Site icon Vistara News

Virat Kohli 1st Century: ಕೊಹ್ಲಿಯ ಚೊಚ್ಚಲ ಅಂತಾರಾಷ್ಟ್ರೀಯ ಶತಕಕ್ಕೆ ತುಂಬಿತು 14 ವರ್ಷ

virat kohli 1st century

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ, ದಾಖಲೆಗಳ ಸರದಾರ, ಕಿಂಗ್​ ಖ್ಯಾತಿಯ(king kohli) ವಿರಾಟ್​ ಕೊಹ್ಲಿ(Virat Kohli) ತಮ್ಮ 15 ವರ್ಷಗಳ ಕ್ರಿಕೆಟ್​ ವೃತ್ತಿ ಬದುಕಿನಲ್ಲಿ ಅನೇಕ ಸಾಧನಡೆಗಳನ್ನು ಮಾಡಿದ್ದಾರೆ. ಅವರ ಚೊಚ್ಚಲ ಅಂತಾರಾಷ್ಟ್ರೀಯ ಶತಕಕ್ಕೆ (virat kohli cricket journey) ಇಂದಿಗೆ 14 ವರ್ಷಗಳು(Virat Kohli 1st Century) ತುಂಬಿದೆ.

ಲಂಕಾ ವಿರುದ್ಧ ಪದಾರ್ಪಣೆ

ವಿರಾಟ್​ ಕೊಹ್ಲಿ ಅವರು ಆಗಸ್ಟ್​ 18, 2008ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದರು. ಆಗ ತಾನೆ ಅಂಡರ್​-19 ವಿಶ್ವಕಪ್​ ಗೆದ್ದಿದ್ದ ಅವರಿಗೆ ಸಚಿನ್​ ತೆಂಡೂಲ್ಕರ್​ ಮತ್ತು ವೀರೇಂದ್ರ ಸೆಹವಾಗ್​ ಅವರ ಅನುಪಸ್ಥಿತಿಯಲ್ಲಿ ಆರಂಭಿಕಾಗಿ ಆಡುವ ಅವಕಾಶ ನೀಡಲಾಗಿತ್ತು. ತಮ್ಮ ಚೊಚ್ಚಲ ಪಂದ್ಯದಲ್ಲಿ ಅವರು 12 ರನ್​ ಗಳಿಸಿ ನುವಾನ್ ಕುಲಶೇಖರ ಅವರಿಗೆ ವಿಕೆಟ್​ ಒಪ್ಪಿಸಿದ್ದರು. ಆದರೆ ನಾಲ್ಕನೇ ಪಂದ್ಯದಲ್ಲಿ 54 ರನ್​ ಗಳಿಸಿ ತಮ್ಮ ಚೊಚ್ಚಲ ಅರ್ಧಶತಕವನ್ನು ಬಾರಿಸಿದ್ದರು. ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ವೇಳೆ ಕೇವಲ 8 ಲಿಸ್ಟ್​ ಎ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದರು.

ಡಿಸೆಂಬರ್ 24, 2009ರಲ್ಲಿ ಶ್ರೀಲಂಕಾ ವಿರುದ್ಧ ಕೊಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅವರು 111 ಎಸೆತಗಳಲ್ಲಿ 1 ಸಿಕ್ಸರ್​ ಹಾಗೂ 14 ಫೋರ್​ಗಳೊಂದಿಗೆ 107 ರನ್ ಬಾರಿಸಿ ಔಟಾದರು. ಇದು ಅವರ ಚೊಚ್ಚಲ ಅಂತಾರಾಷ್ಟ್ರೀಯ ಶತಕವಾಗಿತ್ತು. ಇಂದಿಗೆ ಕೊಹ್ಲಿಯ ಚೊಚ್ಚಲ ಶತಕಕ್ಕೆ 14 ವರ್ಷಗಳು ತುಂಬಿದೆ. ಕೊಹ್ಲಿಯ ಅಂದಿನ ಶತಕದ ಫೋಟೊವನ್ನು ಹಂಚಿಕೊಂಡು ಅವರ ಅಭಿಮಾನಿಗಳು ನೆಚ್ಚಿನ ಆಟಗಾರನಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.

