ದುಬೈ : ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat kohli) ಪಾಕಿಸ್ತಾನ ವಿರುದ್ಧ ವಿರಾಟ್ ದರ್ಶನ ನೀಡಿದ ಹಿನ್ನೆಲೆಯಲ್ಲಿ ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ಟಿ೨೦ Rank ಪಟ್ಟಿಯಲ್ಲಿ ಐದು ಸ್ಥಾನ ಬಡ್ತಿ ಪಡೆದುಕೊಂಡು ೯ನೇ ಸ್ಥಾನಕ್ಕೇರಿದ್ದಾರೆ. ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ ಅಜೇಯ ೮೨ ರನ್ ಬಾರಿಸಿ ಜಯದ ರೂವಾರಿ ಎನಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ರೇಟಿಂಗ್ಸ್ ಪಾಯಿಂಟ್ ಏಕಾಏಕಿ ಹೆಚ್ಚಳಗೊಂಡಿದ್ದು, ೧೦ರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಈಗ 635 ರೇಟಿಂಗ್ಸ್ ಅಂಕ ಪಡೆದುಕೊಂಡಿದ್ದಾರೆ. ವಿಶ್ವ ಕಪ್‌ನ ಇನ್ನುಳಿದ ಪಂದ್ಯಗಳಲ್ಲಿ ಅವರು ಇನ್ನಷ್ಟು ರನ್‌ಗಳನ್ನು ಕ್ರೋಡೀಕರಿಸಿದರೆ Rank ಪಟ್ಟಿಯಲ್ಲಿ ಇನ್ನಷ್ಟು ಬಡ್ತಿ ಪಡೆದುಕೊಳ್ಳುವ ಸಾಧ್ಯತೆಗಳಿವೆ.
ಭಾರತ ತಂಡದ ಇನ್ನೊಬ್ಬ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಮ್ಮ ಎರಡನೇ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅವರನ್ನು ನ್ಯೂಜಿಲೆಂಡ್‌ನ ಸ್ಟಾರ್ ಬ್ಯಾಟರ್ ಡೆವೋನ್ ಕಾನ್ವೆ ಹಿಂದಿಕ್ಕಿದ್ದಾರೆ. ಕಾನ್ವೆ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಕಪ್ ಪಂದ್ಯದಲ್ಲಿ ಅವರು ೫೮ ಎಸೆತಗಳಿಗೆ ೯೨ ರನ್ ಬಾರಿಸಿದ್ದರು.
ಭಾರತ ತಂಡದ ವಿರುದ್ಧ ಬ್ಯಾಟಿಂಗ್ ವೈಫಲ್ಯ ಕಂಡಿರುವ ಹೊರತಾಗಿಯೂ ಪಾಕಿಸ್ತಾನದ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಮೊದಲ ಸ್ಥಾನವನ್ನು ಕಾಪಾಡಿಕೊಂಡಿದ್ದಾರೆ. ಬಾಬರ್ ಅಜಮ್ ಹಾಗೂ ಏಡೆನ್ ಮಾರ್ಕ್ರಮ್ ಅವರು ೪ ಹಾಗೂ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ | Virat Kohli | ಟಿ20 ಕ್ರಿಕೆಟ್ನಿಂದ ವಿರಾಟ್ ಕೊಹ್ಲಿ ನಿವೃತ್ತಿ ಹೊಂದಲಿ, ಪಾಕ್ ವೇಗಿ ಅಖ್ತರ್ ಹೀಗೆ ಹೇಳಿದ್ದು ಯಾಕೆ?