Site icon Vistara News

Virat Kohli : ತಮ್ಮ ಎನ್​ಜಿಒಗಳನ್ನು ವಿಲೀನಗೊಳಿಸಿದ ವಿರಾಟ್​ ಕೊಹ್ಲಿ, ಅನುಷ್ಕಾ ಶರ್ಮಾ

Virat Kohli, Anushka Sharma merged their NGOs

#image_title

ನವ ದೆಹಲಿ: ಭಾರತ ತಂಡದ ಸ್ಟಾರ್​ ಕ್ರಿಕೆಟರ್​ ವಿರಾಟ್​ ಕೊಹ್ಲಿ (Virat Kohli) ಹಾಗೂ ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮದೇ ಆದ ಲಾಭೇತರ ಸಂಸ್ಥೆಗಳನ್ನು (ಎನ್​ಜಿಒ) ಹೊಂದಿದ್ದರು. ವಿರಾಟ್​ ಕೊಹ್ಲಿ ಅಥ್ಲೀಟ್​ಗಳಿಗೆ ಸ್ಕಾಲರ್​ಶಿಪ್​ ಕೊಡುತ್ತಿದ್ದರೆ, ಅನುಷ್ಕಾ ಶರ್ಮಾ ಪ್ರಾಣಿ ದಯಾ ಸಂಘದ ಜತೆ ಕೈಜೋಡಿಸಿದ್ದರು. ಇದೀಗ ಸ್ಟಾರ್​ ದಂಪತಿ ತಮ್ಮಿಬ್ಬರ ಎನ್​ಜಿಒಗಳನ್ನು ವಿಲೀನಗೊಳಿಸಿ ನಿರ್ವಹಣೆಯನ್ನು ಸರಳಗೊಳಿಸಿದ್ದಾರೆ. ಹೊಸ ಎನ್​ಜಿಒಗೆ ಸೇವಾ (seVVA) ಎಂದು ಹೆಸರಿಟ್ಟಿದ್ದಾರೆ. ಗುರುವಾರ (ಮಾರ್ಚ್​ 23) ವಿಲೀನಗೊಂಡಿರುವುದನ್ನು ಪ್ರಕಟಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿ ಮುಕ್ತಾಯಗೊಂಡ ಮರುದಿನ ವಿರಾಟ್​ ಕೊಹ್ಲಿ ಈ ಪ್ರಕಟಣೆ ಹೊರಡಿಸಿದ್ದಾರೆ.

ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಹೊಸದಾಗಿ ಸೃಷ್ಟಿಯಾಗಿರುವ ಸೇವಾದ ಮೂಲಕ ಸಾಮಾಜಿಕ ಕಾರ್ಯಗಳು ಮುಂದುವರಿಯಲಿವೆ. ಅದೇ ರೀತಿ ನಿರ್ದಿಷ್ಟ ಕಾರಣಕ್ಕೆ ಈ ಸಂಸ್ಥೆ ಸೀಮಿತವಾಗಿಲ್ಲ ಎಂಬುದಾಗಿ ತಿಳಿಸಿದ್ದಾರೆ. ನಮ್ಮಿಬ್ಬರ ಎನ್​ಜಿಒಗಳನ್ನು ವಿಲೀನಗೊಳಿಸುವ ಮೂಲಕ ಇನ್ನಷ್ಟು ಮಂದಿಯನ್ನು ತಲುಪುವ ಉದ್ದೇಶವನ್ನು ಹೊಂದಿದ್ದೇವೆ. ಈ ಸಂಸ್ಥೆಯು ಮಾನವೀಯತೆಯ ಆಧಾರದಲ್ಲಿ ಕೆಲಸ ಮಾಡಲಿದ್ದು ಇಂಥದ್ದೇ ಕಾರಣ ಬೇಕಾಗಿಲ್ಲ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ವಿರಾಟ್​ ಕೊಹ್ಲಿ ಫೌಂಡೇಷನ್​ ಮೂಲಕ ಅಥ್ಲೀಟ್​ಗಳಿಗೆ ನೆರವು ನೀಡಲಾಗುತ್ತಿತ್ತು. ಆ ಕಾರ್ಯ ಹೊಸ ಸಂಸ್ಥೆಯ ಮೂಲಕ ಮುಂದುವರಿಯಲಿದೆ ಹಾಗೂ ಅನುಷ್ಕಾ ಅವರ ಪ್ರಾಣಿಗಳಿಗೆ ನೆರವು ನೀಡುವ ಕಾರ್ಯವೂ ಮುಂದುವರಿಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐಪಿಎಲ್​ಗೆ ಸಜ್ಜು

ವಿರಾಟ್​ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೇ ಏಕ ದಿನ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದರು. ಆದರೆ, ಭಾರತ ತಂಡ ಆ ಪಂದ್ಯದಲ್ಲಿ ಸೋಲುವ ಮೂಲಕ ಸರಣಿಯನ್ನು ಆಸ್ಟ್ರೇಲಿಯಾ ತಂಡ 2-1 ಅಂತರದಿಂದ ತನ್ನದಾಗಿಸಿಕೊಂಡಿದೆ. ಇನ್ನೀಗ ಐಪಿಎಲ್​ ಹವಾ ಶುರು. ಹೀಗಾಗಿ ವಿರಾಟ್ ಕೊಹ್ಲಿ ಆರ್​ಸಿಬಿ ಕ್ಯಾಂಪ್​ ಸೇರಿಕೊಳ್ಳಲಿದ್ದಾರೆ. ಏತನ್ಮಧ್ಯೆ,, ಪತ್ನಿ ಅನುಷ್ಕಾ ಶರ್ಮಾ ಅವರು ಚಕ್​ದೇ ಎಕ್ಸ್​ಪ್ರೆಸ್​ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಭಾರತ ಮಹಿಳೆಯರ ತಂಡದ ಮಾಜಿ ವೇಗದ ಬೌಲರ್​ ಜೂಲಾನ್ ಗೋಸ್ವಾಮಿ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಈ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಜೂಲನ್​ ಗೋಸ್ವಾಮಿ ಪಾತ್ರವನ್ನು ಮಾಡಿದ್ದಾರೆ.

Exit mobile version