ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಕ್ರಿಕೆಟ್ ಮೈದಾನದಿಂದ ಆಚೆಗೆ ಮತ್ತೊಂದು ಸಾಧನೆ ಮಾಡಿದ್ದಾರೆ. ಅವರು ಸೋಶಿಯಲ್ ಮೀಡಿಯಾ ಫ್ಲ್ಯಾಟ್ಫಾರ್ಮ್ ಇನ್ಸ್ಟಾಗ್ರಾಮ್ನಿಂದ (instagram) ಅತಿ ಹೆಚ್ಚುಗಳಿಕೆ ಮಾಡುವ ಆಟಗಾರ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಹಾಪರ್ ಎಚ್ಕ್ಯೂ ಸಂಸ್ಥೆಯು ಪ್ರಕಟಿಸಿದ ಪಟ್ಟಿಯಲ್ಲಿ ವಿಶ್ವದ ಅತಿ ಹೆಚ್ಚು ಗಳಿಕೆದಾರರ ಟಾಪ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ವಿರಾಟ್ ಕೊಹ್ಲಿ. ವರದಿಯ ಪ್ರಕಾರ, ವಿರಾಟ್ ಕೊಹ್ಲಿ 2023ರಲ್ಲಿ ಇನ್ಸ್ಟಾಗ್ರಾಮ್ನ ಪ್ರಾಯೋಜಿತ ಪೋಸ್ಟ್ಗೆ 1.38 ಮಿಲಿಯನ್ ಡಾಲರ್ ಅಂದರೆ ಸುಮಾರು 11.45 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ.
ಈ ಪಟ್ಟಿಯಲ್ಲಿ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದರೆ, ಅವರ ಸಾಂಪ್ರದಾಯಿಕ ಎದುರಾಳಿ ಲಿಯೋನೆಲ್ ಮೆಸ್ಸಿ ನಂತರದ ಸ್ಥಾನದಲ್ಲಿದ್ದಾರೆ. ರೊನಾಲ್ಡೊ 3.23 ಮಿಲಿಯನ್ ಡಾಲರ್ ಅಂದರೆ ಸುಮಾರು 26.75 ಕೋಟಿ ರೂಪಾಯಿ ಪಡೆದುಕೊಂಡರೆ ಮೆಸ್ಸಿ ಪ್ರತಿ ಇನ್ಸ್ಟಾಗ್ರಾಮ್ ಪೋಸ್ಟ್ಗೆ 2.56 ಮಿಲಿಯನ್ ಡಾಲರ್ ಪಡೆಯುತ್ತಾರೆ. ಅಂದರೆ 21.49 ಕೋಟಿ ರೂಪಾಯಿ ಜೇಬಿಗಿಳಿಸುತ್ತಿದ್ದಾರೆ.
ಕೊಹ್ಲಿ ಇನ್ಸ್ಟಾದಲ್ಲಿ 256 ಮಿಲಿಯನ್ ಫಾಲೋಯರ್ಸ್ ಹೊಂದಿದ್ದಾರೆ. ಪ್ರತಿ ಪೋಸ್ಟ್ಗೆ 1.38 ಮಿಲಿಯನ್ ಡಾಲರ್ ಅವರ ಮೊತ್ತವು ಪಟ್ಟಿಯಲ್ಲಿ ಅತಿ ಹೆಚ್ಚು ಸಂಪಾದಿಸುವ ಏಷ್ಯಾದವರೆನ್ನುವ ಖ್ಯಾತಿ ತಂದಿದೆ. ಒಟ್ಟಾರೆ ಪಟ್ಟಿಯಲ್ಲಿ ಅವರ ಸ್ಥಾನ 14. ಇನ್ಸ್ಟಾಗ್ರಾಮ್ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಭಾರತೀಯ ಸೆಲೆಬ್ರಿಟಿ ಮಾತ್ರವಲ್ಲ, ಹೆಚ್ಚು ಫಾಲೋವರ್ಸ್ ಹೊಂದಿರುವ ಏಷ್ಯಾದ ಪ್ರತಿಭೆಯೂ ಹೌದು.
