Site icon Vistara News

Virat Kohli: ಕೊಹ್ಲಿಯ 35ನೇ ಹುಟ್ಟುಹಬ್ಬಕ್ಕೆ ಸಕಲ ಸಿದ್ಧತೆ; ಏನೆಲ್ಲ ವಿಶೇಷತೆ?

Virat Kohli

ಕೋಲ್ಕೊತಾ: ಭಾನುವಾರ ಇಲ್ಲಿನ ಈಡನ್‌ ಗಾರ್ಡನ್‌ನಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ವಿರಾಟ್​ ಕೊಹ್ಲಿಗೆ(Virat Kohli) ವಿಶೇಷವಾಗಿದೆ. ಏಕೆಂದರೆ ಕೊಹ್ಲಿ(Virat Kohli birthday) ಅವರ 35ನೇ ಜನ್ಮದಿನಾಚರಣೆ. ಹೀಗಾಗಿ ಈ ಪಂದ್ಯ ಅವರಿಗೆ ವಿಶೇಷ ಮತ್ತು ಸ್ಮರಣೀಯವಾಗಿರಲಿದೆ. ಸದ್ಯ 48 ಏಕದಿನ ಶತಕ ಬಾರಿಸಿರುವ ಕೊಹ್ಲಿ ತಮ್ಮ ಜನ್ಮದಿದಂದೇ ಶತಕ ಬಾರಿಸಿ ಸಚಿನ್​ ತೆಂಡೂಲ್ಕರ್​ ಅವರ ಸರ್ವಾಕಾಲಿಕ 49 ಶತಕದ ದಾಖಲೆಯನ್ನು ಸರಿಗಟ್ಟಲಿ ಎನ್ನುವುದು ಕೊಹ್ಲಿ ಅಭಿಮಾನಿಗಳ ಆಶಯವಾಶವಾಗಿದೆ.

70 ಸಾವಿರ ಮಾಸ್ಕ್​ ವಿತರಣೆ

ವಿರಾಟ್​ ಕೊಹ್ಲಿಯ ಜನ್ಮದಿನವಾದ ಕಾರಣ ಬಂಗಾಳ ಕ್ರಿಕೆಟ್‌ ಮಂಡಳಿ ವಿನೂತನ ಶೈಲಿಯ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ಪಂದ್ಯ ನಡೆಯುವ ವೇಳೆ 70 ಸಾವಿರ ಕೊಹ್ಲಿಯ ಫೋಟೊ ಇರುವ ಮಾಸ್ಕ್​ಗಳನ್ನು ಅಭಿಮಾನಿಗಳಿಗೆ ಉಚಿತವಾಗಿ ವಿತರಿಸಲಿದೆ. ಬರುವ ಅಭಿಮಾನಿಗಳೆಲ್ಲ ಕೊಹ್ಲಿ ಅವರನ್ನು ಪ್ರೋತ್ಸಾಹಿಸಬೇಕೆನ್ನುವುದು ಇದರ ಉದ್ದೇಶವಾಗಿದೆ. ಇದು ಮಾತ್ರವಲ್ಲದೆ ಪಂದ್ಯ ಆರಂಭಕ್ಕೂ ಮುನ್ನ ಮೈದಾನದಲ್ಲಿ ಕೇಕ್‌ ಕತ್ತರಿಸುವ ಯೋಜನೆಯನ್ನೂ ಬಂಗಾಳ ಸಂಸ್ಥೆ ಮಾಡಿದೆ.

ಇದನ್ನೂ ಓದಿ ಭಾರತ-ದಕ್ಷಿಣ ಆಫ್ರಿಕಾ ವಿಶ್ವಕಪ್ ದಾಖಲೆ, ಪಿಚ್​ ರಿಪೋರ್ಟ್, ಸಂಭಾವ್ಯ ತಂಡ ಹೇಗಿದೆ?

