Site icon Vistara News

Virat kohli: ಬರ್ತ್​ಡೇಯಂದೇ ಶತಕ ಬಾರಿಸಿ ಸಚಿನ್​ ದಾಖಲೆ ಸರಿಗಟ್ಟಿದ ವಿರಾಟ್​ ಕೊಹ್ಲಿ

Virat kohli

ಕೋಲ್ಕೊತಾ: ವಿಶ್ವ ಕ್ರಿಕೆಟ್​ನ ಸ್ಟಾರ್ ಬ್ಯಾಟರ್​ ವಿರಾಟ್​ ಕೊಹ್ಲಿ (Virat kohli) ಅವರು ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್ ಅವರು ಏಕದಿನ ದಿನ ಕ್ರಿಕೆಟ್​ನಲ್ಲಿ ಬಾರಿಸಿರುವ 49 ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಈಡನ್ ಗಾರ್ಡನ್ಸ್​ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ತಮ್ಮ 35ನೇ ವರ್ಷದ ಜನುದಿನದಿಂದೇ ಅವರು ಈ ಸಾಧನೆ ಮಾಡಿರುವುದು ವಿಶೇಷ ಹಾಗೂ ಅವರ ಪಾಲಿಗೆ ಸ್ಮರಣೀಯ.

ಐತಿಹಾಸಿಕ ಕೋಲ್ಕೊತಾದ ಈಡನ್​ ಗಾರ್ಡನ್ಸ್​ನ ಸ್ಟೇಡಿಯಮ್​ನಲ್ಲಿ ಅವರು ಸಾಧನೆ ಮಾಡಿರುವುದು ಭಾರತ ಕ್ರಿಕೆಟ್​ ಕ್ಷೇತ್ರದ ಪಾಲಿಗೆ ಇನ್ನೂ ವಿಶೇಷ. ವಿರಾಟ್​ ಕೊಹ್ಲಿ ಈಗ 79 ಅಂತಾರಾಷ್ಟ್ರಿಯ ಶತಕದ ಸರದಾರ. ಅವರು ಖಾತೆಯಲ್ಲೀಗ 79 ಶತಕಗಳಿವೆ. ಅದರಲ್ಲಿ 29 ಶತಕ ಟೆಸ್ಟ್​ ಕ್ರಿಕೆಟ್​ನಲ್ಲಾದರೆ ಒಂದು ಶತಕ ಟಿ20 ಕ್ರಿಕೆಟ್​ನಲ್ಲಾಗಿದೆ. ಗರಿಷ್ಠ ಶತಕಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಸಚಿನ್​ ತೆಂಡೂಲ್ಕರ್​ 100 ಶತಕಗಳನ್ನು ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಕೊಹ್ಲಿ ಅವರಿಗಿಂತ 21 ಶತಕಗಳಿಂದ ಹಿಂದಿದ್ದಾರೆ.

ಹೊಸ ಮೈಲುಗಲ್ಲು ಸ್ಥಾಪಿಸಿದ ಕೊಹ್ಲಿ

ದಕ್ಷಿಣ ಆಫ್ರಿಕಾ ವಿರುದ್ಧ ಸಾಗುತ್ತಿರುವ ವಿಶ್ವಕಪ್​ ಪಂದ್ಯದಲ್ಲಿ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ನೂತನ ಮೈಲಿಗಲ್ಲೊಂದನ್ನು ತಲುಪಿದ್ದಾರೆ. ವಿಶ್ವಕಪ್​ ಟೂರ್ನಿಯಲ್ಲಿ 1500* ರನ್​ ಪೂರ್ತಿಗೊಳಿಸಿದ್ದಾರೆ. ಈ ಸಾಧನೆ ಮಾಡಿದ ಟೀಮ್ ಇಂಡಿಯಾದ 2ನೇ ಬ್ಯಾಟರ್​​ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಸದ್ಯ ವಿರಾಟ್​ ಕೊಹ್ಲಿ ಅವರು ಅರ್ಧಶತಕ ಬಾರಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ಅವರು ಶತಕ ಬಾರಿಸಿದರೆ ಸಚಿನ್​ ತೆಂಡೂಲ್ಕರ್​ ಅವರ ಸಾರ್ವಕಾಲಿಕ ಏಕದಿನ ಕ್ರಿಕೆಟ್​ನ 49 ಶತಕದ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಸಚಿನ್​ ತೆಂಡೂಲ್ಕರ್​ ಮೊದಲಿಗ

