Site icon Vistara News

Virat Kohli: ಸಿಕ್ಸರ್​ ಮೂಲಕ ದಾಖಲೆ ಬರೆಯಲು ಸಜ್ಜಾದ ಕಿಂಗ್​ ಕೊಹ್ಲಿ

Virat Kohli

ಮುಂಬಯಿ: ಈ ಬಾರಿಯ ಐಪಿಎಲ್(IPL 2024)​ ಟೂರ್ನಿಯಲ್ಲಿ ಗರಿಷ್ಠ ರನ್​ ಗಳಿಸಿರುವ ಆರ್​ಸಿಬಿ(Royal Challengers Bengaluru) ತಂಡದ ಆಟಗಾರ ವಿರಾಟ್​ ಕೊಹ್ಲಿ ಇಂದು ನಡೆಯುವ ಮುಂಬೈ ಇಂಡಿಯನ್ಸ್​(Mumbai Indians) ವಿರುದ್ಧದ ಪಂದ್ಯದಲ್ಲಿ ಸಿಕ್ಸರ್​ ಮೂಲಕ ದಾಖಲೆಯೊಂದನ್ನು ಬರೆಯಲು ಎದುರು ನೋಡುತ್ತಿದ್ದಾರೆ. ದಾಖಲೆ ಬರೆಯಲು ಅವರಿಗೆ​ ಬೇಕಿರುವುದು ಕೇಲವ 4 ಸಿಕ್ಸರ್​ಗಳು.

ಹೌದು, ಕೊಹ್ಲಿ ಇಂದಿನ ಪಂದ್ಯದಲ್ಲಿ ನಾಲ್ಕು ಸಿಕ್ಸರ್​ ಸಿಡಿಸಿದರೆ ಐಪಿಎಲ್​ನಲ್ಲಿ 250 ಸಿಕ್ಸರ್ ಪೂರ್ತಿಗೊಳಿಸಲಿದ್ದಾರೆ. ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎಂಬ ಹಿರಿಮೆಗೂ ಪಾತ್ರರಾಗಲಿದ್ದಾರೆ. ಐಪಿಎಲ್​ನಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ದಾಖಲೆ ಆರ್​ಸಿಬಿಯ ಮಾಜಿ ಆಟಗಾರ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್​ 357 ಸಿಕ್ಸರ್ ಸಿಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಮಾಜಿ ರೋಹಿತ್ ಶರ್ಮಾ 264 ಸಿಕ್ಸರ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ 6 ಸಿಕ್ಸರ್​ ಬಾರಿಸಿದರೆ ತನ್ನ ನೆಚ್ಚಿನ ಗೆಳೆಯ, ಆರ್​ಸಿಬಿಯ ಮಾಜಿ ಆಟಗಾರನೂ ಆಗಿರುವ ಎಬಿಡಿ ವಿಲಿಯರ್ಸ್​ ಅವರ ದಾಖಲೆಯನ್ನು ಮುರಿಯಲಿದ್ದಾರೆ. ವಿಲಿಯರ್ಸ್​ 251 ಸಿಕ್ಸರ್​ ಬಾರಿಸಿದ್ದಾರೆ. ಮುಂಬೈ ವಿರುದ್ಧ ಇದು ಸಾಧ್ಯವಾಗದಿದ್ದರೂ ಕೂಡ ಈ ಬಾರಿಯ ಟೂರ್ನಿಯಲ್ಲಿ ಕೊಹ್ಲಿ ಈ ದಾಖಲೆಯನ್ನು ಮುರಿಯುವುದಂತು ಖಂಡಿತ. ಕೊಹ್ಲಿ ಆಡಿದ 5 ಪಂದ್ಯಗಳಿಂದ 316* ರನ್​ ಗಳಿಸಿ ಆರೆಂಜ್​ ಕ್ಯಾಪ್​ ಪಡೆದಿದ್ದಾರೆ.

ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಟಾಪ್​ 5 ಆಟಗಾರರು


ಕ್ರಿಸ್​ ಗೇಲ್​-357 ಸಿಕ್ಸರ್​

ರೋಹಿತ್​ ಶರ್ಮ-264 ಸಿಕ್ಸರ್​

ಎಬಿಡಿ ವಿಲಿಯರ್ಸ್​-251 ಸಿಕ್ಸರ್​

ವಿರಾಟ್​ ಕೊಹ್ಲಿ-246 ಸಿಕ್ಸರ್​

ಮಹೇಂದ್ರ ಸಿಂಗ್​ ಧೋನಿ-242 ಸಿಕ್ಸರ್​

ವಿರಾಟ್ ಕೊಹ್ಲಿಯ ಆಮೆಗತಿಯ ಬ್ಯಾಟಿಂಗ್​ ನಿಂದಾಗಿಯೇ ಆರ್​ಸಿಬಿ ದೊಡ್ಡ ಮೊತ್ತಕ್ಕೆ ಹಿನ್ನಡೆಯಾಗುತ್ತಿದೆ ಎಂದು ಸ್ವತಃ ಆರ್​ಸಿಬಿ ಅಭಿಮಾನಿಗಳೇ ಟೀಕೆ ವ್ಯಕ್ತಮಾಡುತ್ತಿದ್ದಾರೆ. ಇವರ ಈ ನಿಧಾನ ಗತಿಯ ಬ್ಯಾಟಿಂಗ್​ನಿಂದ ಸ್ಲಾಗ್​ ಓವರ್​ಗಳಲ್ಲಿ ಹೊಡಿ-ಬಡಿ ಆಟಗಾರರಿಗೆ ಹೆಚ್ಚು ಎಸೆತಗಳು ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ IPL 2024: ಸೋಲಿನ ಆಘಾತದ ಮಧ್ಯೆ ಸಂಜುಗೆ ಬಿತ್ತು 12 ಲಕ್ಷ ರೂ. ದಂಡ

ಗೆಲುವಿನ ನಿರೀಕ್ಷೆಯಲ್ಲಿ ಆರ್​ಸಿಬಿ

ಇಂದು ನಡೆಯುವ ಐಪಿಎಲ್​ನ(IPL 2024) 25ನೇ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್(RCB vs MI)​ ಮುಂಬೈ ಇಂಡಿಯನ್ಸ್​(Mumbai Indians) ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಆರ್​ಸಿಬಿ ತನ್ನ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ಮಾಡುವುದು ಖಚಿತವಾಗಿದೆ. ಎಲ್ಲ 5 ಪಂದ್ಯಗಳಲ್ಲಿಯೂ ಘೋರ ಬ್ಯಾಟಿಂಗ್​ ವೈಫಲ್ಯ ಕಂಡ ಆಸ್ಟ್ರೇಲಿಯಾದ ಆಟಗಾರರಾದ ಕ್ಯಾಮೆರೂನ್​ ಗ್ರೀನ್​ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್​ಗೆ ಈ ಪಂದ್ಯಕ್ಕೆ ಕೊಕ್​ ನೀಡುವುದು ಬಹುತೇಕ ಖಚಿತ. ಇವರ ಬದಲು 25 ವರ್ಷದ ಸ್ಟಾರ್​ ಆಲ್​ರೌಂಡರ್​ ವಿಲ್ ಜ್ಯಾಕ್ಸ್ ಮತ್ತು  ನ್ಯೂಜಿಲ್ಯಾಂಡ್​ನ ಲಾಕಿ ಫರ್ಗ್ಯುಸನ್​ ಕಣಕ್ಕಿಳಿಯಬಹುದು. ರಜತ್​ ಪಾಟಿದಾರ್​ ಸ್ಥಾನದಲ್ಲಿ ಅನುಜ್​ ರಾವುತ್​ ಆಡಬಹುದು.

Exit mobile version