Site icon Vistara News

Baby Shower : ಭಾರತೀಯ ಸಂಪ್ರದಾಯದಂತೆ ನಡೆದ ಆಸೀಸ್​ ಕ್ರಿಕೆಟಿಗ ಗ್ಲೆನ್​ ಮ್ಯಾಕ್ಸ್​ವೆಲ್​ ಪತ್ನಿಯ ಸೀಮಂತ

Vini raman

ಬ್ರಿಸ್ಬೇನ್​: ಆರ್​ಸಿಬಿ ತಂಡದ ಸ್ಟಾರ್ ಆಲ್​ರೌಂಡರ್ ಹಾಗೂ ಆಸ್ಟ್ರೇಲಿಯಾ ತಂಡದ ಪ್ರಧಾನ ಆಟಗಾರ ಗ್ಲೆನ್​ ಮ್ಯಾಕ್​​ವೆಲ್ ಅವರ ಪತ್ನಿ ಭಾರತೀಯ ಶೈಲಿಯಲ್ಲಿ ತಮ್ಮ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಯಾಕೆ ಗೊತ್ತೇ? ಅವರ ಪತ್ನಿ ವಿನಿ ರಾಮನ್​ ಭಾರತೀಯ ಮೂಲದವರು. ಹೀಗಾಗಿ ಸೀಮಂತ ಕಾರ್ಯಕ್ರಮವನ್ನು ಭಾರತೀಯ ಸಂಪ್ರದಾಯದ ಪ್ರಕಾರ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮ್ಯಾಕ್ಸ್​ವೆಲ್​ ಹಾಗೂ ವಿನಿ ಅವರ ಸ್ನೇಹಿತರು, ಹತ್ತಿರದ ಸಂಬಂಧಿಕರು ಭಾಗವಹಿಸಿದ್ದರು. ವಿನಿ ನೀಲಿ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದರೆ, ಆಸೀಸ್ ಕ್ರಿಕೆಟಿಗ ಬೂದು ಬಣ್ಣದ ಶರ್ಟ್ ಧರಿಸಿ ಮೂಲಕ ಕ್ಯಾಶುಯಲ್ ಲುಕ್ ನಲ್ಲಿ ಕಾಣಿಸಿಕೊಂಡರು. ವಿನಿ ಇನ್​ಸ್ಟಾಗ್ರಾಮ್​ನಲ್ಲಿ ಸಮಾರಂಭದ ಏಳು ಚಿತ್ರಗಳನ್ನು ಅಪ್ಲೋಡ್ ಮಾಡಿದ್ದಾರೆ.

ವಿನಿ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿರುವ ಸ್ಟೋರಿ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ದಂಪತಿಯ ಅಭಿಮಾನಿಗಳು ಮತ್ತು ಹಿತೈಷಿಗಳು ಶೀಘ್ರದಲ್ಲೇ ಜನಿಸಲಿರುವ ಮಗುವಿಗೆ ಶುಭ ಹಾರೈಸುವ ಮೂಲಕ ಕಾಮೆಂಟ್ ವಿಭಾಗಗಳಲ್ಲಿ ಪ್ರವಾಹ ಸೃಷ್ಟಿಸಿದ್ದರು.

ಕೆಲವು ದಿನಗಳ ಹಿಂದೆ ವಿನಿ ಮತ್ತು ಮ್ಯಾಕ್ಸ್​ವೆಲ್​ ಇನ್​ಸ್ಟಾಗ್ರಾಮ್​ನಲ್ಲಿ ಐಪಿಎಲ್ 2023 ಋತುವಿನಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದರು. ಆದರೆ ಈ ವೇಳೆ ಅವರು ರೈನ್​ಬೋ ಮಗು ಎಂದು ಹೇಳಿದ್ದರು. ಆದರೆ, ರೈನ್​ ಬೋ ಮಗು ಎಂದರೆ ಒಂದು ಬಾರಿ ಗರ್ಭಪಾತವಾದ ನಂತರ ಹುಟ್ಟಲಿರುವ ಮಗುವಾಗಿದೆ. ಕಾಮನಬಿಲ್ಲು ಎಂದರೆ ಇಲ್ಲಿ ಬಿರುಗಾಳಿ ನಂತರ ಕಾಣುವ ಬಿಸಲು ಎಂದು ಅರ್ಥ.

ಮ್ಯಾಕ್ಸ್​ವೆಲ್​ ವಿರಾಮ

ಆಸೀಸ್ ಆಲ್​ರೌಂಡರ್​​ ಪ್ರಸ್ತುತ ಟಿ20 ಬ್ಲಾಸ್ಟ್ 2023 ಅನ್ನು ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದರೆ. ಮ್ಯಾಕ್ಸ್ವೆಲ್ ವಾರ್ವಿಕ್​ ಶೈರ್​ ಪರ ಆಡಿದರೂ ಕೆಲಸದ ಹೊರೆಯ ಕಾರಣ ನೀಡಿ ದಿ ಹಂಡ್ರೆಡ್​ನಿಂದ ಹೊರಗುಳಿದಿದ್ದರು. ಮೇಜರ್ ಕ್ರಿಕೆಟ್​ ಲೀಗ್​​ ದಿ ಹಂಡ್ರೆಡ್​ಗಿಂತ ಉತ್ತಮ ಲೀಗ್ ಎಂದು 34 ವರ್ಷದ ಆಟಗಾರ ಹೇಳಿದ್ದಾರೆ.

ಈಗ ಮೇಜರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಬಂದಿದೆ ಎಂದು ನಾನು ಭಾವಿಸುತ್ತೇನೆ, ಅದು ಬ್ಲಾಸ್ಟ್ ಮೇಲೆ ನಿಜವಾಗಿಯೂ ಕೆಟ್ಟ ಪರಿಣಾಮ ಬೀರಲಿದೆ. ಯಾಕೆಂದರೆ ಅದು ಬ್ಲಾಸ್ಟ್​​ಗಿಂತ ಉತ್ತಮ ಲೀಗ್ ಎಂದುಕೊಳ್ಳುತ್ತದೆ. ಇಲ್ಲಿನ 14 ಪಂದ್ಯಗಳಿಗೆ ಹೋಲಿಸಿದರೆ ಅಮೆರಿಕಕ್ಕೆ ಹೋಗಿ ಆಡುವುದು ಉತ್ತಮ ಎಂದು ಅಂದುಕೊಂಡಿದ್ದೇನೆ ಎಂಬುದಾಗಿ ಮ್ಯಾಕ್ಸ್​ವೆಲ್​ ಇತ್ತೀಚೆಗೆ ಹೇಳಿದ್ದರು.

Exit mobile version