ಕ್ರಿಕೆಟ್​ ದೇವರು ಎಂದು ಕರೆಯಲ್ಪಡುವ ಮಾಜಿ ದಿಗ್ಗಜ ಆಟಗಾರ ಸಚಿನ್​ ತೆಂಡೂಲ್ಕರ್​ ಅವರು ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ ಬಾರಿಸಿದ ದಾಖಲೆ ಹೊಂದಿದ್ದಾರೆ. ಸಚಿನ್ 45 ಪಂದ್ಯಗಳನ್ನು ಆಡಿ​ 2278 ರನ್​ ಬಾರಿಸಿದ್ದಾರೆ. ಒಟ್ಟು 6 ವಿಶ್ವಕಪ್​ ಶತಕ ಬಾರಿಸಿದ್ದಾರೆ. ಒಂದೇ ವಿಶ್ವಕಪ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಅವರಿಗೆ 6ನೇ ಸ್ಥಾನ. 1996ರ ವಿಶ್ವಕಪ್​ನಲ್ಲಿ 2 ಶತಕ ಬಾರಿಸಿದ್ದರು. ಇದಾದ ಬಳಿಕ 2011ರ ವಿಶ್ವಕಪ್​ನಲ್ಲಿಯೂ 2 ಶತಕ ಗಳಿಸಿದ್ದರು. ಅತಿ ಹೆಚ್ಚು ವಿಶ್ವಕಪ್​ ಆಡಿದ ದಾಖಲೆಯೂ ಸಚಿನ್​ ಹೆಸೆರಿನಲ್ಲಿದೆ. 1992-2011ರ ವರೆಗೆ ವಿಶ್ವಕಪ್​ ಆಡಿದ್ದಾರೆ.

ಪಾಂಟಿಂಗ್​ಗೆ 2ನೇ ಸ್ಥಾನ

ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ನಾಯಕ ರಿಕಿ ಪಾಂಟಿಂಗ್ ಅವರು ವಿಶ್ವಕಪ್​ ಟೂರ್ನಿಯಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. 46 ಪಂದ್ಯಗಳನ್ನು ಆಡಿ 1743 ರನ್​ ಬಾರಿಸಿದ್ದಾರೆ. 2 ಬಾರಿ ನಾಯಕನಾಗಿ ಮತ್ತು ಒಂದು ಬಾರಿ ಆಟಗಾರನಾಗಿ ವಿಶ್ವಕಪ್​ ಗೆದ್ದ ಸಾಧನೆಯೂ ಇವರದ್ದಾಗಿದೆ. 1996-2011ರ ತನಕದ ವಿಶ್ವಕಪ್ ಪಂದ್ಯ ಆಡಿದ್ದಾರೆ.

ಈ ಸುದ್ದಿಯನ್ನೂ ಓದಿ: Virat Kohli : ಕೊಹ್ಲಿಗೆ ಕ್ಯೂಟ್​ ಬರ್ತ್​ಡೇ ವಿಶಷ್​ ಕಳುಹಿಸಿದ ಪತಿ ಅನುಷ್ಕಾ ಶರ್ಮಾ

ಕುಮಾರ ಸಂಗಕ್ಕರ

ಶ್ರೀಲಂಕಾದ ಮಾಜಿ ನಾಯಕ ಮತ್ತು ಬ್ಯಾಟರ್​ ಕುಮಾರ ಸಂಗಕ್ಕರ ಅವರು ವಿಶ್ವಕಪ್​ ರನ್​ ಸಾಧಕರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 37 ಪಂದ್ಯಗಳನ್ನು ಆಡಿ 1532 ರನ್​ ಬಾರಿಸಿದ್ದಾರೆ. ಒಂದೇ ವಿಶ್ವಕಪ್‌ನಲ್ಲಿ ಸತತ 4 ಶತಕಗಳನ್ನು ಸಿಡಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಸಂಗಕ್ಕಾರ 2015ರ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು. ರೋಹಿತ್​ಗೂ ಮುನ್ನ ಅವರು ಈ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು. ಒಟ್ಟಾರೆ ವಿಶ್ವಕಪ್​ನಲ್ಲಿ ಸಂಗಕ್ಕರ 5 ವಿಶ್ವಕಪ್​ ಶತಕ ಬಾರಿಸಿದ್ದಾರೆ.

ಇದನ್ನೂ ಓದಿ IND vs SA: ಕೊಹ್ಲಿಯೂ ಬೌಲಿಂಗ್​ ನಡೆಸಲಿದ್ದಾರೆ; ಸುಳಿವು ನೀಡಿದ​ ದ್ರಾವಿಡ್

35ನೇ ವಸಂತಕ್ಕೆ ಕಾಲಿಟ್ಟ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರಿಗೆ ಬಂಗಾಳ ಕ್ರಿಕೆಟ್‌ ಮಂಡಳಿ ಚಿನ್ನದ ಲೇಪಿತ ಬ್ಯಾಟ್​ ಉಡುಗೊರೆ ನೀಡಲು ನಿರ್ಧರಿಸಿದೆ. ಕೋಲ್ಕೊತ್ತಾದ ಪ್ರಸಿದ್ಧ ಈಡನ್ ಗಾರ್ಡನ್​ನಲ್ಲಿ ಕೊಹ್ಲಿಯ ಹುಟ್ಟುಹಬ್ಬನ್ನು ಭರ್ಜರಿಯಾಗಿ ಆಚರಿಸಿಲು ಬಂಗಾಳ ಕ್ರಿಕೆಟ್‌ ಮಂಡಳಿ ವ್ಯವಸ್ಥೆಯನ್ನು ಮಾಡಿತ್ತು. ಆದರೆ ಐಸಿಸಿ ನಿಯಮದ ಉಲ್ಲಂಘನೆಯಾಗುವ ನಿಟ್ಟಿನಲ್ಲಿ ದಿಢೀರ್​ ರದ್ದುಗೊಳಿಸಿತ್ತು.

Exit mobile version