Site icon Vistara News

Virat Kohli: 14 ತಿಂಗಳ ಬಳಿಕ ಮೊದಲ ಟಿ20 ಆಡಲು ಇಂದೋರ್​ಗೆ ತೆರಳಿದ ಕೊಹ್ಲಿ; ಇಲ್ಲಿದೆ ವಿಡಿಯೊ

Virat Kohli leaves for the airport

ಇಂದೋರ್​: 14 ತಿಂಗಳ ಸುದೀರ್ಘ ಕಾಯುವಿಕೆಯ(Kohli Play First T20I In 14 Months) ಬಳಿಕ ವಿರಾಟ್ ಕೊಹ್ಲಿ(Virat Kohli) ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಇಂದೋರ್​ನಲ್ಲಿ ನಡೆಯುವ ಅಫಘಾನಿಸ್ತಾನ ವಿರುದ್ಧದ ದ್ವಿತೀಯ ಟಿ20 ಪಂದ್ಯಕ್ಕಾಗಿ ಕೊಹ್ಲಿ ಮುಂಬೈನಿಂದ ಪ್ರಯಾಣ ಬೆಳೆಸಿದ್ದಾರೆ.

ವಿರಾಟ್​ ಕೊಹ್ಲಿ ಕಪ್ಪು ಬಣ್ಣ ಮರ್ಸಿಡಿಸ್-ಬೆನ್ಜ್ ಕಾರಿನಲ್ಲಿ ಬಂದು ವಿಮಾನ ನಿಲ್ದಾಣಕ್ಕೆ ತೆರಳುವ ವಿಡಿಯೊವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಕಿಂಗ್​ ಈಸ್ ಬ್ಯಾಕ್'”, ಈ ಗಾಂಭೀರ್ಯ ನಡಿಗೆ ನೋಡಲು ಎಷ್ಟು ಚಂದ ಎಂದು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ Virat kohli : ಟಿ20 ವಿಶ್ವ ಕಪ್​ ತಂಡದಲ್ಲಿ ವಿರಾಟ್​, ರೋಹಿತ್ ಇರಲೇಬೇಕು ಎಂಬುದಕ್ಕೆ ಐದು ಕಾರಣಗಳು ಇಲ್ಲಿವೆ

ವಿರಾಟ್​ ಕೊಹ್ಲಿ 2022 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಭಾರತ ಪರ ಟಿ20 ಆಡಿದ್ದರು. ಇದಾದ ಬಳಿಕ ಅವರು ಭಾರತ ಪರ ಟಿ20 ಆಡಿಲ್ಲ. ವೈಯಕ್ತಿಕ ಕಾರಣಗಳಿಂದ ಆಪ್ಘನ್​ ಎದುರಿನ ಮೊದಲ ಪಂದ್ಯದಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದರು. ಇದೀಗ ಮತ್ತೆ ತಂಡ ಸೇರಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್‌ಕೀಪರ್ ಸಬಾ ಕರೀಮ್, ಇದೇ ವರ್ಷ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ 3ನೇ ಸ್ಥಾನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಅಗತ್ಯವಿದೆ ಮತ್ತು ವೆಸ್ಟ್ ಇಂಡೀಸ್‌ನ ಪಿಚ್‌ಗಳನ್ನು ಪರಿಗಣಿಸಿ, ಕೊಹ್ಲಿ ತಮ್ಮ ಪರಿಚಿತ ಪಾತ್ರಕ್ಕೆ ಅಂಟಿಕೊಳ್ಳಬೇಕು ಎಂದು ಹೇಳಿದ್ದಾರೆ.

ವಿರಾಟ್​ ಕೊಹ್ಲಿ ಆಗಮನದಿಂದ ತಂಡದ ಆಡುವ ಬಳಗದಲ್ಲಿ ಬದಲಾವಣೆ ಖಚಿತ. ಕೊಹ್ಲಿ ಕ್ರಮಾಂಕದಲ್ಲಿ ಮೊದಲ ಪಂದ್ಯ ಆಡಿದ್ದ ತಿಲಕ್​ ವರ್ಮ ಅವರನ್ನು ದ್ವಿತೀಯ ಪಂದ್ಯದಿಂದ ಕೈಬಿಡಲಾಗುತ್ತದೆ. ಬೌಲಿಂಗ್​ ವಿಭಾಗದಲ್ಲಿಯೂ ಕೆಲ ಮಹತ್ವದ ಬದಲಾವಣೆ ನಿರೀಕ್ಷೆ ಮಾಡಲಾಗಿದೆ. ಮೊದಲ ಪಂದ್ಯದಲ್ಲಿ ದುಬಾರಿಯಾಗಿ ಕಂಡುಬಂದ ರವಿ ಬಿಷ್ಣೋಯಿ ಮತ್ತು ವಾಷಿಂಗ್ಟನ್​ ಸುಂದರ್​ ಅವರನ್ನು ಹೊರಗಿರಿಸಿ ಅವರ ಬದಲು ಕುಲ್​ದೀಪ್​ ಮತ್ತು ಅವೇಶ್​ ಖಾನ್​ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಉಳಿದಂತೆ ಯಾವುದೇ ಬದಲಾವಣೆ ಸಂಭವಿಸುದು ಅನುಮಾನ.

ಬುಧವಾರ ಇಲ್ಲಿನ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್​ ಐಎಸ್​ ಬಿಂದ್ರಾ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಪ್ರವಾಸಿ ತಂಡ 5 ವಿಕೆಟ್​ಗೆ 158 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್​ ನಷ್ಟಕ್ಕೆ 159 ರನ್ ಬಾರಿಸಿ 6 ವಿಕೆಟ್​ಗಳ ಅಂತರದ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.

Exit mobile version