ಹೃದಯ ಗೆದ್ದಿದ್ದ ಗಂಭೀರ್​

ಅಂದಿನ ಈ ಪಂದ್ಯದಲ್ಲಿ ಆರಂಭಿಕ ಆಘಾತಕ್ಕೆ ಒಳಗಾಗಿದ್ದ ಭಾರತಕ್ಕೆ ಆಸರೆಯಾಗಿದ್ದು ಗೌತಮ್​ ಗಂಭೀರ್​ ಮತ್ತು ವಿರಾಟ್​ ಕೊಹ್ಲಿ. ಉಭಯ ಆಟಗಾರರು ಸೇರಿಕೊಂಡು ಶತಕ ಬಾರಿಸಿ ಮೂರನೇ ವಿಕೆಟ್​ಗೆ ಬರೋಬ್ಬರಿ 224 ರನ್​ಗಳ ಜತೆಯಾಟವಾಡುವ ಮೂಲಕ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಅಜೇಯ 150 ರನ್​ ಬಾರಿಸಿದ್ದ ಗೌತಮ್ ಗಂಭೀರ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗಿತ್ತು. ಆದರೆ, ಗಂಭೀರ್​ ಅವರು ಈ ಪ್ರಶಸ್ತಿಯನ್ನು ಯುವ ಆಟಗಾರನಾಗಿದ್ದ ಕೊಹ್ಲಿಗೆ ನೀಡಿ ಕ್ರಿಕೆಟ್​ನಲ್ಲಿ ಇನ್ನೂ ಸಾಧನೆಗಳನ್ನು ಮಾಡಬೇಕೆನ್ನುವ ನಿಟ್ಟಿನಲ್ಲಿ ಅವರುನ್ನು ಪ್ರೋತ್ಸಾಹಿಸಿದ್ದರು. ಗೌತಮ್ ಗಂಭೀರ್ ಅವರ ಈ ನಡೆ ಎಲ್ಲ ಎಲ್ಲರ ಹೃದಯ ಗೆದ್ದಿತ್ತು. ವಿಪರ್ಯಾಸವೆಂದರೆ ಈಗ ಉಭಯ ಆಟಗಾರರು ಬದ್ಧ ವೈರಿಗಳಾಗಿದ್ದು. ಮೈದಾನದಲ್ಲೇ ಕಚ್ಚಾಟ ನಡೆಸುವ ಮಟ್ಟಕ್ಕೆ ಬಂದು ನಿಂತಿದ್ದಾರೆ.

ಇದನ್ನೂ ಓದಿ Virat kohli: ಲಂಡನ್​ನಿಂದ ಮರಳಿದ ಕೊಹ್ಲಿ; ಏಕಾಏಕಿ ತಂಡ ಬಿಟ್ಟು ತೆರಳಿದ್ದು ಯಾಕೆ?

ಅಮೋಘ ಸಾಧನೆ

35 ವರ್ಷದ ವಿರಾಟ್ ಕೊಹ್ಲಿ ಅವರು ಇತ್ತೀಚೆಗೆ ಮುಕ್ತಾಯ ಕಂಡಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಸಚಿನ್​ ಅವರ ಏಕದಿನ ಕ್ರಿಕೆಟ್​ನ ಸಾರ್ವಕಾಲಿಕ 49 ಶತಕದ ದಾಖಲೆಯನ್ನು ಮುರಿದಿದ್ದರು. ಈ ಮೂಲಕ ಏಕದಿನ ಕ್ರಿಕೆಟ್​ನೂತನ ಸಾಮ್ರಾಟನಾಗಿ ಹೊರಹೊಮ್ಮಿದ್ದರು. ಇದುವರೆಗೆ ಒಟ್ಟು 292 ಏಕದಿನ ಪಂದ್ಯಗಳನ್ನು ಆಡಿದ್ದು 58.68 ರ ಸರಾಸರಿಯಲ್ಲಿ 13848 ರನ್ ಗಳಿಸಿದ್ದಾರೆ. ಇದರಲ್ಲಿ 50 ಶತಕ ಮತ್ತು 72 ಅರ್ಧಶತಕ ಒಳಗೊಂಡಿದೆ. ಬೌಲಿಂಗ್​ನಲ್ಲೂ 5 ವಿಕೆಟ್ ಪಡೆದಿದ್ದಾರೆ. ಟೆಸ್ಟ್​ನಲ್ಲಿ 111 ಪಂದ್ಯಗಳಲ್ಲಿ 8676 ರನ್ ಗಳಿಸಿದ್ದು, 29 ಶತಕ, 7 ದ್ವಿಶತಕ ಮತ್ತು 29 ಅರ್ಧಶತಕ ಸಿಡಿಸಿದ್ದಾರೆ. 254 ಅವರ ಗರಿಷ್ಠ ವೈಯಕ್ತಿಕ ಮೊತ್ತಾವಾಗಿದೆ. 115 ಟಿ20 ಪಂದ್ಯವಾಡಿ 4,008 ರನ್ ಬಾರಿಸಿದ್ದಾರೆ. ಇದರಲ್ಲಿ 37 ಅರ್ಧಶತಕ ಮತ್ತು 1 ಶತಕ ದಾಖಲಾಗಿದೆ.

Exit mobile version