Site icon Vistara News

Viral News: 2019ರ ವಿಶ್ವಕಪ್‌ ಘಟನೆ ನೆನೆದ ಅಂಬಾಟಿ ರಾಯುಡು

Ambati Rayudu

ಹೈದರಾಬಾದ್​: ಲಂಡನ್​ನಲ್ಲಿ ನಡೆದಿದ್ದ 2019ರ ಏಕದಿನ ವಿಶ್ವ ಕಪ್​ನಲ್ಲಿ(2019 World Cup) ಸ್ಥಾನ ತಪ್ಪಲು ಕಾರಣ ಏನೆಂಬುದನ್ನು ಅಂಬಾಟಿ ರಾಯುಡು(Ambati Rayudu) ಅವರು ನಾಲ್ಕು ವರ್ಷಗಳ ಬಳಿಕ ರಿವೀಲ್​ ಮಾಡಿದ್ದಾರೆ. ಬಿಸಿಸಿಐ ಆಯ್ಕೆ ಸಮಿತಿಯಲ್ಲಿದ್ದ ಒಬ್ಬ ಸದ್ಯಸರೇ ಇದಕ್ಕೆ ಕಾರಣ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ರಾಯುಡು, ತಮ್ಮಗೆ ಆದ ನೋವನ್ನು ಹಂಚಿಕೊಂಡಿದ್ದಾರೆ. ನಾಲ್ಕು ವರ್ಷಗಳಿಂದ ನಾಲ್ಕನೇ ಕ್ರಮಾಂಕಕ್ಕೆ ನನ್ನನ್ನು ಸಿದ್ಧ ಪಡಿಸಿದ ಬಿಸಿಸಿಐ ಅಂತಿಮ ಕ್ಷಣದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವವಿರದ ವಿಜಯ್​ ಶಂಕರ್(Vijay Shankar)​ ಅವರನ್ನು ಆಯ್ಕೆ ಮಾಡಲಾಯಿತು. ಇದನ್ನು ಕಂಡು ಅಚ್ಚರಿ ಮತ್ತು ಬೇಸರವೂ ಆಯಿತು ಎಂದು ರಾಯುಡು ಹೇಳಿದರು.

ಏಕದಿನ ವಿಶ್ವ ಕಪ್​ನಿಂದ ಕೈ ಬಿಟ್ಟ ಬೇಸರಕ್ಕೆ ಬಿಸಿಸಿಐ ವಿರುದ್ಧ ಕೋಪ ಕೆಂಡಕಾರಿದ್ದ ರಾಯುಡು, ತಕ್ಷಣ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಜತೆಗೆ ಈ ಬಾರಿ ತ್ರಿಡಿ ಗ್ಲಾಸ್‌ ಹಾಕಿಕೊಂಡು ಏಕದಿನ ವಿಶ್ವಕಪ್‌ ಟೂರ್ನಿಯನ್ನು ವೀಕ್ಷಿಸುವುದಾಗಿ ಟ್ವೀಟ್‌ ಮಾಡಿ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್‌ ಅವರನ್ನು ಟೀಕಿಸಿದ್ದರು.

ಇದನ್ನೂ ಓದಿ BCCI Summons: ಅರ್ಜುನ್​ ತೆಂಡೂಲ್ಕರ್​ ಸೇರಿ 20 ಮಂದಿ ಯುವ ಆಟಗಾರರಿಗೆ ಸಮನ್ಸ್​ ನೀಡಿದ ಬಿಸಿಸಿಐ

“ಬಿಸಿಸಿಐ ಆಯ್ಕೆ ಸಮಿತಿಯಲ್ಲಿದ್ದ ಒಬ್ಬ ಸದಸ್ಯನಿಗೂ ಮತ್ತು ನನಗೂ ಸಮಸ್ಯೆ ಇತ್ತು. ರಾಜ್ಯ ತಂಡದ ಪರ ನಾನು ಆಡುವಾಗಲೇ ಆತ ನನ್ನ ಕ್ರಿಕೆಟ್‌ ವೃತ್ತಿ ಜೀವನವನ್ನು ಮುಗಿಸಲು ಸಂಜು ರೂಪಿಸಿದ್ದ. ಆದರೆ ನಾನು ನನ್ನ ಪ್ರತಿಭೆಯ ಮೂಲಕ ಮೇಲೆ ಬಂದೆ. ಆದರೂ ಆತ ನನ್ನನ್ನು ತುಳಿದೇ ಬಿಟ್ಟ” ಎಂದು ಎಂ.ಎಸ್‌ಕೆ ಪ್ರಸಾದ್‌ ವಿರುದ್ಧ ಆಕ್ರೋಶ ಹೊರಹಾಕಿದರು.

Exit mobile version