Site icon Vistara News

Virat And Tamanna: ತಮನ್ನಾ ಜತೆ ಕೊಹ್ಲಿ ಡೇಟಿಂಗ್!; ತುಟಿ ಬಿಚ್ಚಿದ ನಟಿ

virat kohli and tamanna bhatia love story

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(virat kohli) ಅವರು ಬಾಲಿವುಡ್​ ನಟಿ ಅನುಷ್ಕಾ ಶರ್ಮ(Anushka Sharma) ಜತೆ ಮದುವೆಯಾಗಿ ಈ ಜೋಡಿಗೆ ಒಂದು ಮಗುವೂ ಕೂಡ ಇದೆ. ಆದರೆ ಮದುವೆಗೂ ಮುನ್ನ ಕೊಹ್ಲಿ ಹಲವು ನಟಿಯರ ಜತೆಗೆ ಡೇಟಿಂಗ್​ ನಡೆಸಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಕೊಹ್ಲಿ ಜತೆಗಿನ ಡೇಟಿಂಗ್(Virat And Tamanna)​ ವಿಚಾರದಲ್ಲಿ ಮಿಲ್ಕಿ ಬ್ಯೂಟಿ ಖ್ಯಾತಿಯ ನಟಿ ತಮನ್ನಾ ಭಾಟಿಯಾ(Tamanna Bhatia) ಮನ ಬಿಚ್ಚಿ ಮಾತನಾಡಿದ್ದಾರೆ.

ಸದ್ಯ ‘ಗಲ್ಲಿ ಬಾಯ್’ ಖ್ಯಾತಿಯ ವಿಜಯ್ ವರ್ಮಾ ಜತೆಗೆ ಡೇಟಿಂಗ್ ನಡೆಸುತ್ತಿರುವ ತಮನ್ನಾ ಅವರು ತಮ್ಮ ಮುಂದಿನ ಚಿತ್ರದ ಪ್ರಚಾರದ ವೇಳೆ ಕೊಹ್ಲಿ ಜತೆಗಿನ ಡೇಟಿಂಗ್​ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. “2018ರಲ್ಲಿ ಜಾಹೀರಾತು ಒಂದರ ಶೂಟಿಂಗ್​ನಲ್ಲಿ ಕೊಹ್ಲಿ ಜತೆ ನಟಿಸಿದ್ದೆ, ಆದರೆ ಇದನ್ನು ಕೆಲವರು ನಾವಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದೇವೆ, ಡೇಟಿಂಗ್ ಕೂಡ ನಡೆಸುತ್ತಿದ್ದೇವೆ​ ಎಂದು ಬಿಂಬಿಸಿದ್ದರು. ನನಗೆ ಈಗಲೂ ಸರಿಯಾಗಿ ನೆನಪಿದೆ, ಅಂದು ನಾನು ಶೂಟಿಂಗ್​ ವೇಳೆ ಕೊಹ್ಲಿ ಜತೆ ಕೇವಲ 4 ಪದಗಳಷ್ಟೇ ಮಾತನಾಡಿದ್ದೆ. ಬಳಿಕ ಎಂದೂ ಕೊಹ್ಲಿ ಅವರನ್ನು ಭೇಟಿ ಮಾಡಿಲ್ಲ. ನಾವು ಕೆಲಸ ಮಾಡುವ ಹೆಚ್ಚಿನ ನಟರಿಗಿಂತ ಕೊಹ್ಲಿ ತುಂಬಾ ಶ್ರೇಷ್ಠ ವ್ಯಕ್ತಿ” ಎಂದು ಹೇಳುವ ಮೂಲಕ ಕೊಹ್ಲಿ ಜತೆಗಿನ ಹಳೇಯ ಡೇಟಿಂಗ್​ ರೂಮರ್ಸ್​ಗೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ Tamannaah Bhatia : 18 ವರ್ಷಗಳ ಬಳಿಕ ಮುತ್ತಿನ ಪ್ರತಿಜ್ಞೆ ಮುರಿದಿದ್ದೇಕೆ ತಮನ್ನಾ ಭಾಟಿಯಾ? ಕಿಡಿ ಹಾರಿಸಿದೆ ಟಾಪ್‌ಲೆಸ್‌ ಕಿಸ್‌

