Site icon Vistara News

Virat Kohli | ವಿರಾಟ್‌ ಫಾರ್ಮ್‌ನಲ್ಲಿ ಇಲ್ಲದ ವೇಳೆ ಬೆಂಬಲಿಸಿದ್ದೆ, ನಮ್ಮ ವಿರುದ್ಧ ಅವರು ಚೆನ್ನಾಗಿ ಆಡಬಾರದು!

virat kohli

ಅಡಿಲೇಡ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಗುರುವಾರ (ಅಕ್ಟೋಬರ್‌ ೧೦) ಟಿ೨೦ ವಿಶ್ವ ಕಪ್‌ನ ಸೆಮಿಫೈನಲ್‌ ಪಂದ್ಯ ನಡೆಯಲಿದೆ. ಉಪಾಂತ್ಯದ ಈ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರಲಿದ್ದು, ಫೈನಲ್‌ ಪ್ರವೇಶಕ್ಕೆ ಇತ್ತಂಡಗಳೂ ಭರ್ಜರಿ ಹೋರಾಟ ನಡೆಸಲಿವೆ. ಏತನ್ಮಧ್ಯೆ, ಭಾರತ ತಂಡದ ಸ್ಟಾರ್‌ ಬ್ಯಾಟರ್‌ಗಳಾದ ವಿರಾಟ್‌ ಕೊಹ್ಲಿ ಹಾಗೂ ಸೂರ್ಯಕುಮಾರ್‌ ಯಾದವ್‌ ಎದುರಾಳಿ ತಂಡಕ್ಕೆ ಭಯ ಹುಟ್ಟಿಸಿದ್ದಾರೆ. ಅವರು ಕ್ರೀಸ್‌ನಲ್ಲಿ ಇರುವಷ್ಟು ಹೊತ್ತು ಅಪಾಯ ತಪ್ಪಿದ್ದಲ್ಲ ಎಂಬುದು ಅವರ ಯೋಜನೆ. ಹೀಗಾಗಿ ಅವರಿಬ್ಬರ ವಿಕೆಟ್‌ಗಾಗಿ ರಣತಂತ್ರ ರೂಪಿಸುತ್ತಿದೆ.

ಈ ಎಲ್ಲ ಚರ್ಚೆಗಳ ನಡುವೆ ಇಂಗ್ಲೆಂಡ್‌ ತಂಡದ ಮಾಜಿ ಬ್ಯಾಟರ್‌ ಒಬ್ಬರು ವಿರಾಟ್‌ ಕೊಹ್ಲಿ ಮುಂದಿನ ಪಂದ್ಯದಲ್ಲಿ ಚೆನ್ನಾಗಿ ಅಡಲಾರರು ಎಂದು ಹೇಳಿದ್ದಾರೆ. ವಿರಾಟ್‌ ಕೊಹ್ಲಿ ಫಾರ್ಮ್‌ ಕಳೆದುಕೊಂಡಿದ್ದ ವೇಳೆ ಅವರಿಗೆ ನಾನು ಬೆಂಬಲವಾಗಿ ನಿಂತಿದ್ದೆ. ಹೀಗಾಗಿ ಇಂಗ್ಲೆಂಡ್‌ ವಿರುದ್ಧ ಅವರು ಕನಿಕರ ತೋರಿಸಲಿದ್ದಾರೆ ಎಂದು ಹೇಳಿದ್ದಾರೆ.

ಕೆವಿನ್‌ ಪೀಟರ್ಸನ್‌ ಕೊಹ್ಲಿ ಬ್ಯಾಟಿಂಗ್‌ ಕುರಿತು ವಿಚಿತ್ರ ಭವಿಷ್ಯ ನುಡಿದವರು. ವಿರಾಟ್‌ ಕೊಹ್ಲಿ ಮೂರು ವರ್ಷಗಳ ಕಾಲ ಫಾರ್ಮ್‌ ಕಳೆದಕೊಂಡಿದ್ದರು. ಈ ವೇಳೆ ಸದಾ ಅವರ ಬೆಂಬಲಕ್ಕೆ ನಿಂತಿದ್ದೆ. ಅವರು ಉತ್ತಮವಾಗಿ ಆಡಬೇಕು ಎಂಬುದು ಕ್ರಿಕೆಟ್‌ ಜಗತ್ತಿನ ಬಯಕೆ. ವಿರಾಟ್‌ ಸ್ಟೇಡಿಯಮ್‌ನಲ್ಲಿರುವ ಪ್ರೇಕ್ಷಕರಿಗೆಲ್ಲರಿಗೂ ಸಂತಸವನ್ನು ಉಣಬಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಒಬ್ಬ ಗೆಳೆಯನಾಗಿ ನನಗೂ ಆ ಬಗ್ಗೆ ಸಂತಸವಿದೆ. ಆದರೆ, ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಅವರು ನನಗಾಗಿ ಆಡುವುದಿಲ್ಲ,” ಎಂಬುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ | Virat Kohli | ವಿರಾಟ್‌ ಕೊಹ್ಲಿಗೆ ಅಕ್ಟೋಬರ್‌ ತಿಂಗಳ ಐಸಿಸಿ ಶ್ರೇಷ್ಠ ಆಟಗಾರ ಪ್ರಶಸ್ತಿ

Exit mobile version