Site icon Vistara News

Virat Kohli: ಸಚಿನ್ ವಿಶ್ವ​ ದಾಖಲೆ ಮುರಿಯಲು ಸಜ್ಜಾದ ಕಿಂಗ್​ ಕೊಹ್ಲಿ

Virat Kohli

ಬಾರ್ಬಡೋಸ್​: ಈಗಾಗಲೇ ಕ್ರಿಕೆಟ್​ ದೇವರು ಎಂದು ಕರೆಯಲ್ಪಡುವ ಸಚಿನ್​ ತೆಂಡೂಲ್ಕರ್(sachin tendulkar)​ ಅವರ ಹಲವು ದಾಖಲೆಗಳನ್ನು ಮುರಿದಿರುವ ವಿರಾಟ್​ ಕೊಹ್ಲಿ(Virat Kohli) ಇದೀಗ ಮತ್ತೊಂದು ವಿಶ್ವ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ವಿಂಡೀಸ್(IND vs WI 1st Odi)​ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ 102 ರನ್​ ಬಾರಿಸಿದರೆ ಸಚಿನ್​ ಅವರ ದಾಖಲೆಯೊಂದು ಪತನಗೊಳ್ಳಲಿದೆ.

ಭಾರತ ಮತ್ತು ವಿಂಡೀಸ್​ ನಡುವಿನ ಮೊದಲ ಏಕದಿನ ಪಂದ್ಯ ಗುರುವಾರ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್​ ಸ್ಟೇಡಿಯಂ(Kensington Oval, Bridgetown, Barbados)ನಲ್ಲಿ ನಡೆಯಲಿದೆ. ಈ ಪಂದ್ಯ ಭಾರತೀಯ ಕಾಲಮಾನದಂತೆ ಸಂಜೆ 7 ಗಂಟೆಗೆ ಆರಂಭವಾಗಲಿದೆ. ವಿರಾಟ್​ ಕೊಹ್ಲಿ ಅವರು 102 ರನ್​ ಬಾರಿಸಿದರೆ ಏಕದಿನ ಮಾದರಿಯಲ್ಲಿ 13 ಸಾವಿರ ರನ್​ ಪೂರ್ತಿಗೊಳಿಸಲಿದ್ದಾರೆ. ಇದೇ ವೇಳೆ ಸಚಿನ್​ ಅವರ ಹೆಸರಿನಲ್ಲಿದ ದಾಖಲೆ ಮುರಿಯಲಿದ್ದಾರೆ.

ಕೊಹ್ಲಿ 102 ರನ್​ ಬಾರಿಸಿದರೆ ಅತಿ ಕಡಿಮೆ ಏಕದಿನ ಪಂದ್ಯಗಳಲ್ಲಿ 13 ಸಾವಿರ ರನ್​ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಸಚಿನ್​ ಅವರ ದಾಖಲೆ ಮುರಿಯಲಿದ್ದಾರೆ. ಸಚಿನ್​ ಅವರು 321 ಪಂದ್ಯಗಳನ್ನು ಆಡುವ ಮೂಲಕ ಈ ದಾಖಲೆ ಬರೆದಿದ್ದರು. ಸದ್ಯ 274 ಏಕದಿನ ಪಂದ್ಯ ಆಡಿರುವ ಕೊಹ್ಲಿಗೆ ಈ ಸರಣಿಯಲ್ಲಿ ಸಚಿನ್​ ದಾಖಲೆ ಮುರಿಯಬಹುದಾಗಿದೆ.

ದ್ವಿತೀಯ ಟೆಸ್ಟ್​ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕವೂ ವಿರಾಟ್​ ಅನೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದರು. 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಬಾರಿಸಿದ ದಾಖಲೆ ಮಾಡಿದ್ದರು. ಒಟ್ಟಾರೆ 76 ಅಂತಾರಾಷ್ಟ್ರೀಯ ಶತಕ ಬಾರಿಸಿರುವ ಕೊಹ್ಲಿ ಅತಿ ಹೆಚ್ಚು ಶತಕ ಬಾರಿಸಿದ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಚಿನ್ 100 ಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.

ಸಂಭಾವ್ಯ ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ,ಯಜುವೇಂದ್ರ ಚಾಹಲ್ ಮೊಹಮ್ಮದ್ ಶಮಿ. ಮೊಹಮ್ಮದ್​ ಸಿರಾಜ್, ಉಮ್ರಾನ್ ಮಲಿಕ್/ಶಾರ್ದೂಲ್ ಠಾಕೂರ್.

ಇದನ್ನೂ ಓದಿ Ind vs wi : ಟೆಸ್ಟ್​ ಸರಣಿಯಲ್ಲಿ ಮ್ಯಾನ್​ ಆಫ್​ ದಿ ಸೀರಿಸ್ ಪ್ರಶಸ್ತಿಯೇ ಕೊಟ್ಟಿಲ್ಲ!

ವೆಸ್ಟ್​ ಇಂಡೀಸ್​: ಶೈ ಹೋಪ್‌ (ನಾಯಕ), ರೋವ್‌ಮನ್ ಪೊವೆಲ್ (ಉಪನಾಯಕ),ಕೈಲ್ ಮೇಯರ್ಸ್, ಅಲಿಕ್ ಅಥಾನಾಜೆ, ಶಿಮ್ರಾನ್‌ ಹೆಟ್‌ಮೇರ್‌, ಅಲ್ಜಾರಿ ಜೋಸೆಫ್, ರೊಮಾರಿಯೋ ಶೆಫರ್ಡ್, ಕೆವಿನ್​ ಸಿಂಕ್ಲರ್​, ಒಶಾನೆ ಥೋಮಸ್, ಬ್ರ್ಯಾಂಡನ್ ಕಿಂಗ್.

Exit mobile version