Site icon Vistara News

Viral Video: ಪಾಕ್​ ಕ್ರಿಕೆಟಿಗನನ್ನು ಹೊಗಳಿದ ವಿರಾಟ್​ ಕೊಹ್ಲಿ

virat kohli and babar azam

ಮುಂಬಯಿ: ಇನ್ನೇನು ಕೆಲವೇ ದಿನಗಳಲ್ಲಿ ಏಷ್ಯಾ ಕಪ್​ ಟೂರ್ನಿ(Asia Cup 2023) ಆರಂಭಗೊಳ್ಳಲಿದೆ. ಆಗಸ್ಟ್​ 30ಕ್ಕೆ ಟೂರ್ನಿಗೆ ಅಧಿಕೃತ ಚಾಲನೆ ದೊರೆಯಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಮೊದಲ ಪಂದ್ಯ ಸೆಪ್ಟೆಂಬರ್​ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಇತ್ತಂಡಗಳ ಈ ಮುಖಾಮುಖಿಯನ್ನು ಕಾಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾದು ಕುಳಿತಿದ್ದಾರೆ. ಆದರೆ ಪಂದ್ಯಕ್ಕೂ ಮುನ್ನ ವಿರಾಟ್​ ಕೊಹ್ಲಿ(Virat Kohli) ಅವರು ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ(Babar Azam) ಅವರನ್ನು ಗುಣಗಾನ ಮಾಡಿದ ವಿಡಿಯೊವೊಂದು ವೈರಲ್​ ಆಗಿದೆ(Viral Video).

ಬಾಬರ್​ ಶ್ರೇಷ್ಠ ಆಟಗಾರ

ವಿರಾಟ್​ ಕೊಹ್ಲಿ ಅವರು ಸಂದರ್ಶನವೊಂದರಲ್ಲಿ ಪಾಕ್​ ತಂಡದ ಬಾಬರ್ ಆಟದ ಬಗ್ಗೆ​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಬಾಬರ್​ ಅವರು ಪ್ರಸ್ತುತ ಕ್ರಿಕೆಟ್​ನಲ್ಲಿ ವಿಶ್ವ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಮೂರು ಮಾದರಿಯ ಕ್ರಿಕೆಟ್​ನಲ್ಲಿಯೂ ಅವರು ಶ್ರೇಷ್ಠ ಪ್ರದರ್ಶನ ತೋರುತ್ತಲೇ ಬಂದಿದ್ದಾರೆ. ಅವರ ಕವರ್​ ಡ್ರೈವ್​ ಉತ್ತಮವಾಗಿದೆ. ನಾನು ಅವರ ಬ್ಯಾಟಿಂಗ್​ ಆನಂದಿಸುತ್ತೇನೆ” ಎಂದು ವಿರಾಟ್ ಅವರು ಈ ವಿಡಿಯೊದಲ್ಲಿ ಹೇಳಿದ್ದಾರೆ.

ಒಂದು ವರ್ಷ ಹಳೆಯ ವಿಡಿಯೊ

ಅಸಲಿಗೆ ವಿರಾಟ್​ ಕೊಹ್ಲಿ ಅವರು ಬಾಬರ್​ ಅವನ್ನು ಹೊಗಳಿದ್ದು ಕಳೆದ ವರ್ಷದ ಏಷ್ಯಾಕಪ್​ ಟೂರ್ನಿಯ(Asia Cup 2022) ಸಂದರ್ಭದಲ್ಲಿ. ಆದರೆ ವಿಡಿಯೊ ಮಾತ್ರ ವೈರಲ್​ ಆಗಿದ್ದು ಈ ವರ್ಷ. ಈ ವಿಡಿಯೊ ವೈರಲ್​ ಆಗಲು ಕಾರಣವೂ ಇದೆ. ಅದೆನೆಂದರೆ ಈ ಬಾರಿಯ ಏಷ್ಯಾಕಪ್​ಗೆ ಇನ್ನು ಎರಡು ವಾರಗಳು ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಅಂದಿನ ಏಷ್ಯಾಕಪ್​ ಸ್ವಾರಸ್ಯಕರ ವಿಚಾರಗಳನ್ನು ನೆಟ್ಟಿಗರು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಮೆಲುಕು ಹಾಕುತ್ತಿದ್ದಾರೆ.

ಟ್ವಿಟರ್​ ವಿಡಿಯೊ ಇಲ್ಲಿದೆ

ಇದನ್ನೂ ಓದಿ Yashasvi Jaiswal: ಅರ್ಧಶತಕದ ಮೂಲಕ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್​

ಏಷ್ಯಾಕಪ್​ಗೆ ಈಗಾಗಲೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಪ್ರಕಟಗೊಂಡಿದೆ. ಭಾರತ ತನ್ನ ತಂಡವನ್ನು ಸೋಮವಾರ ಪ್ರಕಟಿಸುವ ಸಾಧ್ಯತೆ ಇದೆ. 50 ಓವರ್​ ಮಾದರಿಯಲ್ಲಿ ನಡೆಯುವ ಈ ಟೂರ್ನಿ ಅಕ್ಟೋಬರ್​ನಲ್ಲಿ ಆರಂಭಗೊಳ್ಳುವ ಏಕದಿನ ವಿಶ್ವಕಪ್​ಗೂ ಮುನ್ನ ಪೂರ್ವಾಭ್ಯಾಸ ನಡೆಸಲು ಉತ್ತಮ ವೇದಿಕೆಯಾಗಿದೆ.

ಕ್ಯಾಂಡಿಯಲ್ಲಿ ಭಾರತ ಪಾಕ್​ ಮುಖಾಮುಖಿ

ಏಷ್ಯಾಕಪ್​ ಆಗಸ್ಟ್​ 31ರಿಂದ ಸೆಪ್ಟಂಬರ್​ 17ರ ತನಕ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್​ ಮಾದರಿಯಲ್ಲಿ ನಡೆಯಲಿದೆ. ಸಾಂಪ್ರದಾಯಿಯ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕ್​ ನಡುವಣ ಪಂದ್ಯ ಸೆಪ್ಟಂಬರ್​ 2ರಂದು ಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ನಾಲ್ಕು ಪಂದ್ಯಗಳು ಪಾಕ್​ನಲ್ಲಿ ನಡೆಸಿ ಉಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. 50 ಓವರ್​ಗಳ ಮಾದರಿಯಲ್ಲಿ ನಡೆಯುವ ಈ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಭಾಗವಹಿಸಲಿವೆ.

Exit mobile version