ಮುಂಬಯಿ: ಒಂದೆಡೆ ಟೀಮ್ ಇಂಡಿಯಾದ ಆಟಗಾರರೆಲ್ಲ ಟಿ20 ವಿಶ್ವಕಪ್ ಗೆಲ್ಲುವ ಪಣತೊಟ್ಟು ನ್ಯೂಯಾರ್ಕ್‌ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಇತ್ತ ವಿರಾಟ್ ಕೊಹ್ಲಿ(Virat Kohli) ಅವರು ಮುಂಬೈನಲ್ಲಿ ಸಖತ್ ಪಾರ್ಟಿ ಮಾಡಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಕೊಹ್ಲಿಯ ಈ ನಡೆಯನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಖಂಡಿಸಿದ್ದಾರೆ.
ಕಳೆದ ಶನಿವಾರ ಭಾರತ ತಂಡದ ನಾಯಕ ರೋಹಿತ್ ಶರ್ಮ, ಕೋಚ್ ರಾಹುಲ್ ದ್ರಾವಿಡ್, ರಿಷಭ್ ಪಂತ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಸೇರಿ ಬಹುತೇಕ ಆಟಗಾರರು ನ್ಯೂಯಾರ್ಕ್ಗೆ ತೆರಳಿದ್ದರು. ಈ ವೇಳೆ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣ ನೀಡಿ ಪ್ರಯಾಣಿಸಿರಲಿಲ್ಲ. ಇದೀಗ ಮುಂಬೈಯ ರೆಸ್ಟೋರೆಂಟ್ನಲ್ಲಿ ಪತ್ನಿ ಅನುಷ್ಕಾ ಶರ್ಮಾ(Anushka Sharma) ಜತೆಗೆ ಮುಂಬೈನಲ್ಲಿ ಡಿನ್ನರ್ ಪಾರ್ಟಿ(Anushka Sharma And Virat Kohli’s Dinner) ನಡೆಸಿದ್ದಾರೆ.
ಈ ಪಾರ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಬೌಲರ್ ಜಹೀರ್ ಖಾನ್(Zaheer Khan) ಮತ್ತು ಅವರ ಪತ್ನಿ ಸಾಗರಿಕಾ ಘಾಟ್ಗೆ(Sagarika Ghatge), ಜನಪ್ರಿಯ ದೂರದರ್ಶನ ಕಾಮೆಂಟೇಟರ್ ಗೌರವ್ ಕಪೂರ್(Gaurav Kapur) ಕೂಡ ಭಾಗಿಯಾಗಿದ್ದರು. ಈ ವಿಡಿಯೊ ಕಂಡ ನೆಟ್ಟಿಗರು ಕೊಹ್ಲಿಗೆ ಈಗ ತಂಡಕ್ಕಿಂತ ಕೇವಲ ಪಾರ್ಟಿ ಮಾಡಿ ಕಾಲ ಕಳೆಯುವುದು ಖಷಿ ನೀಡುತ್ತಿದೆ. ಈತ ಕೇವಲ ತನ್ನ ವೈಯಕ್ತಿಕ ದಾಖಲೆಗಾಗಿ ಮಾತ್ರ ಆಡುತ್ತಾನೆ ಎಂದು ಕಮೆಂಟ್ ಮಾಡಿದ್ದಾರೆ.
ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಏಕೈಕ ಅಭ್ಯಾಸ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊಹ್ಲಿ ಮೇ 30ಕ್ಕೆ ಚಾರ್ಟರ್ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ. ನ್ಯೂಯಾರ್ಕ್(eam India in New York) ತಲುಪಿರುವ ಟೀಮ್ ಇಂಡಿಯಾದ(Team India ) ಮೊದಲ ಬ್ಯಾಚ್ ಅಭ್ಯಾಸ ಆರಂಭಿಸಿದೆ. ಎಲ್ಲ ಆಟಗಾರರು ಇಂದು ರನ್ನಿಂಗ್ ಮತ್ತು ಫುಟ್ಬಾಲ್ ಆಡುವ ಮೂಲಕ ವ್ಯಾಯಾಮ ನಡೆಸಿದ್ದಾರೆ. ಗುರುವಾರದಿಂದ ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸ ಆರಂಭಿಸಲಿದ್ದಾರೆ. ಟೀಮ್ ಇಂಡಿಯಾದ ದ್ವಿತೀಯ ಬ್ಯಾಚ್ ಇಂದು ನ್ಯೂಯಾರ್ಕ್ಗೆ ತಲುಪಲಿದೆ.
ಇದನ್ನೂ ಓದಿ Virat Kohli: ಐಪಿಎಲ್ 2024ರ ಸಾಧನೆ ಕುರಿತು ಹೇಳಿಕೆ ನೀಡಿದ ವಿರಾಟ್ ಕೊಹ್ಲಿ
ಭಾರತ ಜೂನ್ 1 ರಂದು ಬಾಂಗ್ಲಾದೇಶ ವಿರುದ್ಧ ಏಕೈಕ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದಾದ ಬಳಿಕ ತನ್ನ ಮೊದಲ ಲೀಗ್ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ಮತ್ತು ಭಾರತ ನಡುವಣ ಪಂದ್ಯ ಜೂನ್ 9ರಂದು ನಡೆಯಲಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.