Site icon Vistara News

Viral Video: ಕೊಹ್ಲಿ ಅಭಿಮಾನಕ್ಕಾಗಿ ರಾಜಸ್ಥಾನ್​ ಜೆರ್ಸಿ ಬಿಟ್ಟು ಆರ್​ಸಿಬಿ ಜೆರ್ಸಿ ತೊಟ್ಟ ಯುವತಿ

viral video

ಜೈಪುರ: ವಿರಾಟ್ ಕೊಹ್ಲಿ(Virat Kohli) ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರು, ಮತ್ತು ಅವರ ಅಭಿಮಾನಿಗಳಿಗೆ ಯಾವುದೇ ಗಡಿಯ ಮಿತಿ ಇಲ್ಲ. ಭಾರತದ ಬದ್ಧ ಎದುರಾಳಿ ಪಾಕಿಸ್ತಾನದಲ್ಲಿಯೂ ವಿರಾಟ್​ ಕೊಹ್ಲಿ ಅಪಾರ ಅಭಿಮಾನಿಗಳಿದ್ದಾರೆ. ಅವರನ್ನು ಭೇಟಿಯಾಗಲೇ ಎಷ್ಟೇ ಮಂದಿ ವರ್ಷಾನುಗಟ್ಟಲೆ ಕಾದು ಕುಳಿತಿರುತ್ತಾರೆ. ಇದೀಗ ರಾಜಸ್ಥಾನ್​ ರಾಯಲ್ಸ್​ ತಂಡದ ಅಭಿಮಾನಿಯೊಬ್ಬಳು ಪಂದ್ಯದ ವೇಳೆ ವಿರಾಟ್​ ಅವರ ಮೇಲಿನ ಅಭಿಮಾನಕ್ಕೋಸ್ಕರ ತಾನು ತೊಟ್ಟಿದ್ದ ರಾಜಸ್ಥಾನ್​ ಜೆರ್ಸಿ(RR jersey) ಮೇಲೆ ಆರ್​ಸಿಬಿಯ ಜೆರ್ಸಿ(RCB jersey) ಧರಿಸಿದ ವಿಡಿಯೊ ವೈರಲ್​(Viral video) ಆಗಿದೆ.

ಶನಿವಾರ ಜೈಪುರದ ಮಾನ್​ ಸಿಂಗ್​ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್​ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಶತಕ ಬಾರಿಸಿ ಸಂಭ್ರಮಿಸಿದರು. ಕೊಹ್ಲಿ ಬ್ಯಾಟಿಂಗ್​ ನಡೆಸುತ್ತಿದ್ದ ವೇಳೆ ಯುವತಿಯೊಬ್ಬಳು ರಾಜಸ್ಥಾನ್​ ರಾಯಲ್ಸ್​ ತಂಡದ ಜೆರ್ಸಿ ತೊಟ್ಟು ತನ್ನ ತಂಡಕ್ಕೆ ಬೆಂಬಲ ಸೂಚಿಸುತ್ತಿದ್ದಳು. ಈಗೆ ವಿರಾಟ್​ ಕೊಹ್ಲಿಯ ಅಪ್ಪಟ್ಟ ಅಭಿಮಾನಿ ಕೂಡ ಆದ್ದರಿಂದ ಆರ್​ಸಿಬಿ ಜೆರ್ಸಿ ಕೂಡ ತೊಟ್ಟುಕೊಂಡಿದ್ದಾಳೆ. ವಿಡಿಯೊದಲ್ಲಿ ಆಕೆ ತಾನು ಕೊಹ್ಲಿಯ ಅಭಿಮಾನಿ ಹಾಗಾಗಿ ಈ ಜೆರ್ಸಿ ತೊಡುತಿದ್ದೇನೆ ಎಂದು ಹೇಳುವುದು ಕಾಣಬಹುದು.

