Site icon Vistara News

Virat Kohli: ನಾಯಿ ಮರಿಯೊಂದಿಗಿನ ಫೋಟೊ ಹಂಚಿಕೊಂಡ ವಿರಾಟ್​ ಕೊಹ್ಲಿ

Virat Kohli Is All Smiles As He Poses With A Dog In This Throwback Pic

Virat Kohli Is All Smiles As He Poses With A Dog In This Throwback Pic

ಮುಂಬಯಿ: ಟೀಮ್​ ಇಂಡಿಯಾ ಕ್ರಿಕೆಟಿಗ ವಿರಾಟ್​ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಏನೇ ಪೋಸ್ಟ್​​ ಮಾಡಿದರು ಅದು ಕೆಲವೇ ನಿಮಿಷಗಳಲ್ಲಿ ದಾಖಲೆಯ ವೀಕ್ಷಣೆ ಜತೆಗೆ ಎಲ್ಲಡೆ ವೈರಲ್​ ಆಗುತ್ತದೆ. ಇದೀಗ ಅವರು ನಾಯಿ ಮರಿಯೊಂದಿಗಿನ ಫೋಟೊವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊ ವೈರಲ್​ ಆಗಿದೆ.

ವಿರಾಟ್​ ಕೊಹ್ಲಿ ಮತ್ತು ತಮ್ಮ ಪತ್ನಿ ಅನುಷ್ಕಾ ಶರ್ಮಾ ಕಳೆದ ಶನಿವಾರ(ಮಾರ್ಚ್​ 4) ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಬಳಿಕ ಮಹಾಳೇಶ್ವರ ಜ್ಯೋತಿರ್ಲಿಂಗಕ್ಕೆ ನಡೆಯುವ ಭಸ್ಮ ಆರತಿಯಲ್ಲಿ ಕೊಹ್ಲಿ ಮತ್ತು ಅನುಷ್ಕಾ ಪಾಲ್ಗೊಂಡಿದ್ದರು. ಇದೇ ವೇಳೆ ಅವರು ದೇಗುಲದ ಹೊರ ಭಾಗದಲ್ಲಿ ಸಿಕ್ಕ ಪುಟ್ಟ ನಾಯಿ ಮರಿಯೊಂದಿಗೆ ಮುದ್ದಾಡಿದ್ದಾರೆ. ಕೊಹ್ಲಿ ಮಾತ್ರವಲ್ಲದೆ ಅನುಷ್ಕಾ ಶರ್ಮ ಕೂಡ ಈ ನಾಯಿ ಮರಿಯೊಂದಿಗೆ ಕೆಲ ಆಟವಾಡಿದ್ದಾರೆ. ನಾಯಿ ಮರಿಯೊಂದಿಗಿನ ಫೋಟೊವನ್ನು ಕೊಹ್ಲಿ ಮತ್ತು ಅನುಷ್ಕಾ ಇಬ್ಬರು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.

ಇದನ್ನೂ ಓದಿ Virat Kohli: ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟ ಅನುಷ್ಕಾ-ವಿರಾಟ್‌ ಕೊಹ್ಲಿ

ಸದ್ಯ ವಿರಾಟ್​ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯಕ್ಕೆ ಅಭ್ಯಾಸದಲ್ಲಿ ತೊಡಗಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಮಾರ್ಚ್​ 9 ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಸಾಕ್ಷಿಯಾಗಲಿದ್ದಾರೆ.

Exit mobile version