಕ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಜತೆ ಕಾಣಿಸಿಕೊಂಡಿದ್ದರು. ಇದನೆಲ್ಲ ನೋಡುವಾಗ ಅವರು ಈ ಬಾರಿ ಕಾಂಗ್ರೆಸ್​ ಪಕ್ಷದಿಂದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

Exit mobile version