ಇಂದೋರ್: ಅಫಘಾನಿಸ್ತಾನ(India vs Afghanistan, 2nd T20I) ವಿರುದ್ಧ ನಾಳೆ(ಭಾನುವಾರ, ಜ.14) ಇಂದೋರ್ನಲ್ಲಿ ನಡೆಯುವ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಮೂರು ದಾಖಲೆಗಳನ್ನು ನಿರ್ಮಿಸುವ ಇರಾದೆಯಲ್ಲಿದ್ದಾರೆ.
ಗೇಲ್-ವಾರ್ನರ್ ಜತೆ ಎಲೇಟ್ ಪಟ್ಟಿ ಸೇರುವ ಅವಕಾಶ
14 ತಿಂಗಳ ಬಳಿಕ ಭಾರತ ಪರ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಲಿರುವ ಕೊಹ್ಲಿ, ಅರ್ಧಶತಕ ಬಾರಿಸಿದರೆ ಟಿ20 ಕ್ರಿಕೆಟ್ನಲ್ಲಿ ಟಿ20 ಕ್ರಿಕೆಟ್ನಲ್ಲಿ 100 ಬಾರಿ 50+ ಸ್ಕೋರ್ಗಳಿಸಿದ ವಿಶ್ವದ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ದಾಖಲೆ ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ, ಯುನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 110 ಬಾರಿ ಈ ಸಾಧನೆ ಮಾಡಿದ್ದಾರೆ. ಗೇಲ್ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಕಾಣಿಸಿಕೊಂಡಿದ್ದಾರೆ. ವಾರ್ನರ್ 107 ಬಾರಿ 50+ ಸ್ಕೋರ್ಗಳಿದ್ದಾರೆ.
ಇದನ್ನೂ ಓದಿ IND vs AFG 2nd T20: ಹೋಳ್ಕರ್ ಸ್ಟೇಡಿಯಂನ ಪಿಚ್ ರಿಪೋರ್ಟ್, ಟಿ20 ದಾಖಲೆ ಹೇಗಿದೆ?
12 ಸಾವಿರ ರನ್ ಸಾಧನೆ
ವಿರಾಟ್ ಕೊಹ್ಲಿ ದ್ವಿತೀಯ ಟಿ20 ಪಂದ್ಯದಲ್ಲಿ ಕೇವಲ 35 ರನ್ ಗಳಿಸಿದರೆ ಟಿ20 ಕ್ರಿಕೆಟ್ನಲ್ಲಿ 12 ಸಾವಿರ ರನ್ಗಳನ್ನು ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಹಾಗೂ ವಿಶ್ವದ 4ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಸದ್ಯ ಕೊಹ್ಲಿ 11965* ರನ್ ಗಳಿಸಿದ್ದಾರೆ. ಇದರಲ್ಲಿ 4008 ರನ್ ಅಂತಾರಾಷ್ಟ್ರೀಯ ಟಿ20ಯಲ್ಲಿ ದಾಖಲಾಗಿದೆ. ಉಳಿದ ರನ್ ಐಪಿಎಲ್ನಲ್ಲಿ ಗಳಿಸಿದ್ದಾಗಿದೆ.
ಎಸೆತದಲ್ಲಿಯೂ ದಾಖಲೆ…
ಎಸೆತಗಳನ್ನು ಎದುರಿಸುವ ಮೂಲಕವೂ ದಾಖಲೆ ಬರೆಯಲಿದ್ದಾರೆ ವಿರಾಟ್ ಕೊಹ್ಲಿ. ಇಂದೋರ್ನಲ್ಲಿ ನಡೆಯುವ ದ್ವಿತೀಯ ಟಿ20 ಪಂದ್ಯದಲ್ಲಿ ಕೊಹ್ಲಿ 28 ಎಸೆತಗಳನ್ನು ಎದುರಿಸಿದರೆ ಟಿ20ಯಲ್ಲಿ 9 ಸಾವಿರ ಎಸೆತಗಳನ್ನು ಎದುರಿಸಿದ ವಿಶ್ವದ 3ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. 14 ತಿಂಗಳ ಬಳಿಕ ಟಿ20 ಆಡುವ ಕೊಹ್ಲಿಗೆ ಮೂರು ದಾಖಲೆ ನಿರ್ಮಿಸುವ ಅವಕಾಶವಿದೆ.
ಇಂದೋರ್ ಪಂದ್ಯಕ್ಕಾಗಿ ಮುಂಬೈನಿಂದ ವಿರಾಟ್ ಕೊಹ್ಲಿ ಕಪ್ಪು ಬಣ್ಣ ಮರ್ಸಿಡಿಸ್-ಬೆನ್ಜ್ ಕಾರಿನಲ್ಲಿ ಬಂದು ವಿಮಾನ ನಿಲ್ದಾಣಕ್ಕೆ ತೆರಳುವ ವಿಡಿಯೊವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಕಿಂಗ್ ಈಸ್ ಬ್ಯಾಕ್’”, ಈ ಗಾಂಭೀರ್ಯ ನಡಿಗೆ ನೋಡಲು ಎಷ್ಟು ಚಂದ ಎಂದು ಕಮೆಂಟ್ ಮಾಡಿದ್ದಾರೆ.
King Kohli on his way to Indore.
— Mufaddal Vohra (@mufaddal_vohra) January 13, 2024
– The GOAT returns tomorrow…!!! 🐐pic.twitter.com/CQFQvpp5i8
ವಿರಾಟ್ ಕೊಹ್ಲಿ ಆಗಮನದಿಂದ ತಂಡದ ಆಡುವ ಬಳಗದಲ್ಲಿ ಬದಲಾವಣೆ ಖಚಿತ. ಕೊಹ್ಲಿ ಕ್ರಮಾಂಕದಲ್ಲಿ ಮೊದಲ ಪಂದ್ಯ ಆಡಿದ್ದ ತಿಲಕ್ ವರ್ಮ ಅವರನ್ನು ದ್ವಿತೀಯ ಪಂದ್ಯದಿಂದ ಕೈಬಿಡಲಾಗುತ್ತದೆ. ಬೌಲಿಂಗ್ ವಿಭಾಗದಲ್ಲಿಯೂ ಕೆಲ ಮಹತ್ವದ ಬದಲಾವಣೆ ನಿರೀಕ್ಷೆ ಮಾಡಲಾಗಿದೆ. ಮೊದಲ ಪಂದ್ಯದಲ್ಲಿ ದುಬಾರಿಯಾಗಿ ಕಂಡುಬಂದ ರವಿ ಬಿಷ್ಣೋಯಿ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಹೊರಗಿರಿಸಿ ಅವರ ಬದಲು ಕುಲ್ದೀಪ್ ಮತ್ತು ಅವೇಶ್ ಖಾನ್ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಉಳಿದಂತೆ ಯಾವುದೇ ಬದಲಾವಣೆ ಸಂಭವಿಸುದು ಅನುಮಾನ.