Site icon Vistara News

ICC Men’s T20I Team of the Year 2022: ಐಸಿಸಿ ವರ್ಷದ ಟಿ20 ತಂಡದಲ್ಲಿ ಸ್ಥಾನ ಪಡೆದ ಟೀಮ್​ ಇಂಡಿಯಾದ ಮೂವರು ಕ್ರಿಕೆಟಿಗರು

ICC Men's T20I Team of the Year 2022

ದುಬೈ: 2022ರ ಅತ್ಯುತ್ತಮ ಟಿ20 ತಂಡವನ್ನು ಐಸಿಸಿ ಸೋಮವಾರ ಪ್ರಕಟಿಸಿದೆ. (ICC Mens T20I Team of the Year 2022) ಈ ತಂಡದಲ್ಲಿ ಟೀಮ್​ ಇಂಡಿಯಾದ ಮೂರು ಆಟಗಾರರಿಗೆ ಸ್ಥಾನ ನೀಡಿದೆ. ಐಸಿಸಿ ವರ್ಷದ ಟಿ20 ತಂಡದಲ್ಲಿ ಭಾರತ ತಂಡದ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಂಡದ ನಾಯನಾಗಿ ಇಂಗ್ಲೆಂಡ್​ ತಂಡದ ಜಾಸ್​ ಬಟ್ಲರ್​ ಆಯ್ಕೆಯಾಗಿದ್ದಾರೆ.

ಕಳೆದ ವರ್ಷ ಚುಟುಕು ಮಾದರಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಾರಣ ವಿರಾಟ್ ಕೊಹ್ಲಿ, ಸೂರ್ಯಕುಮಾರ್​ ಯಾದವ್​ ಮತ್ತು ಹಾರ್ದಿಕ್​ ಪಾಂಡ್ಯ ಐಸಿಸಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೊಹ್ಲಿ ಕಳೆದ ವರ್ಷ ನಡೆದ ಏಷ್ಯಾ ಕಪ್​ ಹಾಗೂ ಟಿ20 ವಿಶ್ವ ಕಪ್​ ಟೂರ್ನಿಯಲ್ಲಿ ಅತ್ಯತ್ತಮ ಪ್ರದರ್ಶನ ತೋರಿದ್ದರು. ಇನ್ನು ಸೂರ್ಯ ಕುಮಾರ್​ ಕ್ಯಾಲೆಂಡರ್​ ವರ್ಷದಲ್ಲಿ ಅತ್ಯಧಿಕ ಟಿ20 ರನ್​ ಗಳಿಸಿದ ಸಾಧಕನಾಗಿ ಮೂಡಿಬಂದಿದ್ದರು. ಜತೆಗೆ ಪ್ರಸ್ತುತ ಟಿ20 ಬ್ಯಾಟರ್​ ಶ್ರೇಯಾಂಕದಲ್ಲಿ ಅವರು ನಂ.1 ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಐಸಿಸಿ ವರ್ಷದ ಅತ್ಯುತ್ತಮ ಟಿ20 ತಂಡ

ಜಾಸ್​ ಬಟ್ಲರ್‌ (ನಾಯಕ- ಇಂಗ್ಲೆಂಡ್), ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ), ವಿರಾಟ್ ಕೊಹ್ಲಿ (ಭಾರತ), ಸೂರ್ಯಕುಮಾರ್ ಯಾದವ್ (ಭಾರತ), ಗ್ಲೆನ್ ಫಿಲಿಪ್ಸ್ (ನ್ಯೂಜಿಲ್ಯಾಂಡ್​), ಸಿಕಂದರ್ ರಾಜಾ (ಜಿಂಬಾಬ್ವೆ), ಹಾರ್ದಿಕ್ ಪಾಂಡ್ಯ (ಭಾರತ), ಸ್ಯಾಮ್ ಕರನ್ (ಇಂಗ್ಲೆಂಡ್), ವನಿಂದು ಹಸರಂಗ (ಶ್ರೀಲಂಕಾ), ಹ್ಯಾರಿಸ್ ರೌಫ್ (ಪಾಕಿಸ್ತಾನ), ಜೋಶ್ ಲಿಟಲ್ (ಐರ್ಲೆಂಡ್).

ಇದನ್ನೂ ಓದಿ | ICC ODI Ranking | ಐಸಿಸಿ ಬಿಡುಗಡೆ ಮಾಡಿರುವ ಏಕ ದಿನ ಕ್ರಿಕೆಟ್​ ಶ್ರೇಯಾಂಕ ಪಟ್ಟಿಯಲ್ಲಿರುವ ಅಗ್ರ ಐದು ಬೌಲರ್‌ಗಳು

Exit mobile version