Site icon Vistara News

ಸಚಿನ್​ ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್​ ಕೊಹ್ಲಿ; ಕಿವೀಸ್​ ಪಂದ್ಯದಲ್ಲಿ ಇದು ಸಾಧ್ಯವೇ?

Two GOATs of World Cricket

ಧರ್ಮಶಾಲಾ: ಈಗಾಗಕೇ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್(Sachin Tendulkar)​ ಅವರ ಹಲವು ದಾಖಲೆಗಳನ್ನು ಮುರಿದಿರುವ ವಿರಾಟ್​ ಕೊಹ್ಲಿ(Virat Kohli) ಇದೀಗ ಮತ್ತೊಂದು ಮಹತ್ವದ ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ. ಧರ್ಮಶಾಲಾದಲ್ಲಿ ಇಂದು ನಡೆಯುವ ನ್ಯೂಜಿಲ್ಯಾಂಡ್(India vs New Zealand)​ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿದರೆ ಸಚಿನ್​ ಅವರ ಏಕದಿನ ಕ್ರಿಕೆಟ್​ನ ಸರ್ವಾಧಿಕ 49ನೇ ಶತಕವನ್ನು ಸರಿಗಟ್ಟಲಿದ್ದಾರೆ. ಸದ್ಯ ಕೊಹ್ಲಿ 48 ಶತಕ ಬಾರಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ವಿರಾಟ್​ ಅವರು ಏಕದಿನದಲ್ಲಿ ತಮ್ಮ 48ನೇ ಶತಕ ದಾಖಲಿಸಿದ್ದರು. ಅಲ್ಲದೆ ಈ ಶತಕದ ಮೂಲಕ ಸಚಿನ್ ಅವರ ದಾಖಲೆಯೊಂದನ್ನು ಕೂಡ ಮುರಿದಿದ್ದರು. ಅದೇನೆಂದರೆ, ವಿರಾಟ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ ಒಟ್ಟು 26 ಸಾವಿರ ರನ್ ಪೂರೈಸಿ ಸಚಿನ್​ ಹೆಸರಿಲ್ಲಿದ್ದ ದಾಖಲೆಯನ್ನು ಮುರಿದಿದ್ದರು. ಈ ಹಿಂದೆ ಈ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 601 ಇನಿಂಗ್ಸ್​ಗಳಲ್ಲಿ ಈ ದಾಖಲೆ ನಿರ್ಮಿಸಿದ್ದರು. ಆದರೆ ಕೊಹ್ಲಿ ಕೇವಲ 577 ಇನಿಂಗ್ಸ್​ಗಳ ಮೂಲಕ ಈ ದಾಖಲೆಯನ್ನು ಮುರಿದಿದ್ದರು. ಇದೀಗ ಕಿವೀಸ್​ ವಿರುದ್ಧವೂ ಹಲವು ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.

ಸವ್ಯಸಾಚಿ ಸಚಿನ್​

ಸಚಿನ್​ ಅವರು ತಮ್ಮ 24 ವರ್ಷಗಳ ಕ್ರಿಕೆಟ್‌ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್‌, 201 ವಿಕೆಟ್‌, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್​ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್​ ಎಲ್ಲ ಕ್ರಿಕೆಟ್​ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.

ಇದನ್ನೂ ಓದಿ KL Rahul: ರಾಹುಲ್​ ಬ್ಯಾಟಿಂಗ್​,ಕೀಪಿಂಗ್​ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕೋಚ್​ ಡ್ರಾವಿಡ್​

2 ಕ್ಯಾಚ್​ ಹಿಡಿದರೆ ದಾಖಲೆ

ವಿರಾಟ್​ ಕೊಹ್ಲಿ ಅವರು ಕಿವೀಸ್​ ವಿರುದ್ಧದ ಪಂದ್ಯದಲ್ಲಿ ಜಸ್ಟ್​ 2 ಕ್ಯಾಚ್​ ಹಿಡಿದರೆ, ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಕ್ಯಾಚ್(Most catches in World Cup)​ ಪಡೆದ ಸಾಧಕರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಲಿದ್ದಾರೆ. ವಿರಾಟ್​ ಕೊಹ್ಲಿ ಅವರು ಸದ್ಯ 17 ಕ್ಯಾಚ್​ ಹಿಡಿದು ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೊಮ್ಮೆ ಅವರು ಬಾಂಗ್ಲಾ ವಿರುದ್ಧ 2 ಕ್ಯಾಚ್​ ಪಡೆದರೆ ಮೂರನೇ ಸ್ಥಾನದಲ್ಲಿರುವ ಲಂಕಾದ ಮಾಜಿ ದಿಗ್ಗಜ ಆಟಗಾರ ಸನತ್​ ಜಯಸೂರ್ಯ(Sanath Jayasuriya) ಅವರ ದಾಖಲೆ ಪತನಗೊಳ್ಳಲಿದೆ. ಅವರು 18 ಕ್ಯಾಚ್​ ಹಿಡಿದ್ದಾರೆ.

ಪಾಟಿಂಗ್​ಗೆ ಮೊದಲ ಸ್ಥಾನ

ವಿಶ್ವಕಪ್​ ಇತಿಹಾಸದಲ್ಲಿ ಅತ್ಯಧಿಕ ಕ್ಯಾಚ್​ ಪಡೆದ ಆಟಗಾರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ನಾಯಕ ರಿಕಿ ಪಾಂಟಿಂಗ್(ricky ponting) ಅವರು ಮೊದಲ ಸ್ಥಾನ ಪಡೆದಿದ್ದಾರೆ. ಪಾಂಟಿಂಗ್​ 2 ಬಾರಿ ನಾಯಕನಾಗಿ ಮತ್ತು ಒಂದು ಬಾರಿ ಆಟಗಾರನಾಗಿ ವಿಶ್ವಕಪ್​ ಗೆದ್ದ ಸಾಧನೆ ಮಾಡಿದ್ದಾರೆ. 1996-2011ರ ತನಕದ ವಿಶ್ವಕಪ್ ಪಯಣದಲ್ಲಿ 46 ಪಂದ್ಯಗಳನ್ನು ಆಡಿ 28 ಕ್ಯಾಚ್​ ಪಡೆದಿದ್ದಾರೆ.

Exit mobile version