Site icon Vistara News

Viral News: ಟ್ರಾಕ್ಟರ್ ಖರೀದಿಸಿದ ರೋಜರ್ ಬಿನ್ನಿ: ಕೃಷಿಯತ್ತ ಒಲವು ತೋರಿದ ಬಿಸಿಸಿಐ ಅಧ್ಯಕ್ಷ

roger binny tractor

ಬೆಂಗಳೂರು: ಟೀಮ್​ ಇಂಡಿಯಾದ ಮಾಜಿ ಆಟಗಾರ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ(BCCI) ಅಧ್ಯಕ್ಷ ರೋಜರ್ ಬಿನ್ನಿ(Roger Binny) ಅವರು ತಮ್ಮ ಕೆಲಸದ ಒತ್ತಡದ ಮಧ್ಯೆಯೂ ಕೃಷಿಯತ್ತ ಒಲವು ತೋರಿದ್ದಾರೆ. ಗುಂಡ್ಲುಪೇಟೆ ಸಮೀಪದಲ್ಲಿ ಜಮೀನು ಖರೀದಿಸಿದ್ದ ಅವರು ಉಲುಮೆ ಮಾಡಲು ಹೊಸ ಟ್ರಾಕ್ಟರ್ ಖರೀದಿಸಿದ್ದಾರೆ. ಶುಕ್ರವಾರ ಚಾಮರಾಜನಗರದಲ್ಲಿ ಟ್ರಾಕ್ಟರ್ ಖರೀದಿಸಿದ ಅವರು ಒಂದು ರೌಂಡ್​ ಓಡಿಸಿ ಗಮನಸೆಳೆದಿದ್ದಾರೆ. ಈ ವಿಡಿಯೊ ಸಾಮಾಜಿ ಜಾಲತಾಣದಲ್ಲಿ ವೈರಲ್​ ಆಗಿದೆ.

1983ರಲ್ಲಿ ಭಾರತ ತಂಡ ಚೊಚ್ಚಲ ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದ ವೇಗಿ ರೋಜರ್ ಬಿನ್ನಿ ಕೃಷಿ ಮೂಲಕ ತಮ್ಮ ಎರಡನೇ ಇನಿಂಗ್ಸ್​ ಆರಂಭ ಮಾಡಲು ಸಿದ್ಧರಾಗಿದ್ದಾರೆ. ಟ್ರಾಕ್ಟರ್ ಖರೀದಿಸಿದ ಬಳಿಕ ಮಾತನಾಡಿದ ಅವರು, “ನಮ್ಮ ಪೂರ್ವಿಕರು ಕೃಷಿಕರಲ್ಲ, ಆದರೆ ನಾನು ಕೃಷಿಯತ್ತ ಆಸಕ್ತಿ ಬೆಳೆಸಿಕೊಂಡಿದ್ದು ನಾನು ಗುಂಡ್ಲುಪೇಟೆಯ ಸಮೀಪದಲ್ಲಿ ಜಮೀನು ಖರೀದಿಸಿದ್ದೇನೆ. ಇಲ್ಲಿ ಕೃಷಿ ಚಟುವಟಿಕೆ ಮಾಡಲು ತುಂಬಾ ಆಸಕ್ತಿಯಲ್ಲಿದ್ದೇನೆ. ಇದೇ ಕಾರಣಕ್ಕೆ ನಾನು ಈ ಟ್ರಾಕ್ಟರ್ ಖರೀದಿ ಮಾಡಿದ್ದೇನೆ” ಎಂದು ತಿಳಿಸಿದರು.

ಇದನ್ನೂ ಓದಿ MS Dhoni: ಓ ಕ್ಯಾಪ್ಟನ್‌, ಮೈ ಕ್ಯಾಪ್ಟನ್!‌ ಧೋನಿಗೆ ಹೀಗೆ ಅಂದಿದ್ದೇಕೆ ಚೆನ್ನೈ ಸೂಪರ್‌ ಕಿಂಗ್ಸ್?

ಧೋನಿ ಕೂಡ ಅಪಟ್ಟ ಕೃಷಿಕ

ಭಾರತಕ್ಕೆ ದ್ವಿತೀಯ ವಿಶ್ವ ಕಪ್​ ಗೆದ್ದು ಕೊಟ್ಟ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಐಪಿಎಲ್​ ಆರಂಭಕ್ಕೂ ಮುನ್ನ ಅವರು ರಾಂಚಿಯಲ್ಲಿ ಗದ್ದೆ ಉಳುಮೆ ಮಾಡಿದ ವಿಡಿಯೊ ಎಲ್ಲಡೆ ವೈರಲ್​ ಆಗಿತ್ತು. ಇದಕ್ಕೂ ಮುನ್ನ ಅವರು ಸ್ಟ್ರಾಬೆರಿ ಬೆಳೆದ ಫೋಟೊ ವೈರಲ್​ ಆಗಿತ್ತು. ನಿವೃತ್ತಿ ಜೀವನವನ್ನು ಧೋನಿ ಕೃಷಿ ರಂಗದಲ್ಲಿ ಕಳೆಯುತ್ತಿದ್ದಾರೆ. ಇದರ ಜತೆಗೆ ದೇಸಿ ಹಸುಗಳು, ಕೋಳಿ, ಮೀನು ಸಾಕಾಣಿಕೆಯನ್ನೂ ಮಾಡುತ್ತಿದ್ದಾರೆ.

Exit mobile version