ವಿರಾಟ್ ಕೊಹ್ಲಿ ಶತಕ ಬಾರಿಸಿ ಐಪಿಎಲ್​ನಲ್ಲಿ ತಮ್ಮ 8ನೇ ಶತಕ ದಾಖಲಿಸಿದರು. 72 ಎಸೆತಗಳಲ್ಲಿ ಅಜೇಯ 113 ರನ್ ಗಳಿಸಿದರು. 12 ಬೌಂಡರಿ ಮತ್ತು 4 ಸಿಕ್ಸರ್ ಅವರ ಇನ್ನಿಂಗ್ಸ್ ನಲ್ಲಿತ್ತು. ಆದರೆ ಪಂದ್ಯ ಸೋತ ಕಾರಣ ಅವರ ಈ ಶತಕದಾಟ ವ್ಯರ್ಥವಾಯಿತು. ಇದೇ ಪಂದ್ಯದಲ್ಲಿ ಕೊಹ್ಲಿ ಫೀಲ್ಡಿಂಗ್​ ನಡೆಸುತ್ತಿದ್ದ ವೇಳೆ ಗ್ಯಾಲರಿಯಲ್ಲಿದ್ದ ಅಭಿಮಾನಿ ಏಕಾಏಕಿ ಮೈದಾನಕ್ಕೆ ಓಡಿ ಬಂದು ಕೊಹ್ಲಿಯನ್ನು ತಬ್ಬಿಕೊಂಡಿದ್ದಾನೆ. ಈ ವೇಳೆ ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸಿ ಸ್ಟೇಡಿಯಂನಿಂದ ಹೊರ ಕಳುಹಿಸಿದ್ದಾರೆ.

ಇದನ್ನೂ ಓದಿ IPL 2024: ಈ ಬಾರಿಯ ಐಪಿಎಲ್​ನಲ್ಲಿ ಭಾರೀ ಭದ್ರತಾ ವೈಫಲ್ಯ; ಕೊಹ್ಲಿ ಪ್ರಾಣಕ್ಕೆ ಮತ್ತೆ ಕುತ್ತು

ವಿರಾಟ್​ ಕೊಹ್ಲಿ(Virat Kohli) ಅವರು ಸೋಲಿನ ಹೊರತಾಗಿಯೂ ಐಪಿಎಲ್​ನಲ್ಲಿ(IPL 2024) ಅತ್ಯಧಿಕ ಕ್ಯಾಚ್​ ಪಡೆದ ಸುರೇಶ್​ ರೈನಾ ದಾಖಲೆಯನ್ನು ಮುರಿದಿದ್ದಾರೆ. ರಿಯಾನ್​ ಪರಾಗ್​ ಅವರ ಕ್ಯಾಚ್​ ಹಿಡಿಯುವ ಮೂಲಕ ಐಪಿಎಲ್​ನಲ್ಲಿ ಅತ್ಯಧಿಕ ಕ್ಯಾಚ್​ ಹಿಡಿದ ಫೀಲ್ಡರ್​ ಆಗಿ ಹೊರಹೊಮ್ಮಿದರು. ಪಂದ್ಯಕ್ಕೂ ಮುನ್ನ ಕೊಹ್ಲಿ ಅವರು ಸುರೇಶ್​ ರೈನಾ ಜತೆ ಜಂಟಿ ದಾಖಲೆ ಹೊಂದಿದ್ದರು. ಇದೀಗ ಕ್ಯಾಚ್​ಗಳ ಸಂಖ್ಯೆಯನ್ನು 110ಕ್ಕೆ ಏರಿಸುವ ಮೂಲಕ 109 ಕ್ಯಾಚ್​ ಪಡೆದ ಸುರೇಶ್​ ರೈನಾ ಅವರನ್ನು ಹಿಂದಿಕ್ಕಿದ್ದಾರೆ.

ಸತತ 4ನೇ ಗೆಲುವು ಸಾಧಿಸಿದ ರಾಜಸ್ಥಾನ್​


ಜಾಸ್​ ಬಟ್ಲರ್​(100*) ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ರಾಜಸ್ಥಾನ್​ ತಂಡ ಈ ಪಂದ್ಯವನ್ನು 6 ವಿಕೆಟ್​ಗಳಿಂದ ಗೆದ್ದು ಬೀಗಿತು. ಜತೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೂ ನೆಗೆಯಿತು. ವಿರಾಟ್​ ಕೊಹ್ಲಿಯ ದಾಖಲೆಯ 8ನೇ ಐಪಿಎಲ್ ಶತಕದ ಹೊರತಾಗಿಯೂ ಬೌಲರ್​​ಗಳ ಕೆಟ್ಟ ಪ್ರದರ್ಶನದಿಂದ ಸೊರಗಿದ ರಾಯ್ ಚಾಲೆಂಜರ್ಸ್​ ಬೆಂಗಳೂರು ತಂಡ (Royal Challengers Bangalore) ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ (IPL 2024) ಮತ್ತೊಂದು ಸೋಲಿಗೆ ತುತ್ತಾಯಿತು.

Exit mobile version