ಅಹಮದಾಬಾದ್: ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. ಅವರೀಗ ಭಾರತದ ನೆಲದಲ್ಲಿ 4000 ಟೆಸ್ಟ್ ರನ್ಗಳನ್ನು ಬಾರಿಸಿದ ಐದನೇ ಆಟಗಾರ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ (59) ಅರ್ಧ ಶತಕ ಬಾರಿಸಿ ಬ್ಯಾಟಿಂಗ್ ಮುಂದುವರಿಸಿರುವ ಅವರು ಹೊಸ ಮೈಲುಗಲ್ಲು ಸಾಧಿಸಿದ್ದಾರೆ.
ವಿರಾಟ್ ಕೊಹ್ಲಿ 50 ಪಂದ್ಯಗಳಲ್ಲಿ ಈ ಸಾಧನೆಮಾಡಿದ್ದಾರೆ. 58.82 ಸರಾಸರಿಯಂತೆ ಬ್ಯಾಟ್ ಬೀಸಿರುವ ಅವರು ಭಾರತ ತಂಡದ ಪರ ಟೆಸ್ಟ್ನಲ್ಲಿ ಅತಿ ಹೆಚ್ಚು ಸರಾಸರಿ ಹೊಂದಿರುವ ಆಟಗಾರ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ : IND VS AUS: ಅಭ್ಯಾಸ ಆರಂಭಿಸಿದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
ಸಚಿನ್ ತೆಂಡೂಲ್ಕರ್ ತವರು ನೆಲದಲ್ಲಿ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅವರು 94 ಪಂದ್ಯಗಳಲ್ಲಿ 7216 ರನ್ ಬಾರಿಸಿದ್ದಾರೆ. ಅವರು 52.67 ಸರಾಸರಿಯಂತೆ ಬ್ಯಾಟ್ ಮಾಡಿದ್ದಾರೆ. ರಾಹುಲ್ ದ್ರಾವಿಡ್ 70 ಪಂದ್ಯಗಳಲ್ಲಿ 5598 ರನ್ ಬಾರಿಸಿದ್ದಾರೆ. ದ್ರಾವಿಡ್ ಬ್ಯಾಟಿಂಗ್ ಸರಾಸರಿ 50.16. ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ 4656 ರನ್ ಬಾರಿಸಿದ್ದು, 52 ಪಂದ್ಯಗಳಲ್ಲಿ ಆಡಿದ್ದಾರೆ. ಅವರು 54.13 ಸರಾಸರಿಯಲ್ಲಿ ಆಡಿದ್ದಾರೆ.
ಚೇತೇಶ್ವರ್ ಪೂಜಾರ 51 ಪಂದ್ಯಗಳಲ್ಲಿ 3839 ರನ್ ಬಾರಿಸಿ ನಾಲ್ಕು ಸಾವಿರ ರನ್ಗಳ ಸಮೀಪದಲ್ಲಿದ್ದಾರೆ. ಅವರು 52. 58 ಸರಾಸರಿಯಂತೆ ಬ್ಯಾಟ್ ಮಾಡಿದ್ದಾರೆ. ಮಾಜಿ ಬ್ಯಾಟರ್ ವಿವಿಎಸ್ ಲಕ್ಷ್ಮಣ್ 3767 ರನ್ ಬಾರಿಸಿದ್ದಾರೆ. 57 ಪಂದ್ಯಗಳಲ್ಲಿ ಈ ರನ್ ಬಾರಿಸಿದ್ದು 51.60 ರನ್ ಬಾರಿಸಿದ್ದಾರೆ.