Site icon Vistara News

2 ತಿಂಗಳು ನಿಗೂಢ ಪ್ರದೇಶದಲ್ಲಿ ಕುಟುಂಬದೊಂದಿಗೆ ಕಾಲ ಕಳೆದ ವಿಚಾರವನ್ನುರಿವಿಲ್​ ಮಾಡಿದ ಕೊಹ್ಲಿ

Virat Kohli-Anushka Sharma

ಬೆಂಗಳೂರು: ವಿರಾಟ್​ ಕೊಹ್ಲಿ(Virat Kohli) ಅವರು ಇಂಗ್ಲೆಂಡ್​ ವಿರುದ್ಧದ ತವರಿನ ಟೆಸ್ಟ್​ ಸರಣಿ ವೇಳೆ ವೈಯಕ್ತಿಕ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದ್ದರು. ಇದಾದ ಬಳಿಕ ಕೊಹ್ಲಿ ಎಲ್ಲಿಯೂ ಕಾರ ಕಕ್ಕಿಗೂ ಕಾಣಿಸಿಕೊಂಡಿರಲಿಲ್ಲ. ಅವರ ಅಭಿಮಾನಿಗಳು ಕೂಡ ಈ ವಿಚಾರದಲ್ಲಿ ಆತಂಕಗೊಂಡಿದ್ದರು. ಇದೀಗ 2 ತಿಂಗಳ ರಜೆಯ ಕಾರಣವನ್ನು ಸ್ವತಃ ಕೊಹ್ಲಿಯೇ ರಿವಿಲ್ (Virat Kohli Explains 2 Month Break)​ ಮಾಡಿದ್ದಾರೆ.

ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರಹಿಸಿದ ಕೊಹ್ಲಿ, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡುವ ವೇಳೆ ಈ ವಿಚಾರವನ್ನು ಬಹಿರಂಗಪಡಿಸಿದರು. ‘ಎರಡು ತಿಂಗಳ ಬಿಡುವಿನ ವೇಳೆಯಲ್ಲಿ ಕುಟುಂಬದ ಜತೆ ಅಮೂಲ್ಯ ಸಮಯ ಕಳೆದೆ. ನಾವು ದೇಶದಲ್ಲಿ ಇರಲಿಲ್ಲ. ಜನರು ನಮ್ಮನ್ನು ಗುರುತಿಸಲು ಸಾಧ್ಯವಾಗದ ಪ್ರದೇಶದಲ್ಲಿ ನಾವಿದ್ದೆವು. ಈ ಎರಡು ತಿಂಗಳ ಕಾಲ ಕುಟುಂಬದೊಂದಿಗೆ ಅತ್ಯಮೂಲ್ಯ ಸಮಯವನ್ನು ಕಳೆದಿದ್ದೇನೆ. ರಸ್ತೆಯಲ್ಲಿ ಓಡಾಡುವಾಗ ಎಲ್ಲರಂತೆ ನಾನೂ ಕೂಡ ಸಾಮಾನ್ಯ ವ್ಯಕ್ತಿಯಾಗಿ ಓಡಾಡಿದ್ದು ನಿಜಕ್ಕೂ ಅದ್ಭುತ ಅನುಭವ. ಇದಕ್ಕಾಗಿ ದೇವರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಹಾಗೂ ಕುಟುಂಬಕ್ಕೆ ಇದು ಅದ್ಭುತ ಅನುಭವವಾಗಿತ್ತು ಎಂದು ಹೇಳಿದರು.