ಇದನ್ನೂ ಓದಿ : Asia Cup: ನಾಯಕತ್ವಕ್ಕೆ ಗುಡ್ ಬೈ ಹೇಳಿ, ಏಷ್ಯಾ ಕಪ್ನಿಂದ ಹೊರಗುಳಿದ ಬಾಂಗ್ಲಾ ಆಟಗಾರ
ಗಾಯಕಿ ಮತ್ತು ನೃತ್ಯಗಾರ್ತಿ ಲಿಸಾ ಮನೋಬಲ್ (26 ನೇ ಸ್ಥಾನ), ನಟಿ ಪ್ರಿಯಾಂಕಾ ಚೋಪ್ರಾ (29 ನೇ ಸ್ಥಾನ), ನಟಿ, ಗಾಯಕಿ, ರೂಪದರ್ಶಿ ಮತ್ತು ಉದ್ಯಮಿ ಲೀ ಮಿನ್-ಹೋ (55 ನೇ ಸ್ಥಾನ), ಲೇಖಕ, ನಟ, ಚಲನಚಿತ್ರ ನಿರ್ದೇಶಕ, ಯೂಟ್ಯೂಬರ್ ರಾದಿತ್ಯ ದಿಕಾ (73 ನೇ ಸ್ಥಾನ), ಇಂಟರ್ನೆಟ್ ಪರ್ಸನಾಲಿಟಿ ರಿಯಾಜ್ ಅಲಿ (77 ನೇ ಸ್ಥಾನ), ನಟಿ, ರೂಪದರ್ಶಿ ಮತ್ತು ಗಾಯಕಿ ದೇವಿಕಾ ಹೂರ್ನೆ (80 ನೇ ಸ್ಥಾನ) ಮತ್ತು ನಟಿ ಸಾಂಗ್ ಹೈಕೊ (93ನೇ ಸ್ಥಾನ) ಈ ಪಟ್ಟಿಯಲ್ಲಿ ಸ್ಥಾನ ಪಡೆದ ಇತರ ಏಷ್ಯಾದ ಸಾಧಕರು.
ಕ್ರಿಸ್ಟಿಯಾನೊ ರೊನಾಲ್ಡೊಗೆ ಅಗ್ರಸ್ಥಾನ
ಅತಿ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದವರ ಪಟ್ಟಿಯಲ್ಲಿ ಪೋರ್ಚುಗಲ್ ತಂಡದ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಅವರಿಗೆ ಮೊದಲ ಸ್ಥಾನ. ಅವರು 600 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅವರು ಈ ಮಾಧ್ಯಮದಿಂದ ಗಳಿಸಿಸುವ ನಿವ್ವಳ ಮೌಲ್ಯ 4,176 ಕೋ.ರೂ ಎಂದು ಅಂದಾಜಿಸಲಾಗಿದೆ. 2ನೇ ಸ್ಥಾನದಲ್ಲಿ ಅಜೆಂಟೀನಾ ತಂಡದ ನಾಯಕ, ಫಿಫಾ ವಿಶ್ವಕಪ್ ವಿಜೇತ ಲಿಯೋನೆಲ್ ಮೆಸ್ಸಿ (Lionel Messi) ಕಾಣಿಸಿಕೊಂಡಿದ್ದಾರೆ ಅವರು 482 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
ದಾಖಲೆ ಬರೆದ ರೊನಾಲ್ಡೊ
ಪೋರ್ಚುಗಲ್ ತಂಡದ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಎತ್ತರ ಏರಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ 600 ಮಿಲಿಯನ್ ಫಾಲೋವರ್ಸ್ ಗಳನ್ನು ಪಡೆದ ವಿಶ್ವದ ಮೊದಲ ವ್ಯಕ್ತಿಯಾಗಿದ್ದಾರೆ. ಈ ಹಿಂದೆಯೇ ಈ ಮೈಲುಗಲ್ಲು ತಲುಪುವ ಎಲ್ಲ ಅವಕಾಶ ರೊನಾಲ್ಡೊ ಅವರಿಗಿತ್ತು. ಆದರೆ 2020ರಲ್ಲಿ ಇನ್ಸ್ಟಾಗ್ರಾಮ್ ಕಾತೆಯಲ್ಲಿ ಆದ ಕೆಲ ತಾಂತ್ರಿಕ ದೋಷದಿಂದಾಗಿ ಅವರ ಹಲವು ಅನುಯಾಯಿಗಳ ಸಂಖ್ಯೆ ಡಿಲೀಟ್ ಆಗಿದ್ದವು.
ಬ್ರೆಜಿಲ್ ತಂಡದ ಫುಟ್ಬಾಲಿಗ ನೇಮರ್ ಜೂನಿಯರ್ ಅವರು ಇನ್ಸ್ಟಾಗ್ರಾಮ್ನಲ್ಲಿ 211 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದು, ಕ್ರೀಡಾಪಟುಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಫ್ರಾನ್ಸ್ ತಂಡದ ಸ್ಟಾರ್ ಫುಟ್ಬಾಲ್ ಆಟಗಾರ ಕಿಲಿಯಾನ್ ಎಂಬಪ್ಪೆ 107 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಮಾಜಿ ಇಂಗ್ಲೆಂಡ್ ಫುಟ್ಬಾಲ್ ಆಟಗಾರ ಡೇವಿಡ್ ಬೇಕ್ ಹ್ಯಾಮ್ ಅವರು 81.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.