Site icon Vistara News

Viral Photo: ಏರ್ ಪೋರ್ಟ್ ನೆಲದ ಮೇಲೆ ಹಾಯಾಗಿ ನಿದ್ರಿಸಿದ ಟೀಮ್​ ಇಂಡಿಯಾ ವೇಗಿ

ಬೆಂಗಳೂರು: ಸಾಮಾಜಿಕ ಜಾಲತಾಣದ ಜಾಯಮಾನದಲ್ಲಿ ಏನೇ ಆದರೂ ವೈರಲ್​ ಆಗುತ್ತದೆ. ಎಷ್ಟೋ ವರ್ಷದ ಹಿಂದೆ ನಡೆದ ಘಟನೆಯನ್ನು ಕೆದಕಿ ಟ್ರೆಂಡ್ ಮಾಡುತ್ತಾರೆ. ಇತಂಹದ್ದೇ ಘಟನೆಯೊಂದರ ಫೋಟೊ ಈಗ ವೈರಲ್​ ಆಗಿದೆ. ಟೀಮ್​ ಇಂಡಿಯಾದ ಯುವ ಸ್ಟಾರ್​ ವೇಗಿ ಅರ್ಶ್​ದೀಪ್​ ಸಿಂಗ್(Arshdeep Singh)​ ಅವರು ಏರ್​ ಪೋರ್ಟ್ ನೆಲದ ಮೇಲೆ ನಿದ್ರಿಸಿದ ಫೋಟೊ ವೈರಲ್​(Viral Photo)​ ಆಗಿದೆ.

ಅರ್ಶ್​ದೀಪ್​ ಸಿಂಗ್​ ಅವರು ವಿಮಾನ ನಿಲ್ದಾಣದಲ್ಲಿ ಚೇರ್ ನಡುವೆ ಇರುವ ಕಿರಿದಾದ ಜಾಗದಲ್ಲಿ ತಮ್ಮ ಬ್ಯಾಗನ್ನು ತಲೆಯಡಿಗೆ ಇರಿಸಿ ಸುಖವಾಗಿ ನಿದ್ರಿಸಿದ್ದಾರೆ. ಆದರೆ ಅರ್ಶ್​ದೀಪ್​ ಯಾವಾಗ ಈ ರೀತಿ ನಿದ್ರಿಸಿದ್ದು ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ.

ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿ ಅರ್ಶ್​ದೀಪ್​ ಅಮೋಘ ಬೌಲಿಂಗ್​ ಪ್ರದಶನ ತೋರುವ ಜತೆಗೆ ಹಲುವು ದಾಖಲೆಯನ್ನು ಬರೆದಿದ್ದರು. ಮೊನಚಾದ ಬೌಲಿಂಗ್​ ದಾಳಿಯ ಮೂಲಕ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ  5 ವಿಕೆಟ್​ ಕಿತ್ತ ಸಾಧನೆ ಮಾಡಿದ್ದರು. ಜತೆಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ವೇಗಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ಆ ಪಂದ್ಯದಲ್ಲಿ ಭರ್ತಿ 10 ಓವರ್​ ಬೌಲಿಂಗ್​ ದಾಳಿ ನಡೆಸಿದ ಅರ್ಶ್​ದೀಪ್​ ಸಿಂಗ್​ ಕೇವಲ 37 ರನ್​ ಬಿಟ್ಟುಕೊಟ್ಟು ಪ್ರಮುಖ 5 ವಿಕೆಟ್​ ಕಿತ್ತು. ‘ಸಿಂಗ್​ ಈಸ್​ ಕಿಂಗ್​’ ಎನಿಸಿಕೊಂಡಿದ್ದರು.

ಇದನ್ನೂ ಓದಿ MS Dhoni smoking hookah: ಧೋನಿ ಹುಕ್ಕಾ ಸೇದುವ ವಿಡಿಯೊ ಕಂಡು ದಂಗಾದ ಫ್ಯಾನ್ಸ್​


ಕಳೆದ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದ ವಿರುದ್ಧದ ಪಂದ್ಯಲ್ಲಿ ಪಂಜಾಬ್​ ಪರ ಆಡುವ ಅರ್ಶ್​ದೀಪ್​ ತಮ್ಮ ವೇಗದ ಬೌಲಿಂಗ್​ ಮೂಲಕ ಎರಡು ಸ್ಟಂಪ್​ಗಳನ್ನು ಮುರಿದು ಹಾಕಿದ್ದರು. ಸದ್ಯ ಉತ್ತಮ ಬೌಲಿಂಗ್​ ಲಯದಲ್ಲಿರುವ ಅವರು ಮುಂದಿನ ವಾರದಿಂದ ತವರಿನಲ್ಲಿ ನಡೆಯುವ ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.

ಆಫ್ಘನ್​ ಸರಣಿಗೆ ಇಂದು ಭಾರತ ತಂಡ ಪ್ರಕಟ ಸಾಧ್ಯತೆ

ಅಫಘಾನಿಸ್ತಾನ(IND vs AGF) ವಿರುದ್ಧದ ತವರಿನ ಮೂರು ಪಂದ್ಯಗಳ ಟಿ20 ಸರಣಿಗೆ ಇಂದು(ಭಾನುವಾರ ಜ.7) ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈಗಾಗಲೇ ಅಫಘಾನಿಸ್ತಾನ ಕ್ರಿಕೆಟ್​ ಮಂಡಳಿ ತಂಡವನ್ನು ಪ್ರಕಟಿಸಿದೆ.

ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ನೇತೃತ್ವದ ಸಮಿತಿ ಇಂದು ಸಭೆ ಸೇರುವ ಸಾಧ‍್ಯತೆಯಿದ್ದು, ಸಂಜೆ ವೇಳೆಗೆ ತಂಡ ಪ್ರಕಟವಾಗುವ ಸಾಧ‍್ಯತೆಯಿದೆ. ಜತೆಗೆ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಭವಿಷ್ಯ ಕೂಡಾ ನಿರ್ಧಾರವಾಗಲಿದೆ. ಇದೇ ವಿಚಾರವಾಗಿ ಉಭಯ ಆಟಗಾರರ ಜತೆ ಚರ್ಚಿಸಲು ಆಯ್ಕೆ ಸಮಿತಿ ದಕ್ಷಿಣ ಆಫ್ರಿಕಾಗೂ ತೆರಳಿತ್ತು. ಇದೇ ವರ್ಷ ಟಿ20 ವಿಶ್ವಕಪ್ ನಡೆಯಲ್ಲಿದ್ದು ಇದನ್ನು ಕೂಡ ಗಮನದಲ್ಲಿಟ್ಟುಕೊಂಡು ಬಿಸಿಸಿಐ ಸಮರ್ಥ ತಂಡವನ್ನು ಪ್ರಕಟಿಸಬೇಕಿದೆ. ರೋಹಿತ್​ ಮತ್ತು ಕೊಹ್ಲಿ ಈ ಸರಣಿಯಲ್ಲಿ ಆಡಿದರೆ ಉಭಯ ಆಟಗಾರರು ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವುದು ಖಚಿತ ಎನ್ನಬಹುದು.

Exit mobile version