Site icon Vistara News

Viral Video: ಹಳ್ಳಿ ಹುಡುಗಿಯ ಬ್ಯಾಟಿಂಗ್​ ಸ್ಕಿಲ್​ಗೆ ಫಿದಾ ಆದ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​

Sachin Tendulkar

#image_title

ಮುಂಬಯಿ: ಹಳ್ಳಿ ಹುಡುಗಿಯೊಬ್ಬಳ ಬ್ಯಾಟಿಂಗ್​ ಕಂಡು ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್(sachin tendulkar)​ ಅವರು ಅಚ್ಚರಿಗೊಂಡಿದ್ದಾರೆ. ಜತೆಗೆ ಈ ಹುಡುಗಿಯ ಬ್ಯಾಟಿಂಗ್​ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಲವು ವೈರಲ್​ ವಿಡಿಯೋಗಳು(Viral Video) ಹರಿದಾಡುತ್ತಿರುತ್ತವೆ. ಆದರೆ ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಕಾರಣದಿಂದಾಗಿ ಜನರ ಗಮನ ಸೆಳೆದುಬಿಡುತ್ತದೆ. ಇದೀಗ ಇತಂಹದ್ದೇ ವಿಡಿಯೊವೊಂದು ಸಚಿನ್​ ತೆಂಡೂಲ್ಕರ್​ ಅವರ ಮನಗೆದ್ದಿದೆ.

ಕಳೆದ ಸೋಮವಾರ(ಫೆ.13) ಚೊಚ್ಚಲ ಮಹಿಳಾ ಪ್ರೀಮಿಯರ್​ ಲೀಗ್​ನ ಹರಾಜು ಪ್ರಕ್ರಿಯೆ ನಡೆದಿದೆ. ಇದರ ಬೆನ್ನಲ್ಲೇ ಹಳ್ಳಿಯೊಂದರಲ್ಲಿ ಬಾಲಕಿಯೊಬ್ಬಳು ತನ್ನ ಸಹೋದರರೊಂದಿಗೆ ಕ್ರಿಕೆಟ್​ ಆಡುತ್ತಿರುವ ವಿಡಿಯೋವೊಂದನ್ನು ಪೋಸ್ಟ್​ ಮಾಡಿರುವ ನೆಟ್ಟಿಗರು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ರಾಜಸ್ಥಾನ ಕ್ರಿಕೆಟ್​ ಅಸೊಸಿಯೇಷನ್​ ಅಧ್ಯಕ್ಷ ವೈಭವ್​ ಗೆಹ್ಲೋಟ್​ ಅವರಿಗೆ ಟ್ಯಾಗ್​ ಮಾಡಿದ್ದಾರೆ.

ಈ ವಿಡಿಯೊ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದಂತೆ ಸಚಿನ್ ತೆಂಡೂಲ್ಕರ್​ ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿ ಈ ಹುಡುಗಿಯ ಬ್ಯಾಟಿಂಗ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಅತ್ಯದ್ಭುತ ಬ್ಯಾಟಿಂಗ್​ಗೆ ನಾನು ಮನಸೋತಿರುವೆ. ಇದೇ ರೀತಿ ಆಟ ಮುಂದುವರಿಸಿ ಮುಂದೊಂದು ದಿನ ಟೀಮ್​ ಇಂಡಿಯಾದಲ್ಲಿ ನೀವು ಕಾಣಿಸಿಕೊಳ್ಳುವಂತಾಗಲಿ ಎಂದು ಹಾರೈಸಿದ್ದಾರೆ.

ಜಯ್​ ಶಾ ಕೂಡ ಮೆಚ್ಚುಗೆ

ಹಳ್ಳಿ ಹುಡುಗಿಯ ಈ ಪರ್ಫೆಕ್ಟ್​ ಬ್ಯಾಟಿಂಗ್​ ಕಂಡು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿ, ಹುಡುಗಿಯನ್ನು ಕೊಂಡಾಡಿದ್ದಾರೆ. ಮಹಿಳೆಯರ ಕ್ರಿಕೆಟ್ ಭವಿಷ್ಯವು ಉತ್ತಮರ ಕೈಗಳಲ್ಲಿದೆ ಎಂದಿದ್ದಾರೆ.

Exit mobile version