Site icon Vistara News

Viral Video: ಪಿಯಾನೋ ನುಡಿಸಿದ ಲಸಿತ್​ ಮಾಲಿಂಗ; ವಿಡಿಯೊ ವೈರಲ್​

lasith malinga piano playing

ಕೊಲಂಬೊ: ಶ್ರೀಲಂಕಾದ ವಿಶಿಷ್ಟ ಶೈಲಿಯ ಯಾರ್ಕರ್‌ ತಜ್ಞ, ಲಗೋರಿ ಬೌಲರ್‌ ಎಂದೇ ಗುರುತಿಸಲ್ಪಟ್ಟ, ವರ್ಣಮಯ ಕೇಶವಿನ್ಯಾಸದ ಲಸಿತ್ ಮಾಲಿಂಗ(Lasith Malinga) ಅವರು ಪಿಯಾನೋ ಕೀಬೋರ್ಡ್​ ನುಡಿಸಿ ಗಮನಸೆಳೆದಿದ್ದಾರೆ. ಮೇಜರ್​​ ಲೀಗ್​ ಕ್ರಿಕೆಟ್​​ನಲ್ಲಿ ಮುಂಬೈ ಇಂಡಿಯನ್ಸ್ ನ್ಯೂ ಯಾರ್ಕ್​ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಾಲಿಂಗ ತಮ್ಮ ಬಿಡುವಿನ ವೇಳೆ ಪಿಯಾನೋ ನುಡಿಸಿದ್ದಾರೆ.

ಮಾಲಿಂಗ ಅವರು ಪಿಯಾನೋ ನುಡಿಸುತ್ತಿರುವ ವಿಡೊಯೊವನ್ನು ಮುಂಬೈ ಇಂಡಿಯನ್ಸ್ ನ್ಯೂ ಯಾರ್ಕ್ ತಂಡವು ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೊ(Viral Video) ಕಂಡ ಅಭಿಮಾನಿಗಳು ಮಾಲಿಂಗ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು ಪಿಯಾನೋದಲ್ಲಿ ಯಾರ್ಕರ್‌ ಎಸೆಯಿರಿ ಎಂದು ಹಾಸ್ಯಮಯ ಕಮೆಂಟ್ ಮಾಡಿದ್ದಾರೆ.

2021ರಲ್ಲಿ ಲಸಿತ್​ ಮಾಲಿಂಗ ಅವರು ಎಲ್ಲ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಟಿ20 ವಿಶ್ವಕಪ್​ನಲ್ಲಿ ಆಡುವ ಮೂಲಕ ಕ್ರಿಕೆಟ್​ಗೆ ತೆರೆ ಎಳೆಯುವುದು ಅವರ ಯೋಜನೆಯಾಗಿತ್ತು. ಆದರೆ ಕೊರೊನಾದಿಂದ ಇದು ಸಾಧ್ಯವಾಗಲಿಲ್ಲ. 2014ರ ಟಿ20 ವಿಶ್ವಕಪ್‌ ವಿಜೇತ ಶ್ರೀಲಂಕಾ ತಂಡದ ನಾಯಕನಾಗಿದ್ದುದು ಮಾಲಿಂಗ ಪಾಲಿನ ಹೆಗ್ಗಳಿಕೆ. 84 ಟಿ20 ಪಂದ್ಯಗಳಿಂದ 107 ವಿಕೆಟ್‌, 122 ಐಪಿಎಲ್‌ ಪಂದ್ಯಗಳಿಂದ 170 ವಿಕೆಟ್‌ ಉರುಳಿಸಿದ ಸಾಧನೆಯೂ ಇವರದ್ದಾಗಿದೆ. ಎರಡು ಬಾರಿ ಟಿ20 ಕ್ರಿಕೆಟ್‌ ಹ್ಯಾಟ್ರಿಕ್‌ ಹಾಗೂ ಮೂರು ಬಾರಿ ಓಡಿಐ ಕ್ರಿಕೆಟ್‌ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಶ್ರೀಲಂಕಾ ಪರ ಎಲ್ಲ ಸ್ವರೂಪದಲ್ಲಿಯೂ 546 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇದನ್ನೂ ಓದಿ IPL 2023: ಬೌಲಿಂಗ್​ನಲ್ಲಿ ನೂತನ ದಾಖಲೆ ಬರೆದ ಪಂಜಾಬ್​ ತಂಡದ ವೇಗಿ ಕಗಿಸೊ ರಬಾಡ

ವಿರಾಟ್​ ಕೊಹ್ಲಿ ಇದೇ ವರ್ಷದ ಐಪಿಎಲ್​ ವೇಳೆ ಸಂದರ್ಶನವೊಂದರಲ್ಲಿ ಕೇಳಿದ ಐಪಿಎಲ್ GOAT (Greatest Of All Time) ಆಟಗಾರ ಯಾರು ಎಂಬ ಪ್ರಶ್ನೆಗೆ ಲಸಿತ್ ಮಾಲಿಂಗ ಅವರ ಹೆಸರನ್ನು ಹೇಳಿದ್ದರು. ಅವರ ಯಾರ್ಕರ್ ನಿಖರ ಗುರಿಗೆ ಬೀಳುತ್ತದೆ ಇಂತಹ ಯಾರ್ಕರ್​ ಎಸೆತಗಾರರನ್ನು ನೋಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಿಂದೊಮ್ಮೆ ಏಕದಿನ ಪಂದ್ಯದ ವೇಳೆ ವಿರಾಟ್ ಅವರು ಮಾಲಿಂಗ ಓವರ್​ನಲ್ಲಿ ಸತತ ನಾಲ್ಕು ಬೌಂಡರಿ ಬಾರಿಸಿ ಮಿಂಚಿದ್ದರು. ಆದರೂ ಅವರು ಮಾಲಿಂಗ ಐಪಿಎಲ್​ನ ಗ್ರೇಟ್​ ಆಟಗಾರ ಎಂದಿದ್ದರು. ​

Exit mobile version