Site icon Vistara News

viral video: ಹೊಸ ಅವತಾರದಲ್ಲಿ ಕಾಣಿಸಿಕೊಂಡ ಆಸೀಸ್​ ಕ್ರಿಕೆಟಿಗ ಡೇವಿಡ್​ ವಾರ್ನರ್; ವಿಡಿಯೊ ವೈರಲ್​

viral video: Aussie cricketer David Warner appeared in a new avatar; The video is viral

viral video: Aussie cricketer David Warner appeared in a new avatar; The video is viral

ಸಿಡ್ನಿ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಆರಂಭಿಕ ಆಟಗಾರ ಡೇವಿಡ್​ ವಾರ್ನರ್(david warner) ಒಂದಲ್ಲ ಒಂದು​ ಸಿನಿಮಾ ಹಾಡಿಗೆ ಸ್ಟೆಪ್ಸ್​ ಹಾಕಿದ ವಿಡಿಯೊವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಮಿಳಿನ ಐ ಸಿನಿಮಾದ ನಟ ವಿಕ್ರಮ್​ ಅವರಂತೆ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video) ಆಗಿದೆ.

ಟೇವಿಡ್​ ವಾರ್ನರ್​ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಐ ಸಿನೆಮಾದಲ್ಲಿ ವಿಕ್ರಮ್​ ಅವರು ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿರುವ ಮತ್ತು ವಿಲನ್​ಗಳಿಗೆ ಹೊಡೆಯುವ ದೃಶ್ಯಕ್ಕೆ ಡೇವಿಡ್ ವಾರ್ನರ್ ಮುಖಚಹರೆ ಎಡಿಟ್ ಮಾಡಿದ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ IND VS AUS: ಇಂದೋರ್​ ತಲುಪಿದ ಟೀಮ್​ ಇಂಡಿಯಾ ಆಟಗಾರರು

ವಾರ್ನರ್​ ಕೆಲ ದಿನಗಳ ಹಿಂದೆ ಶಾರುಖ್​ ಖಾನ್​ ಅಭಿನಯದ ಪಠಾಣ್​ ಸಿನಿಮಾದ ಟ್ರೇಲರ್​ ಬಿಡುಗಡೆ ಆದಾಗಲೂ ಶಾರುಖ್​ ಮುಖಕ್ಕೆ ತಮ್ಮ ಮುಖ ಮಾರ್ಫ್​ ಮಾಡಿ ವಿಡಿಯೊ ಹಂಚಿಕೊಂಡಿದ್ದರು. ಸದ್ಯ ಅವರು ಭಾರತ ವಿರುದ್ಧದ ದ್ವಿತೀಯ ಟೆಸ್ಟ್​ ಪಂದ್ಯದಲ್ಲಿ ಮೊಹಮ್ಮದ್​ ಸಿರಾಜ್​ ಅವರ ಎಸೆತಕ್ಕೆ ಗಾಯಗೊಂಡು ಚಿಕಿತ್ಸೆಗಾಗಿ ತವರಿಗೆ ಮರಳಿದ್ದಾರೆ. ಏಕದಿನ ಸರಣಿ ವೇಳೆಗೆ ಮತ್ತೆ ತಂಡ ಸೇರುವ ನಿರೀಕ್ಷೆ ಇದೆ.

Exit mobile version