ಕೊಹ್ಲಿ ಸಾಧನೆ

ವಿರಾಟ್ ಕೊಹ್ಲಿ ಅವರು ಇದುವರೆಗೆ ಒಟ್ಟು 288* ಏಕದಿನ ಪಂದ್ಯಗಳನ್ನು ಆಡಿ 58.27 ರ ಸರಾಸರಿಯಲ್ಲಿ 13,525 ರನ್ ಗಳಿಸಿದ್ದಾರೆ. ಇದರಲ್ಲಿ 48* ಶತಕ ಮತ್ತು 71 ಅರ್ಧಶತಕ ಒಳಗೊಂಡಿದೆ. ಬೌಲಿಂಗ್​ನಲ್ಲೂ 4 ವಿಕೆಟ್ ಪಡೆದಿದ್ದಾರೆ. ಟೆಸ್ಟ್​ನಲ್ಲಿ 111 ಪಂದ್ಯಗಳಲ್ಲಿ 8676 ರನ್ ಗಳಿಸಿದ್ದು, 29 ಶತಕ, 7 ದ್ವಿಶತಕ ಮತ್ತು 29 ಅರ್ಧಶತಕ ಸಿಡಿಸಿದ್ದಾರೆ. 254 ಅವರ ಗರಿಷ್ಠ ವೈಯಲ್ತಿಕ ಮೊತ್ತಾವಾಗಿದೆ. 115 ಟಿ20 ಪಂದ್ಯವಾಡಿ 4,008 ರನ್ ಬಾರಿಸಿದ್ದಾರೆ. ಇದರಲ್ಲಿ 37 ಅರ್ಧಶತಕ ಮತ್ತು 1 ಶತಕ ದಾಖಲಾಗಿದೆ.

ಬೌಲಿಂಗ್​ ಅನುಭವ

ವಿರಾಟ್​ ಕೊಹ್ಲಿ ಕೂಡ ಬೌಲಿಂಗ್​ ಅನುಭವವನ್ನು ಹೊಂದಿದ್ದಾರೆ. 2015ರ ವಿಶ್ವಕಪ್​ನಲ್ಲಿ ಆಸೀಸ್​ ವಿರುದ್ಧ ಮತ್ತು ಇದಕ್ಕೂ ಮುನ್ನ 2011ರಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ಬೌಲಿಂಗ್​ ನಡೆಸಿದ್ದರು. ಇಲ್ಲಿ ತಲಾ ಓವರ್ ಬೌಲಿಂಗ್​ ನಡೆಸಿ ವಿಕೆಟ್​ ಪಡೆಯದಿದ್ದರೂ ಉತ್ತಮ ರನ್​ ಕಂಟ್ರೋಲ್​ ಮಾಡಿದ್ದರು. ಅಲ್ಲದೆ ಕಳೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್​ ಅವರ ಓವರ್​ ಕೂಡ ಕೊಹ್ಲಿಯೇ ಪೂರ್ಣಗೊಳಿಸಿದ್ದರು. ಏಕದಿನದಲ್ಲಿ ಕೊಹ್ಲಿ 4 ವಿಕೆಟ್​, ಟಿ20 ಮತ್ತು ಐಪಿಎಲ್​ನಲ್ಲಿಯೂ ತಲಾ 4 ವಿಕಟ್​ ಪಡೆದ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ PAK vs NZ: ರಚಿನ್​ ಶತಕ; ಸಚಿನ್​ ಸೇರಿ ಹಲವು ದಿಗ್ಗಜರ ದಾಖಲೆ ಧೂಳೀಪಟ

ಸಂಭಾವ್ಯ ತಂಡ

ಭಾರತ: ರೋಹಿತ್ ಶರ್ಮಾ​, ಶುಭಮನ್​ ಗಲ್​, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್​, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್​ದೀಪ್​ ಯಾದವ್, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್​.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಸ್ಸಿ ವಾನ್ ಡರ್​ ಡುಸೆನ್, ಐಡೆನ್ ಮಾರ್ಕ್ರಮ್, ಟೆಂಬ ಬವುಮಾ, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಲುಂಗಿ ಎನ್​ಗಿಡಿ, ಜೆರಾಲ್ಡ್ ಕೋಟ್ಜಿ.

Exit mobile version