ವಿಜಯ್‌ ವರ್ಮಾ ಅವರ ಜತೆಗಿನ ಪ್ರೀತಿ ಬಗ್ಗೆ ಮಾತನಾಡಿರುವ ತಮನ್ನಾ, “ವಿಜಯ್‌ಗೆ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನವಿದೆ. ಅವರು ನನಗೆ ಸಂತೋಷವನ್ನು ತಂದುಕೊಡುತ್ತಾರೆ” ಎಂದು ಸಂಭ್ರಮದಿಂದ ಹೇಳಿಕೊಂಡಿದ್ದಾರೆ. ಒಟ್ಟಿಗೆ ಕೆಲಸ ಮಾಡಿದ ಮಾತ್ರಕ್ಕೆ ಭಾವನಾತ್ಮಕವಾಗಿ ನಾವು ಕನೆಕ್ಟ್‌ ಆಗಿಬಿಡುವುದಿಲ್ಲ. ಆದರೆ ಕೆಲವರೊಂದಿಗೆ ಅತ್ಯಂತ ಆಳವಾಗಿ ಭಾವನಾತ್ಮಕವಾಗಿ ಬೆಸುಗೆ ಮಾಡಿಕೊಂಡುಬಿಡುತ್ತೇವೆ” ಎಂದು ಹೇಳುವ ಮೂಲಕ ವಿಜಯ್‌ ವರ್ಮಾ ಜತೆಗೆ ಮದುವೆಯಾಗುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

18 ವರ್ಷಗಳ ಪ್ರತಿಜ್ಜೆ ಮುರಿದ ತಮನ್ನಾ

ತಮನ್ನಾ ಭಾಟಿಯಾ (Tamannaah Bhatia) ಸಿನಿಮಾ ಕ್ಷೇತ್ರಕ್ಕೆ ಬಂದು 18 ವರ್ಷಗಳಾದರೂ ಅವರು ಇದುವರೆಗೆ ಯಾವುದೇ ಸಿನಿಮಾದಲ್ಲಿ ಮುತ್ತು ಕೊಡುವ ಸೀನ್‌ಗೆ ಒಪ್ಪಿಗೆ ನೀಡಿರಲಿಲ್ಲ. ಆದರೆ ಇದೀಗ ವೆಬ್ ಸೀರಿಸ್‌ನಲ್ಲಿ​ ಈ ನಟಿ ತಮ್ಮ ನಿಯಮವನ್ನು ಮುರಿದು ಭರ್ಜರಿಯಾಗಿ ಕಿಸ್‌ ಕೊಟ್ಟು ಎಲ್ಲಡೆ ಸುದ್ದಿಯಾಗಿದ್ದಾರೆ. ತಾವು ಹೀಗೆ ಇದ್ದಕ್ಕಿದ್ದಂತೆ ನಿಯಮ ಮುರಿದಿರುವುದಕ್ಕೆ ಸೂಕ್ತ ಕಾರಣವನ್ನೂ ನೀಡಿರುವ ಅವರು, “ನಮ್ಮ ದೇಶ ವಿಶಾಲವಾಗಿದೆ. ಇಲ್ಲಿ ಹಲವು ವಿಭಾಗಗಳಲ್ಲಿ ವಿಕಸನಗಳು ಸಂಭವಿಸಿವೆ. ಇನ್ನೂ ಅಭಿವೃದ್ಧಿಯಾಗಬೇಕಿರುವುದು, ವಿಕಸನ ಕಾಣಬೇಕಿರುವುದು ಸಾಕಷ್ಟಿದೆ. ನಾನು ಮಾತ್ರ ಬದಲಾವಣೆಗೆ ಒಗ್ಗಿಕೊಳ್ಳದೆ ಹಾಗೆಯೇ ಇರುವುದಕ್ಕೆ ನನಗೆ ಇಷ್ಟವಿಲ್ಲ. ಹಾಗಾಗಿ ಈಗ ನಿಯಮ ಮುರಿದಿದ್ದೇನೆ. 18 ವರ್ಷದ ನಿಯಮ ಮುರಿದು ಪ್ರಸಿದ್ಧಳಾಗಬೇಕು ಎನ್ನುವ ಇರಾದೆ ಇದರಲ್ಲಿಲ್ಲ. ಇದೊಂದು ಕಥೆಯ ಅವಶ್ಯಕತೆಗಷ್ಟೇ” ಎಂದು ಹೇಳಿಕೊಂಡಿದ್ದಾರೆ.

Exit mobile version