ಇದನ್ನೂ ಓದಿ Virat Kohli: ಕೊಹ್ಲಿಯ ಕಾಲಿಗೆ ಬಿದ್ದ ಅಭಿಮಾನಿ ಈಗ ಪೊಲೀಸರ ಅತಿಥಿ; ವಿಚಾರಣೆ ವೇಳೆ ಸುಳ್ಳಿನ ಕಂತೆ

‘ಈಗ ನಾನು ಇಬ್ಬರು ಮಕ್ಕಳ ತಂದೆಯಾಗಿದ್ದೇನೆ. ಕುಟುಂಬದ ಜವಾಬ್ದಾರಿ ಹೆಚ್ಚಾಗಿದೆ. ಹೀಗಾಗಿ ಕುಟುಂಬವನ್ನು ನೋಡುವ ದೃಷ್ಠಿಕೋನವೇ ಬದಲಾಗಿದೆ. ಹಾಗಾಗಿ ಕುಟುಂಬದ ಜತೆಗಿನ ಕ್ಷಣ ಅದ್ಭುತವಾಗಿತ್ತು’ ಎಂದು ಕೊಹ್ಲಿ ಹೇಳಿದರು. ಆದರೆ ತಾವಿದ್ದ ಈ ಪ್ರದೇಶ ಯಾವುದೂ ಎನ್ನುವ ಗುಟ್ಟನ್ನು ಮಾತ್ರ ಕೊಹ್ಲಿ ಬಿಟ್ಟುಕೊಡಲಿಲ್ಲ. ಪಂದ್ಯದ ಬಳಿಕ ಪತ್ನಿ ಅನುಷ್ಕಾಗೆ ವಿಡಿಯೊ ಕಾಲ್​ ಮಾಡಿ ಕೊಹ್ಲಿ ಮಕ್ಕೊಳೊಂದಿಗೂ ಮುದ್ದಾಡಿದರು. ಈ ವಿಡಿಯೊ ಕೂಡ ವೈರಲ್​ ಆಗಿದೆ. ಪತ್ನಿ ಅನುಷ್ಕಾ ಶರ್ಮ(Anushka Sharma) ಫೆ. 15ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಸಿಹಿ ಸುದ್ದಿಯನ್ನು ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದರು. ಮಗನಿಗೆ ಅಕಾಯ್‌ ಎಂದು ಹೆಸರಿಡಲಾಗಿದೆ.

ಮೂಲಗಳ ಪ್ರಕಾರ ಅನುಷ್ಕಾ ಅವರು ವಿರಾಟ್​ ಕೊಹ್ಲಿಗೆ(Virat Kohli) ಸ್ಫೂರ್ತಿ ನೀಡಲೆಂದೇ ಐಪಿಎಲ್​ನ ದ್ವಿತಿಯಾರ್ಧದ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಎರಡನೇ ಮಗುವಾದ ಬಳಿಕ ಅನುಷ್ಕಾ ಇದುವರೆಗೂ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಎರಡನೇ ಹಂತದ ಐಪಿಎಲ್​ ಪಂದ್ಯದ ವೇಳೆಗೆ ತಮ್ಮ ಪತಿ ವಿರಾಟ್​ ಪ್ರತಿನಿಧಿಸುವ ಆರ್​ಸಿಬಿ ಪಂದ್ಯ ವೀಕ್ಷಣೆಗೆ ಮೈದಾನಕ್ಕೆ ಬರಲಿದ್ದಾರೆ ಎನ್ನಲಾಗಿದೆ. ಹಿಂದೆ ಅನೇಕ ಬಾರಿ ಅನುಷ್ಕಾ ಮೈದಾನದಲ್ಲಿದ್ದು, ಪತಿ ಕೊಹ್ಲಿಗೆ ಚಿಯರ್ ಅಪ್ ಮಾಡಿದ್ದರು. ಕಳೆದ ಬಾರಿ ಏಕದಿನ ವಿಶ್ವಕಪ್ ಟೂರ್ನಿಯ ವೇಳೆಯೂ ಬಹುತೇಖ ಪಂದ್ಯಗಳಲ್ಲಿ ಅನುಷ್ಕಾ ಅವರು ಕೊಹ್ಲಿಗೆ ಹುರಿದುಂಬಿಸಿದ ಫೋಟೊ ಮತ್ತು ವಿಡಿಯೊಗಳು ವೈರಲ್​ ಆಗಿತ್ತು

Exit mobile version