ಮುಂಬಯಿ: ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 186 ರನ್ಗಳನ್ನು ಬಾರಿಸಿದ ಬಳಿಕ ಅವರ ಬಗ್ಗೆ ಚರ್ಚೆಗಳು ಶುರುವಾಗಿವೆ. ಅದರಲ್ಲೂ ಕ್ರಿಕೆಟ್ ಬಗೆಗಿನ ಅವರ ಬದ್ಧತೆ ಬಗ್ಗೆ ಹೆಚ್ಚು ಚರ್ಚೆಗಳಾಗುತ್ತಿವೆ. ಸತತವಾಗಿ ವೈಫಲ್ಯ ಎದುರಿಸಿದ್ದ ಅವರು ಎಲ್ಲವನ್ನು ಮೀರಿ ಮತ್ತೆ ಫಾರ್ಮ್ಗೆ ಮರಳಿದ ಬಗೆಯನ್ನು ವಿವರಿಸಲಾಗುತ್ತಿದೆ. ಟೀಮ್ ಇಂಡಿಯಾದ ವಿಕೆಟ್ಕೀಪರ್ ಹಾಗೂ ಕ್ರಿಕೆಟ್ ವಿಶ್ಲೇಷಕ ದಿನೇಶ್ ಕಾರ್ತಿಕ್ ಕೂಡ ಕೊಹ್ಲಿಯ ಕ್ರಿಕೆಟ್ ಪ್ರೀತಿಯನ್ನು ಬಣ್ಣಿಸಿದ್ದಾರೆ. ಅಲ್ಲದೆ, ಕ್ರಿಕೆಟ್ಗಾಗಿ ಅವರು ಮಾಡಿದ ತ್ಯಾಗವನ್ನೂ ವಿವರಿಸಿದ್ದಾರೆ.
ವೃತ್ತಿಪರ ಕ್ರಿಕೆಟ್ಗೆ ಕಾಲಿಡುವ ಮೊದಲು ವಿರಾಟ್ ಕೊಹ್ಲಿ ತಿಂಡಿಪೋತ ಆಗಿದ್ದರು. ಇದ್ದ ಬದ್ದ ತಿಂಡಿಗಳನ್ನೆಲ್ಲವನ್ನೂ ಇಷ್ಟಪಡುತ್ತಿದ್ದರು. ಬೊಜ್ಜಿನಂಶ ಹೆಚ್ಚಿರುವ ಸ್ವೀಟ್ ಮತ್ತಿತ್ಯಾದಿ ಆಹಾರಗಳನ್ನು ಹುಡುಕಿಕೊಂಡು ಹೋಗಿ ತಿನ್ನುತ್ತಿದ್ದರು. ಅದರೆ ಕ್ರಿಕೆಟ್ಗಾಗಿ ಹಾಗೂ ಫಿಟ್ನೆಸ್ಗಾಗಿ ಅವರು ಸಂಪೂರ್ಣವಾಗಿ ತ್ಯಾಗ ಮಾಡಿದ್ದಾರೆ. 5ರಿಂದ10 ವರ್ಷಗಳ ಕಾಲ ಕ್ರಿಕೆಟ್ ಆಡುವಾಗ ಅದಕ್ಕೆ ಬೇಕಾದ ತ್ಯಾಗ ಮಾಡಲು ಸಿದ್ದ ಎಂಬುದಾಗಿ ಹೇಳಿದ್ದರು ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಇದನ್ನೂ ಓದಿ : WPL 2023 : ಆರ್ಸಿಬಿ ಮಹಿಳಾ ತಂಡದ ಕ್ಯಾಂಪ್ಗೆ ಭೇಟಿ ನೀಡಿ ಸಲಹೆ ಕೊಟ್ಟ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಫಿಟ್ನೆಸ್ ಹಾಗೂ ಜಿಮ್ ಸೆಷನ್ ಅನ್ನು ಯಾವತ್ತೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಅವರು ಪ್ರದರ್ಶನ ವೈಫಲ್ಯ ಎದುರಿಸಿದ್ದ ಸಮಯದಲ್ಲೂ ಅವರು ಜಿಮ್ ಹಾಗೂ ನೆಟ್ಪ್ರಾಕ್ಟೀಸ್ ಬಿಡುತ್ತಿರಲಿಲ್ಲ. ಹೀಗಾಗಿ ಅವರು ಯಾವತ್ತೂ ಫಿಟ್ನೆಸ್ ಕಳೆದುಕೊಳ್ಳುತ್ತಿರಲಿಲ್ಲ. ಅದರ ಪರಿಣಾಮವಾಗಿಯೇ ಅವರು ಬೇಗ ಫಾರ್ಮ್ ಕಂಡಿಕೊಂಡಿದ್ದಾರೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.