ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಅವರಿಗೆ ಜೂನ್ 20 ವಿಶೇಷ ದಿನವಾಗಿದೆ. ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ(test cricket) ಪದಾರ್ಪಣೆ(Test debut) ಮಾಡಿ ಇಂದಿಗೆ 12 ವರ್ಷಗಳು ತುಂಬಿದೆ. 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡುವ ಮೂಲಕ ಕೊಹ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ಕೊಹ್ಲಿ ಇದುವರೆಗೆ 109 ಟೆಸ್ಟ್ ಪಂದ್ಯವಾಡಿದ್ದು 8,479 ರನ್ ಬಾರಿಸಿದ್ದಾರೆ. ಇದರಲ್ಲಿ 28 ಶತಕ, 7 ದ್ವಿಶತಕ, 28 ಅರ್ಧಶತಕ ಒಳಗೊಂಡಿದೆ. 254 ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಆಕದಿನ ಕ್ರಿಕೆಟ್ನಲ್ಲಿಯೂ ಉತ್ತಮ ಸಾಧನೆ ಮಾಡಿರುವ ಅವರು 46 ಶತಕ ಬಾರಿಸಿದ್ದಾರೆ. ಟೆಸ್ಟ್ನಲ್ಲಿ ನಾಯಕನಾಗಿ ಒಟ್ಟು 40 ಗೆಲುವು ಸಂಪಾದಿಸಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಭಾರತಕ್ಕೆ ಮೊದಲ ಸರಣಿ ಗೆಲುವು ದಾಖಲಿಸಿಕೊಟ್ಟ ನಾಯಕ ಎಂಬ ಹಿರಿಮೆಯೂ ಅವರದ್ದಾಗಿದೆ.
ಸದ್ಯ ಕೊಹ್ಲಿ ವಿಂಡೀಸ್ ವಿರುದ್ಧದ ಸರಣಿಗೆ ಭರ್ಜರಿ ತಾಲೀಮು ನಡೆಸುತ್ತಿದ್ದಾರೆ. ಜಿಮ್ನಲ್ಲಿ ಕಠಿಣ ವರ್ಕ್‌ಔಟ್ ಮಾಡುತ್ತಿರುವ ವಿಡಿಯೊವನ್ನು ಸೋಮವಾರ ಹಂಚಿಕೊಂಡಿದ್ದರು. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಸೋಲು ಕಂಡ ಕಾರಣ ಸದ್ಯ ಬಿಸಿಸಿಐ ಯುವ ಆಟಗಾರರಿಗೆ ಅವಕಾಶ ನೀಡುವತ್ತ ಯೋಜನೆಯೊಂದನ್ನು ರೂಪಿಸಿದೆ. ಹೀಗಾಗಿ ವಿಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕೊಹ್ಲಿಗೆ ಅವಕಾಶ ಸಿಗುವುದಯ ಅನುಮಾನ ಎನ್ನಲಾಗಿದೆ. ಇವರ ಜತೆಗೆ ಪೂಜಾರ, ರೋಹಿತ್, ಉಮೇಶ್ ಯಾದವ್ ಸೇರಿ ಅನೇಕ ಹಿರಿಯ ಆಟಗಾರರಿಗೂ ಕೋಕ್ ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ Virat And Tamanna: ತಮನ್ನಾ ಜತೆ ಕೊಹ್ಲಿ ಡೇಟಿಂಗ್!; ತುಟಿ ಬಿಚ್ಚಿದ ನಟಿ
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಏರ್ಪಡಲಿದೆ. ಹೆಚ್ಚುವರಿಯಾಗಿ 2 ಟಿ20 ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಾಗುವುದು. ವಿಂಡೀಸ್ಗೆ ಪ್ರವಾಸಗೈಯಲಿರುವ ಭಾರತ ತಂಡ ಮೊದಲು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಪಂದ್ಯಗಳ ತಾಣ ರೊಸೇಯು (ಜು. 12-16) ಮತ್ತು ಪೋರ್ಟ್ ಆಫ್ ಸ್ಪೇನ್ (ಜು. 20-24). ಪೋರ್ಟ್ ಆಫ್ ಸ್ಪೇನ್‌ನ “ಕ್ವೀನ್ಸ್‌ಪಾರ್ಕ್ ಓವಲ್’ನಲ್ಲಿ ನಡೆಯುವ 100ನೇ ಟೆಸ್ಟ್ ಪಂದ್ಯ ಇದಾಗಿದೆ.