Site icon Vistara News

Team India | ಸಾಕು ಅಂದರೂ ಅಭ್ಯಾಸ ನಿಲ್ಲಿಸದ ವಿರಾಟ್‌ ಕೊಹ್ಲಿ, ವಿಶ್ವ ಕಪ್‌ಗೆ ಭರ್ಜರಿ ಪ್ರಾಕ್ಟೀಸ್‌

virat kohli

ಪರ್ತ್‌: ವಿರಾಟ್ ಕೊಹ್ಲಿಯ ಕ್ರಿಕೆಟ್‌ ಪ್ರೀತಿಗೆ ಯಾವುದೇ ಸಾಕ್ಷಿ ಬೇಕಾಗಿಲ್ಲ. ೩೩ ವರ್ಷದ ಈ ಆಟಗಾರನ ಖಾತೆಯಲ್ಲಿ ೭೧ ಶತಕಗಳ ಸಮೇತ ೨೪ ಸಾವಿರ ಅಂತಾರಾಷ್ಟ್ರೀಯ ರನ್‌ಗಳಿವೆ. ಇಷ್ಟೆಲ್ಲ ಸಾಧನೆಗಳ ಹಿಂದೆ ಅವರ ಅವಿರತ ಪರಿಶ್ರಮವಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆ ಕಾರಣಕ್ಕಾಗಿಯೇ ಕಳೆದ ಹಲವು ವರ್ಷಗಳಿಂದ ಅವರು ಟೀಮ್‌ ಇಂಡಿಯಾದ ಕಾಯಂ ಸದಸ್ಯರಾಗಿರುವುದು. ಪ್ರಸ್ತುತ ಅವರು ಆಸ್ಟ್ರೇಲಿಯಾದಲ್ಲಿದ್ದು, ಟಿ೨೦ ವಿಶ್ವ ಕಪ್‌ಗಾಗಿ ಸತತವಾಗಿ ಅಭ್ಯಾಸ ಮಾಡುತ್ತಿದ್ದಾರೆ.

ಭಾರತ ತಂಡದ ಈಗಾಗಲೇ ವೆಸ್ಟರ್ನ್‌ ಆಸ್ಟ್ರೇಲಿಯಾ ತಂಡದ ವಿರುದ್ಧ ಎರಡು ಪಂದ್ಯಗಳನ್ನು ಆಡಿದೆ. ಆದರೆ ಎರಡರಲ್ಲೂ ವಿರಾಟ್‌ ಕೊಹ್ಲಿ ಪಾಲ್ಗೊಂಡಿಲ್ಲ. ಆದರೆ, ಸೋಮವಾರ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಅವರು ಆಡುವುದು ಬಹುತೇಕ ಖಚಿತ. ಅದಕ್ಕಾಗಿ ಅವರು ಪರ್ತ್‌ನಲ್ಲಿ ಅಭ್ಯಾಸ ನಡೆಸಿದ್ದಾರೆ.

ವಿರಾಟ್‌ ಕೊಹ್ಲಿ ನೆಟ್‌ನಲ್ಲಿ ಪ್ರಾಕ್ಟೀಸ್ ಮಾಡಿದ ಬಳಿಕ ದೀಪಕ್ ಹೂಡ ಅಭ್ಯಾಸ ಮುಂದುವರಿಸಬೇಕಾಗಿತ್ತು. ಹೀಗಾಗಿ ಸಹಾಯಕ ಸಿಬ್ಬಂದಿ, ವಿರಾಟ್‌ ಕೊಹ್ಲಿ ಬಳಿ ನಿಮ್ಮ ಸಮಯ ಮುಗಿದಿದೆ, ಅಭ್ಯಾಸ ನಿಲ್ಲಿಸಿ ಎಂದು ಕೋರಿದ್ದಾರೆ. ಆದರೆ, ವಿರಾಟ್‌ ಕೊಹ್ಲಿ ಅದಕ್ಕೆ ಒಪ್ಪುವುದಿಲ್ಲ. ಹೂಡಾ ಬರುವ ತನಕ ನಾನು ಅಭ್ಯಾಸ ಮುಂದುವರಿಸುತ್ತೇನೆ. ಬಳಿಕ ಕ್ರೀಸ್‌ ಬಿಟ್ಟುಕೊಡುತ್ತೇನೆ ಎಂಬುದಾಗಿ ಅವರು ಹೇಳುತ್ತಾರೆ. ಈ ಸಂಭಾಷಣೆ ರೆಕಾರ್ಡ್‌ ಆಗಿದ್ದು, ಕೊಹ್ಲಿಯ ಬದ್ಧತೆಗೆ ಕ್ರಿಕೆಟ್‌ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತ ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದರೆ, ಎರಡನೇ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ೧೯ರಂದು ಆಡಲಿದೆ. ಎರಡೂ ಪಂದ್ಯಗಳು ಬ್ರಿಸ್ಬೇನ್‌ನಲ್ಲಿ ಆಯೋಜನೆಗೊಂಡಿದೆ.

ಇದನ್ನೂ ಓದಿ | BCCI President | ಗಂಗೂಲಿಗೆ ಕರ್ಮ ಫಲ ತಟ್ಟಿದೆ ಎನ್ನುತ್ತಿದ್ದಾರೆ ವಿರಾಟ್‌ ಕೊಹ್ಲಿ ಅಭಿಮಾನಿಗಳು!

Exit mobile version