Site icon Vistara News

Virat Kohli: ಒಂದೇ ಎಸೆತದಲ್ಲಿ 14 ರನ್​ ಬಾರಿಸಿದ ಕಿಂಗ್​ ಕೊಹ್ಲಿ!

PLAYER OF THE MATCH Virat Kohli

ಪುಣೆ: ಗುರುವಾರ ನಡೆದ ವಿಶ್ವಕಪ್​ನ(icc world cup 2023) ಬಾಂಗ್ಲಾದೇಶ(India vs Bangladesh) ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(Virat Kohli) ಅವರು ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಒಂದೇ ಎಸೆತದಲ್ಲಿ 14 ರನ್​ ಚಚ್ಚಿ ಗಮನಸೆಳೆದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬಾಂಗ್ಲಾದ ಯುವ ಬೌಲರ್ ಹಸನ್ ಮಹಮೂದ್ ಅವರು ಎಸೆತ 13ನೇ ಓವರ್​ನ ನಾಲ್ಕನೇ ಎಸೆತದಲ್ಲಿ ರೋಹಿತ್ ಶರ್ಮಾ ಔಟಾದರು. ಈ ವೇಳೆ ಬ್ಯಾಟಿಂಗ್​ ನಡೆಸಲು ಬಂದ ಕೊಹ್ಲಿ 5ನೇ ಎಸೆತದಲ್ಲಿ 2 ರನ್​ ಕಸಿದರು. ಆದರೆ ಇದು ನೋ ಬಾಲ್ ಆಗಿತ್ತು. ಫ್ರೀ ಹಿಟ್​ನಲ್ಲಿ ಕೊಹ್ಲಿ ಬೌಂಡರಿ ಬಾರಿಸಿದರು. ಅಚ್ಚರಿ ಎಂದರೆ ಫ್ರೀ ಹಿಟ್​ ಕೂಡ ನೋ ಬಾಲ್​ ಆಯಿತು. ಮತ್ತೆ ಕೊಹ್ಲಿಗೆ ಫ್ರೀ ಹಿಟ್​ ದೊರಕಿತು. ಇದನ್ನು ಸಿಕ್ಸರ್​ಗೆ ಅಟ್ಟಿದ ಕೊಹ್ಲಿ ಒಂದೇ ಎಸೆತದಲ್ಲಿ 14 ರನ್​ ಬಾರಿಸಿದರು.

ಇದನ್ನೂ ಓದಿ IND vs BAN: ಕೊಹ್ಲಿಗೆ ಶತಕ ಬಾರಿಸಲು ಒಪ್ಪಿಸಿದ್ದೇ ರಾಹುಲ್​; ಪಂದ್ಯದ ಬಳಿಕ ರಿವೀಲ್

​​ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ನಡೆಸಿದ ವಿರಾಟ್​ ಅವರು 97 ಎಸೆತಗಳಿಂದ 6 ಬೌಂಡರಿ ಮತ್ತು 4 ಸಿಕ್ಸರ್​ ನೆರವಿನಿಂದ ಅಜೇಯ 103 ರನ್​ ಬಾರಿಸಿದರು. ಗೆಲುವಿಗೆ ಮೂರು ರನ್​ ಬೇಕಿದ್ದಾಗ ಕೊಹ್ಲಿ ಸಿಕ್ಸರ್​ ಬಾರಿಸಿ ತಂಡಕ್ಕೆ ಗೆಲುವಿನ ಜತೆಗೆ ತಮ್ಮ ಶತಕವನ್ನೂ ಪೂರ್ತಿಗೊಳಿಸಿದರು. ಈ ಮೂಲಕ ಏಕದಿನ ಕ್ರಿಕೆಟ್​ ಬಾಳ್ವೆಯಲ್ಲಿ 48ನೇ ಶತಕ ಬಾರಿಸಿದರು. ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿ ಅವರು ಬಾರಿಸಿದ ಮೂರನೇ ಶತಕ ಇದಾಗಿದೆ. ಸಾರಸ್ಯವೆಂದರೆ ಎರಡು ಶತಕ ಬಾಂಗ್ಲಾ ವಿರುದ್ಧವೇ ದಾಖಲಾಗಿದೆ. 2011ರ ವಿಶ್ವಕಪ್​ನಲ್ಲಿ ಕೊಹ್ಲಿ ಬಾಂಗ್ಲಾ ವಿರುದ್ಧ ಶತಕ ಸಿಡಿಸಿದ್ದರು.

ವಿಶ್ವ ದಾಖಲೆ ಬರೆದ ಕೊಹ್ಲಿ

ಕೊಹ್ಲಿ ಅವರು ಶತಕ ಬಾರಿಸಿ ಮಿಂಚಿದ ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 26 ಸಾವಿರ ರನ್ ಪೂರೈಸಿದರು. ಈ ಮೂಲಕ ಅತಿ ವೇಗವಾಗಿ 26000 ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್​ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಈ ಹಿಂದೆ ಈ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ ಅವರು 601 ಇನಿಂಗ್ಸ್​ಗಳಲ್ಲಿ ಈ ದಾಖಲೆ ನಿರ್ಮಿಸಿದ್ದರು. ಆದರೆ ಕೊಹ್ಲಿ ಕೇವಲ 577 ಇನಿಂಗ್ಸ್​ಗಳ ಮೂಲಕ ಈ ದಾಖಲೆಯನ್ನು ಮೀರಿ ನಿಂತಿದ್ದಾರೆ.

ಇದನ್ನೂ ಓದಿ Virat Kohli: ಸಚಿನ್ ದಾಖಲೆ ಮುರಿದು ವಿಶ್ವ ದಾಖಲೆ ಬರೆದ ವಿರಾಟ್​ ಕೊಹ್ಲಿ

ಪಂದ್ಯ ಗೆದ್ದ ಭಾರತ

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಶನ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾದೇಶ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 256 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ 41.3 ಓವರ್​​ಗಳಲ್ಲಿ ಮೂರು ವಿಕೆಟ್​ಗೆ 261 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಕಿವೀಸ್​ ಮುಂದಿನ ಎದುರಾಳಿ

ಭಾರತ ಮುಂದಿನ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲ್ಯಾಂಡ್​ ತಂಡದ ಸವಾಲು ಎದುರಿಸಲಿದೆ. ಕಿವೀಸ್​ ಕೂಡ ಅಜೇಯ ನಾಲ್ಕು ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಉಭಯ ತಂಡಗಳ ಈ ಪಂದ್ಯ ಅಕ್ಟೋಬರ್​ 22ರಂದು ಧರ್ಮಶಾಲದಲ್ಲಿ ನಡೆಯಲಿದೆ.

Exit mobile version