ಮುಂಬಯಿ : ಭಾರತ ಕ್ರಿಕೆಟ್ ತಂಡ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಆಡಲು ಸಜ್ಜಾಗುತ್ತಿದ್ದು, ಟಿ20 ವಿಶ್ವ ಕಪ್ಗೆ ತೆರಳುವ ಮೊದಲು ಆಟಗಾರರಿಗೆ ತಯಾರಿ ನಡೆಸಲು ಇದು ಉತ್ತಮ ಅವಕಾಶವಾಗಿದೆ. ಏತನ್ಮಧ್ಯೆ, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸರಣಿಗೂ ಮುನ್ನ ಹೊಸ ಹೇರ್ ಸ್ಟೈಲ್‌ನೊಂದಿಗೆ ಕಾಣಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ.
ವಿರಾಟ್ ಕೊಹ್ಲಿ ಹೊಸ ಹೇರ್ ಸ್ಟೈಲ್‌ನೊಂದಿಗೆ ಮಿಂಚುತ್ತಿರುವ ಚಿತ್ರವನ್ನು ಅವರ ಹೇರ್ ಸ್ಟೈಲಿಸ್ಟ್ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಲ್ಲದೆ, ಕೊಹ್ಲಿಗೆ ಈ ಹೇರ್‌ಸ್ಟೈನ್‌ಲಿಂದ ಅದೃಷ್ಟ ಒಲಿಯವುದೇ ಎಂಬುದಾಗಿ ಮಾತನಾಡುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸತತವಾಗಿ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ, ಏಷ್ಯಾ ಕಪ್ ಟೂರ್ನಿಯಲ್ಲಿ ಒಟ್ಟಾರೆ ೨೭೬ ರನ್ ಬಾರಿಸುವ ಮೂಲಕ ಫಾರ್ಮ್‌ಗೆ ಮರಳಿದ್ದರು. ಅದರಲ್ಲೂ ತಮ್ಮ ೭೧ನೇ ಅಂತಾರಾಷ್ಟ್ರೀಯ ಶತಕವನ್ನು ಪೂರೈಸಿದ್ದರು. ಈ ಮೂಲಕ ಅವರು ತಮ್ಮ ಎಲ್ಲ ಟೀಕಾಕಾರರಿಗೆ ಸಮರ್ಪಕ ಉತ್ತರ ಕೊಟ್ಟಿದ್ದರು.
ಭಾರತ ತಂಡದ ಮುಂದಿನ ಟಿ೨೦ ವಿಶ್ವ ಕಪ್ ಸವಾಲಿನದ್ದಾಗಿದ್ದು, 2011ರ ಬಳಿಕ ಯಾವುದೇ ಐಸಿಸಿ ಟ್ರೋಫಿ ಗೆಲ್ಲದೇ ನಿರಾಸೆ ಅನುಭವಿಸಿರುವ ಭಾರತ ತಂಡಕ್ಕೆ ಈ ಬಾರಿಯಾದರೂ ಪ್ರಶಸ್ತಿ ಗೆಲ್ಲುವ ಅವಕಾಶ ದೊರಕಿದೆ.
ಇದನ್ನೂ ಓದಿ | Virat Kohli | ಏಷ್ಯಾ ಕಪ್‌ನಲ್ಲಿ ಮಿಂಚಿದ ಬಳಿಕ ವಿರಾಟ್ ಕೊಹ್ಲಿ ಟಿ-20 ರ‍್ಯಾಂಕಿಂಗ್ ಎಷ್ಟು?