Site icon Vistara News

Virat Kohli: ಕುಮಾರ ಸಂಗಕ್ಕರ ವಿಶ್ವ ದಾಖಲೆ ಮುರಿದ ‘ಕಿಂಗ್​’ ವಿರಾಟ್​ ಕೊಹ್ಲಿ

Virat Kohli was watchful at the start of his innings

ಜೊಹಾನ್ಸ್​ಬರ್ಗ್​: ಟೀಮ್​ ಇಂಡಿಯಾದ ಅನುಭವಿ ಆಟಗಾರ ವಿರಾಟ್​ ಕೊಹ್ಲಿ(Virat Kohli) ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ(Kumar Sangakkara) ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

ವಿರಾಟ್​ ಕೊಹ್ಲಿ ಅವರು ಈಗ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2000 ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕೊಹ್ಲಿ ಲಂಕಾದ ಸಂಗಕ್ಕರ ಅವರೊಂದಿಗೆ ಜಂಟಿ ದಾಖಲೆ ಹೊಂದಿದ್ದರು. ಇದೀಗ ಕೊಹ್ಲಿ 7 ಬಾರಿ ಕ್ಯಾಲೆಂಡರ್ ವರ್ಷದಲ್ಲಿ 2000 ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಸಂಗಕ್ಕರ 6 ಬಾರಿ ಈ ಸಾಧನೆ ಮಾಡಿದ್ದಾರೆ.

ವಿರಾಟ್​ ಕೊಹ್ಲಿ 2012, 2014, 2016, 2017, 2018, 2019 ಮತ್ತು 2023ರಲ್ಲಿ 2000 ರನ್ ಗಳಿಸಿದ್ದಾರೆ. ಸಂಗಕ್ಕರ ಅವರು 2004, 2006, 2009, 2011, 2012 ಮತ್ತು 2013 ರಲ್ಲಿ 2000 ರನ್ ಗಳಿಸಿದ್ದರು.

ಅತಿ ಹೆಚ್ಚು ಬಾರಿ 2000 ರನ್ ಗಳಿಸಿದ ಆಟಗಾರರು

ವಿರಾಟ್​ ಕೊಹ್ಲಿ-7

ಕುಮಾರ ಸಂಗಕ್ಕರ-6

ಮಹೇಲಾ ಜಯವರ್ಧನೆ-5

ಸಚಿನ್​ ತೆಂಡೂಲ್ಕರ್-5

ಜಾಕ್​ ಕ್ಯಾಲಿಸ್​-4

ಇದನ್ನೂ ಓದಿ IND vs SA: ದಕ್ಷಿಣ ಆಫ್ರಿಕಾದಲ್ಲಿ ಕನ್ನಡದ ಕಂಪು ಸಾರಿದ ಕೆಎಲ್​ ರಾಹುಲ್​-ಪ್ರಸಿದ್ಧ್​ ಕೃಷ್ಣ

ದಾಖಲೆ ಬರೆದ ರಬಾಡ

ಟೀಮ್​ ಇಂಡಿಯಾದ ನಾಯಕ ರೋಹಿತ್​ ಶಮಾ(Rohit Sharma) ಅವರನ್ನು ಶೂನ್ಯಕ್ಕೆ ಕ್ಲೀನ್​ ಬೌಲ್ಡ್​​ ಮಾಡುವ ಮೂಲಕ ದಕ್ಷಿಣ ಆಫ್ರಿಕಾದ ಯುವ ಬೌಲರ್​ ಕಗಿಸೊ ರಬಾಡ(Kagiso Rabada) ದಾಖಲೆಯೊಂದನ್ನು ಬರೆದಿದ್ದಾರೆ. ಭಾರತ ವಿರುದ್ಧ ಟೆಸ್ಟ್​ನಲ್ಲಿ 50 ವಿಕೆಟ್​ ಪೂರ್ತಿಗೊಳಿಸಿದ ಸಾಧನೆ ಮಾಡಿದ್ದಾರೆ.

ಮೊದಲ ಇನಿಂಗ್ಸ್​ನ 163 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಆರಂಭಿಸಿದ ಭಾರತಕ್ಕೆ ರಬಾಡ ಆರಂಭಿಕ ಆಘಾತವಿಕ್ಕಿದರು. ಹಿಟ್​ಮ್ಯಾನ್​ ರೋಹಿತ್​ ಅವರನ್ನು ಖಾತೆ ತೆರೆಯುವ ಮುನ್ನವೇ ಕ್ಲೀನ್​ ಬೌಲ್ಡ್​ ಮಾಡಿ ಪೆವಿಲಿಯನ್​ಗೆ ಅಟ್ಟಿದರು. ಈ ವಿಕೆಟ್​ ಪಡೆಯುವ ಮೂಲಕ ರಬಾಡ ಭಾರತ ವಿರುದ್ಧ ಟೆಸ್ಟ್​ನಲ್ಲಿ 50 ವಿಕೆಟ್​ ಪೂರ್ತಿಗೊಳಿಸಿದರು. ಮೊದಲ ಇನಿಂಗ್ಸ್​ನಲ್ಲಿಯೂ ರೋಹಿತ್​ ಅವರ ವಿಕೆಟ್​ ರಬಾಡ ಕಿತ್ತಿದ್ದರು.

ರೋಹಿತ್​ vs ರಬಾಡ

ರೋಹಿತ್​ ಶಮಾ ಮತ್ತು ಕಗಿಸೊ ರಬಾಡ ಇದುವರೆಗೆ ಟೆಸ್ಟ್​ನಲ್ಲಿ 11 ಇನಿಂಗ್ಸ್​ನಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ 104 ರನ್​ ರೋಹಿತ್​ ಗಳಿಸಿದರೆ ನಾಲ್ಕು ಬಾರಿ ವಿಕೆಟ್​ ಒಪ್ಪಿಸಿದ್ದಾರೆ. ರಬಾಡ ಎದುರು ರೋಹಿತ್​ ಬ್ಯಾಟಿಂಗ್​ ಸರಾಸರಿ ಕೇವಲ 14.85 ಮಾತ್ರ.

Exit mobile version