ದುಬೈ : ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat kohli)ಪಾಕಿಸ್ತಾನ ತಂಡದ ವಿರುದ್ಧ ಸೆಪ್ಟೆಂಬರ್ ೪ರಂದು ನಡೆದ ಏಷ್ಯಾ ಕಪ್‌ನ ಸೂಪರ್-೪ ಪಂದ್ಯದಲ್ಲಿ ಅರ್ಧ ಶತಕ ಬಾರಿಸುವ ಮೂಲಕ ಟಿ೨೦ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ೫೦ ಪ್ಲಸ್ ಸ್ಕೋರ್ ಬಾರಿಸಿದ ದಾಖಲೆ ಮಾಡಿದರು. ಅವರ ಹೆಸರಲ್ಲಿ ಈಗ ಒಟ್ಟು ೩೨ ಅರ್ಧ ಶತಕಗಳಿವೆ.
ಭಾನುವಾರ ನಡೆದ ಪಂದ್ಯವು ಅವರಿಗೆ ೧೦೨ನೇ ಪಂದ್ಯವಾಗಿದ್ದು, ಅದಲ್ಲಿ ಅವರು ೪೪ ಎಸೆತಗಳಲ್ಲಿ ೬೦ ರನ್ ಬಾರಿಸಿದ್ದರು. ಅದಕ್ಕಿಂತ ಮೊದಲು ೫೦ ರನ್ ಗಡಿ ತಲುಪಿದಾಗ ಹೆಚ್ಚು ಅರ್ಧ ಶತಕಗಳ ದಾಖಲೆಯನ್ನು ತಮ್ಮೆಸರಿಗೆ ಬರೆಸಿಕೊಂಡರು. ಭಾರತ ತಂಡದ ನಾಯಕ ರೋಹಿತ್ ಶರ್ಮ (೩೧ ಅರ್ಧ ಶತಕ) ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದ್ದಾರೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (೨೭ ಅರ್ಧ ಶತಕ) ಮೂರನ ಸ್ಥಾನ ಪಡೆದುಕೊಂಡಿದ್ದಾರೆ.
ಆಸ್ಟ್ರೇಲಿಯಾ ತಂಡ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (೨೩), ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ (೨೨), ಹಾಗೂ ಐರ್ಲೆಂಡ್‌ನ ಪಾಲ್ ಸ್ಟಿರ್ಲಿಂಗ್ (೨೧) ನಂತರದ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಈಗ ವಿರಾಟ್ ಕೊಹ್ಲಿ ೧೦೨ ಪಂದ್ಯಗಳಲ್ಲಿ ೩೪೬೨ ರನ್‌ಗಳನ್ನು ಬಾರಿಸಿದ್ದಾರೆ. ೫೦.೯೧ ಸರಾಸರಿ ಹಾಗೂ ೧೩೭.೧೦ ಸ್ಟ್ರೈಕ್‌ರೇಟ್‌ನಲ್ಲಿ ಅವರು ಬ್ಯಾಟ್ ಮಾಡಿದ್ದಾರೆ.
ಇದನ್ನೂ ಓದಿ | IND vs PAK | ಮೂರು ಸಿಕ್ಸರ್ ಬಾರಿಸಿದರೆ ವಿರಾಟ್ ಕೊಹ್ಲಿ ಹೆಸರಲ್ಲಿ ಹೊಸ ದಾಖಲೆ ಸೃಷ್ಟಿ