ನವ ದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ ಕಿಂಗ್ ಕೊಹ್ಲಿಯ (Virat Kohli) ಕ್ರಿಕೆಟ್ ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಎಂಥದ್ದೇ ಪರಿಸ್ಥಿತಿಯಿರಲಿ, ಯಾವುದೇ ಮಾದರಿಯ ಪಿಚ್ ಇರಲಿ ಕೊಹ್ಲಿಯ ಅಬ್ಬರಕ್ಕೆ ಕೊರತೆ ಇರುವುದಿಲ್ಲ. ಅಂತೆಯೇ ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಅವರು ಶತಕ ಬಾರಿಸಿದ್ದಾರೆ. ವಿಶೇಷ ಎಂದರೆ ಇದು ಕೊಹ್ಲಿಯ ಪಾಲಿಗೆ 500ನೇ ಅಂತಾರಾಷ್ಟ್ರೀಯ ಪಂದ್ಯ. ಈ ಪಂದ್ಯದಲ್ಲಿ ಮೂರಂಕಿ ಮೊತ್ತವನ್ನು ದಾಖಲಿಸುವ ಮೂಲಕ ಸ್ಮರಣೀಯ ಪ್ರದರ್ಶನ ನೀಡಿದ್ದಾರೆ. ವಿಂಡೀಸ್ ವಿರುದ್ಧ ಕುಸಿತದ ಕಂಡಿದ್ದ ಭಾರತ ತಂಡವನ್ನು ಮುನ್ನಡೆಸಿದ್ದ 34 ವರ್ಷದ ಆಟಗಾರ ತಮ್ಮ 76 ನೇ ಅಂತಾರರಾಷ್ಟ್ರೀಯ ಶತಕವವನ್ನೂ ಗಳಿಸಿದ್ದಾರೆ. ಅಂದ ಹಾಗೆ ಅವರಿಗೆ ಇದು 29ನೇ ಟೆಸ್ಟ್ ಶತಕವೂ ಹೌದು.
Ending a 5-year wait in his 500th Int'l Game with a 💯
— FanCode (@FanCode) July 21, 2023
Just @imVkohli things!
.#INDvWIonFanCode #WIvIND pic.twitter.com/5j5td33iO2
ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತದ ಮೂರನೇ ವಿಕೆಟ್ ರೂಪದಲ್ಲಿ ಶುಬ್ಮನ್ ಗಿಲ್ ವಿಕೆಟ್ ಪತನವಾದಾಗ ಕೊಹ್ಲಿ ಬ್ಯಾಟಿಂಗ್ಗೆ ಇಳಿದಿದ್ದರು. ಆ ಬಳಿಕ ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ ವಿಕೆಟ್ಗಳೂ ತ್ವರಿತವಾಗಿ ಉರುಳಿದ್ದವು. ತಂಡ ತೊಂದರೆಯಲ್ಲಿದ್ದಾಗ ಕೊಹ್ಲಿ ಆಗಮಿಸಿದ್ದರು. ರವೀಂದ್ರ ಜಡೇಜಾ ಅವರೊಂದಿಗೆ ಸೊಗಸಾದ ಜತೆಯಾಟ ಆಡಿದ್ದರು. ಸಂಯಮದಿಂದ ಆಡಿ ತಮ್ಮ ಶತಕದ ಮೈಲಿಗಲ್ಲನ್ನು ದಾಟಿದರು. ವಿಂಡೀಸ್ ಬೌಲರ್ ಶಾನನ್ ಗೇಬ್ರಿಯಲ್ ಎಸೆದ ಚೆಂಡನ್ನು ಬೌಂಡರಿಗಟ್ಟಿ ಸಂಭ್ರಮಿಸಿದರು.
ಮೊದಲ ಆಟಗಾರ
ವಿರಾಟ್ ಕೊಹ್ಲಿಗೆ ಇದು 500ನೇ ಅಂತಾರಾಷ್ಟ್ರೀಯ ಪಂದಯ. ಈ ಮೂಲಕ ಅವರು 500ನೇ ಪಂದ್ಯದಲ್ಲಿ ಶತಕ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಎಂಎಸ್ ಧೋನಿ ನಂತರ 500 ಪಂದ್ಯಗಳ ಮೈಲಿಗಲ್ಲನ್ನು ದಾಟಿದ್ದ ಇತರ ಭಾರತೀಯ ಆಟಗಾರರು.
ಟೆಸ್ಟ್ನಲ್ಲಿ 4ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ಶತಕ ಬಾರಿಸಿದವರು
44 – ಸಚಿನ್ ತೆಂಡೂಲ್ಕರ್
35 – ಜಾಕ್ ಕಾಲಿಸ್
30 – ಮಹೇಲಾ ಜಯವರ್ಧನೆ
25 – ವಿರಾಟ್ ಕೊಹ್ಲಿ
24 – ಬ್ರಿಯಾನ್ ಲಾರಾ
ಇದನ್ನೂ ಓದಿ : ind vs wi : ಬ್ಯಾಟಿಂಗ್ ಸಲಹೆಗಳನ್ನು ಹಂಚಿಕೊಂಡ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
ಜಾಕ್ ಕಾಲಿಸ್ ಅವರನ್ನು ಹಿಂದಿಕ್ಕಿದ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 5ನೇ ಬ್ಯಾಟರ್ ಎನಿಸಿಕೊಂಡರು. ಭಾರತದ ಮಾಜಿ ನಾಯಕನಿಗೆ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಮೀರಿಸಲು ಈ ಪಂದ್ಯದಲ್ಲಿ 73 ರನ್ಗಳ ಅಗತ್ಯವಿತ್ತು.